Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಲ್ಲದ ಜೊತೆಗೆ ಜೇನು ಸೇರಿಸಿ ತಿನ್ನುವುದರಿಂದ ಚಳಿಗಾಲದಲ್ಲಿ ಆರೋಗ್ಯವಾಗಿರಬಹುದು..!

Facebook
Twitter
Telegram
WhatsApp

ಚಳಿಗಾಲ ಬಂತು ಅಂದ್ರೆ ಸಾಕು ಹಲವಾರು ಕಾಯಿಲೆಗಳು ಶುರುವಾಗಿ ಬಿಡುತ್ತವೆ. ಅದರಲ್ಲೂ ನೆಗಡಿ, ಕೆಮ್ಮು, ಚಳಿ ಜ್ವರ ಕಾಮನ್ ಆಗಿ ಕಾಣಿಸುತ್ತವೆ. ಎಷ್ಟೇ ಕೇರ್ ಫುಲ್ ಆಗಿದ್ದರೂನು ಕಾಯಿಲೆಗಳ ಆಗಮನಕ್ಕೆ ದೇಹ ಒಗ್ಗಿ ಬಿಡುತ್ತದೆ. ಆದರೆ ಚಳಿಗಾಲದ ಕಾಯಿಲೆಗಳಿಂದ ದೂರ ಇರುವುದಕ್ಕೆ ನಮಗೆ ನಾವೇ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳಬೇಕು. ಅಡುಗೆ ಮನೆಯಲ್ಲಿ ಇರುವ ಪದಾರ್ಥಗಳ ಜೊತೆಗೆ ಸ್ವಲ್ಪ ಜೇನು ಸೇರಿಸಿದರೆ ಸಾಕು ಆರೋಗ್ಯ ನಿಮ್ಮ ಕೈನಲ್ಲೇ ಇರುತ್ತದೆ.

ಬೆಲ್ಲದ ಜೊತೆ ಜೇನು ತುಪ್ಪ ಮಿಕ್ಸ್ ಮಾಡಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮಾತ್ರವಲ್ಲದೆ ಜೇನು ತುಪ್ಪ ಮತ್ತು ಬೆಲ್ಲದಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ದೈಹಿಕ ಸದೃಢತೆಯನ್ನು ಉತ್ತಮಗೊಳಿಸುವುದರ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ವನ್ನು ಹೆಚ್ಚಿಸುತ್ತದೆ.ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ಇವುಗಳನ್ನು ಸೇವಿಸುವುದರಿಂದ ಒತ್ತಡ ಕೂಡ ಸಾಕಷ್ಟು ಕಡಿಮೆಯಾಗುತ್ತದೆ.​

ತುಳಸಿ ಮತ್ತು ಬೆಲ್ಲವನ್ನು ಬಳಸಿ ಚಹಾ ತಯಾರು ಮಾಡಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ರಕ್ತ ಶುದ್ಧೀಕರಣವಾಗುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳು ದೂರ ವಾಗುತ್ತವೆ. ತುಳಸಿ ಔಷಧೀಯ ಗುಣಗಳನ್ನು ಒಳಗೊಂಡಿರುವುದರಿಂದ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಬೆಲ್ಲವನ್ನು ನೀವು ಚಳಿಗಾಲದಲ್ಲಿ ಸೇವಿಸಲು ಬಯಸುವ ಬಹುತೇಕ ಸಿಹಿ ಪದಾರ್ಥಗಳಲ್ಲಿ ಕೂಡ ಬಳಸಬಹುದು. ವಿವಿಧ ಬಗೆಯ ಪಾನೀಯಗಳಲ್ಲಿ ಬೆಲ್ಲವನ್ನು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ.

ಇದರಲ್ಲಿ ಅತ್ಯುತ್ತಮ ಪೌಷ್ಟಿಕಾಂಶಗಳು ಮತ್ತು ಆಂಟಿ ಆಕ್ಸಿ ಡೆಂಟ್ ಅಂಶಗಳು ಇರುವುದರಿಂದ ಮುಖ್ಯವಾಗಿ ಕಬ್ಬಿಣದ ಅಂಶ ನಮ್ಮ ದೇಹ ಸೇರುವುದ್ರಿಂದ ನಮ್ಮ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ದೂರವಾ ಗುತ್ತದೆ ಮತ್ತು ರಕ್ತ ಶುದ್ಧೀಕರಣವಾಗುತ್ತದೆ.

ಬಾದಾಮಿಯು ಸ್ವಭಾವತಃ ಬಿಸಿಯಾಗಿದ್ದು ದೇಹಕ್ಕೆ ಉಷ್ಣತೆಯನ್ನು ನೀಡುತ್ತವೆ. ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು, ಫೈಬರ್, ವಿಟಮಿನ್ಗಳು ಮತ್ತು ಖನಿಜಗಳು ಇತ್ಯಾದಿಗಳು ಬಾದಾಮಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇವೆಲ್ಲವೂ ಸೇರಿಕೊಂಡು ಮತ್ತು ಶೀತದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

 

ಪಿಸ್ತಾದ ಬೆ​ಚ್ಚಗಿನ ಸ್ವಭಾವವು ಚಳಿಗಾಲದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಾಗಿಸುತ್ತದೆ. ಪಿಸ್ತಾದಲ್ಲಿ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಬಿ 6, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

ಪಾಕ್ ಜಿಂದಾಬಾದ್ ಎಂದವನಿಗೆ ನಾವೇ ಗುಂಡಿಟ್ಟು ಸಾಯಿಸುತ್ತೇವೆ : ಸಚಿವ ಜಮೀರ್

ರಾಯಚೂರು: ಪಾಕಿಸ್ತಾನ ಘೋಷಣೆ ಕೂಗುವವರನ್ನು ಗುಂಡಿಟ್ಟು ಕೊಲ್ಲಬೇಕು. ಟಿಶ್ಕ್ಯಾಂ ಟಿಶ್ಕ್ಯಾಂ ಟಿಶ್ಕ್ಯಾಂ ಅಂತ ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ಭರ್ಜರಿ ಪ್ರಚಾರ

error: Content is protected !!