ಇಂದು ಎಲ್ಲರ ಚಿತ್ತ ವಿನಯ್ ಕುಲಕರ್ಣಿ ಅವರ ಕೇಸ್ ನತ್ತ ನೆಟ್ಟಿತ್ತು. ಯೋಗೀಶ್ ಗೌಡ ಕೊ** ಕೇಸಲ್ಲಿ ತೀರ್ಪು ಏನಾಗಬಹುದು ಎಂಬ ಕುತೂಹಲ ಸಹಜವಾಗಿಯೇ ಇತ್ತು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪನ್ನ ನೀಡಿದ್ದು, 19 ಆರೋಪಿಗಳು ದೋಷಿ ಎಂದು ಆದೇಶ ಹೊರ ಬಿದ್ದಿದೆ. ವಿನಯ್ ಕುಲಕರ್ಣಿ ಅವರು ಅಪರಾಧಿ ಎಂದು ತೀರ್ಪು ನೀಡಿದೆ.
ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ತೀರ್ಪನ್ನ ಪ್ರಕಟಿಸಿದ್ದಾರೆ. 21 ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಿದ್ದರು. ಅದರಲ್ಲಿ ಇಬ್ಬರು ಸಾಕ್ಷಿಗಳಾಗಿದ್ದಾರೆ. ಈ ಸಂಬಂಧ ವಿನಯ್ ಕುಲಕರ್ಣಿ ಅವರಿಗೆ ಜೈಲು ಫಿಕ್ಸ್ ಆಗಿದೆ. ಹೊರಗಿದ್ದುಕೊಂಡೆ ವಿನಯ್ ಕುಲಕರ್ಣಿ ಜನರ ಮನಸ್ಸನ್ನ ಗೆದ್ದಿದ್ದರು, ಶಾಸಕರಾಗಿ ಆಯ್ಕೆ ಕೂಡ ಆಗಿದ್ದರು. ಈಗ ಅಪರಾಧಿ ಎಂದು ಸಾಬೀತಾಗಿದ್ದು, ಶಿಕ್ಷೆಗೂ ಗುರಿಯಾಗಿದ್ದಾರೆ. ಶಾಸಕ ಸ್ಥಾನದಿಂದಾನೂ ಅಮಾನತಾಗಬೇಕಾಗುತ್ತದೆ. ಕೇಸಲ್ಲಿ ಎಷ್ಟು ವರ್ಷ ಶಿಕ್ಷೆ ಎಂಬುದನ್ನ ನೋಡಬೇಕಿದೆ. ಎರಡು ವರ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆಯಾದರೆ ಶಾಸಕ ಸ್ಥಾನವೂ ಹೋಗಲಿದೆ.
ವಿನಯ್ ಕುಲಕರ್ಣಿ ಕಳೆದ ಫೆಬ್ರವರಿಯಲ್ಲಷ್ಟೇ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದರು. ಈಗ ಮತ್ತೆ ಜೈಲು ಪಾಲಾಗಿದ್ದಾರೆ. ನಾಳೆಯೂ ಈ ಕೇಸ್ ಸಂಬಂಧ ವಾದ ಪ್ರತಿವಾದ ನಡೆಸಲಿದೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಮಂಡನೆಯನ್ನು ಮಾಡಲಿದ್ದಾರೆ. 2016ರಲ್ಲಿ ನಡೆದ ಕೊಲೆ ಪ್ರಕರಣ ಇದಾಗಿತ್ತು. ಇಂದು ಆರೋಪಿಗಳನ್ನ ದೋಷಿ ಎಂದು ಕೋರ್ಟ್ ಸೂಚಿಸಿದೆ. ವಿನಯ್ ಕುಲಕರ್ಣಿ ಅವರಿಗೆ ಬಹಳಷ್ಟು ಆತ್ಮವಿಶ್ವಾಸವಿತ್ತು. ಇದರಿಂದ ಬಚಾವ್ ಆಗ್ತೇನೆ ಎಂಬ ಬಗ್ಗೆ ಮಾತನ್ನಾಡಿದ್ದರು. ಆದರೆ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.





















