Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪು : ವಿನಯ್ ಕುಲಕರ್ಣಿ ಹೇಳಿದ್ದೇನು..?

---Advertisement---

ಧಾರವಾಡ: ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ತೀರ್ಪು ಹೊರ ಬೀಳಲಿದೆ. ಮಧ್ಯಾಹ್ನದ ವೇಳೆಗೆ ಅಂತಿಮ ತೀರ್ಪು ಬರಲಿದೆ. 2016ರಲ್ಲಿ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಇವತ್ತು ನೀಡ್ತಾ ಇದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಜನರ ಭವಿಷ್ಯ ಇಂದು ತೀರ್ಮಾನವಾಗಲಿದೆ.

 

ಈ ತೀರ್ಪು ಏಪ್ರಿಲ್ 9ಕ್ಕೆ ಬರಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿದ್ದ ಕಾರಣಕ್ಕೆ ತೀರ್ಪನ್ನ ನ್ಯಾಯಾಲಯ ಮುಂದೂಡಿತ್ತು. ಶಿಕ್ಷೆನಾ, ಖುಲಾಸೆನಾ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮನೆ ಮಾಡಿದೆ. ಇಬ್ಬರು ಪುತ್ರಿಯರ ಜೊತೆಗೆ ವಿನಯ್ ಕುಲಕರ್ಣಿ ಅವರು ಕೋರ್ಟ್ ಕಡೆ ತೆರಳಿದ್ದಾರೆ. ಕೋರ್ಟ್ ನಲ್ಲಿ ನ್ಯಾಯ ಸಿಗುವ ಆತ್ಮವಿಶ್ವಾಸದಲ್ಲಿಯೇ ವಿನಯ್ ಕುಲಕರ್ಣಿ ಇದ್ದಾರೆ. ಅಂದು ಕೂಡ ಅದೇ ವಿಶ್ವಾಸದಲ್ಲಿದ್ದರು, ಇಂದು ಕೂಡ ಅದೇ ವಿಶ್ವಾಸದಲ್ಲಿದ್ದಾರೆ.

ನ್ಯಾಯಾಂಗದ ವ್ಯವಸ್ಥೆಯೊಳಗೆ ಯಾವುದೇ ತೀರ್ಪನ್ನು ಕೊಟ್ಟರು ಅದಕ್ಕೆ ತಲೆಬಾಗಬೇಕಾಗುತ್ತದೆ. ಆದರೆ ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ., ಗೌರವವಿದೆ. ನೋಡೋಣಾ ಇಂದು ಏನಾಗುತ್ತೆ ಅದನ್ನ ನೋಡೋಣಾ. ಕೇಸ್ ನ್ಯಾಯಾಲಯದಲ್ಲಿರುವಾಗ ಆ ಸಂಬಂಧ ಏನನ್ನು ಮಾತನ್ನಾಡಬಾರದು. ನೋಡೋಣಾ ತೀರ್ಪು ಬರಲಿ ಎಂದೇ ಹೇಳಿದ್ದಾರೆ.

ಈ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆದಿದೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ತೀರ್ಪು ನೀಡಲಿದೆ. ಏನೇ ಆತ್ಮವಿಶ್ವಾಸ ಇದ್ದರು ಕೂಡ ಆರೋಪಿಗಳಿಗೆ ಆತಂಕ ಎಂಬುದು ಕಾಡುತ್ತಿದೆ. ತೀರ್ಪು ಬರುವ ತನಕ ಯಾವುದೇ ತೀರ್ಮಾನಕ್ಕೆ ಅವರಿಗೂ ಬರುವುದಕ್ಕೆ ಆಗ್ತಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...