Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಯೋಗಾಚಾರ್ಯ ಚಿನ್ಮಯಾಂದ ಕೊಡುಗೆ ಅನನ್ಯ : ಗುರುಮೂರ್ತಿ ಶ್ಲಾಘನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಅಕ್ಟೋಬರ್. 21 : ಸದೃಢ ಹಾಗೂ ಸಮಸ್ಥಿತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದು ಸವಾಲಿನ ಸಂಗತಿ. ಇದನ್ನರಿತು ತಮ್ಮ ಜೀವನದ ಅರ್ಧ ಭಾಗವನ್ನು ಈ ಭಾಗದ ಸಾರ್ವಜನಿಕರಿಗಾಗಿ ಯೋಗವನ್ನು ಪರಿಚಯಿಸಿ ,ಅದನ್ನ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಿದರೆ ರೋಗಗಳು ದೇಹಕ್ಕೆ ಅಷ್ಟು ಸುಲಭವಾಗಿ ಅಂಟುವುದಿಲ್ಲ ಎನ್ನುವುದನ್ನ ಮನವರಿಕೆ ಮಾಡುತ್ತಾ ಬಂದಿರುವ ಯೋಗಾಚಾರ್ಯ ಎಲ್.ಎಸ್. ಚಿನ್ಮಯಾಂದ ಅವರ ಕೊಡುಗೆ ಅನನ್ಯವಾದದು ಎಂದು ಶಾರದಾ ಬ್ರಾಸ್‌ಬ್ಯಾಂಡ್‌ನ ಸಂಸ್ಥಾಪಕರು, ಬಸವೇಶ್ವರ ಪುನರ್ಜೋತಿ ಐ’ ಬ್ಯಾಂಕ್‌ನ ನಿರ್ದೇಶಕರಾದ ಎಸ್.ವಿ. ಗುರುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸೋಮವಾರ ಬೆಳಿಗ್ಗೆ ನಗರದ ರೋಟರಿ ಬಾಲ ಭವನದಲ್ಲಿ ಕಳೆದ ಎರಡೂವರೆ ಮೂರು ದಶಕಗಳಿಂದ ಯೋಗಭ್ಯಾಸ ಮಾಡಿಸುತ್ತಾ ಅದರೊಂದಿಗೆ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಯೋಗಾಚಾರ್ಯ ಚಿನ್ಮಯಾನಂದ ಅವರ ಅರವತ್ತನೆ ವರ್ಷದ ಜನ್ಮದಿನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ತರುವಾಯ ಯೋಗಾಸನ ಕ್ಷೇತ್ರದಲ್ಲಿ ಮತ್ತೆ ಆ ಹೆಸರನ್ನ ಉಳಿಸುವ ನಿಟ್ಟಿನಲ್ಲಿ ಚಿನ್ಮಯಾನಂದ ಅವರು ಶ್ರೀಗಳವರ ಶಿಷ್ಯರಾಗಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ. ಅದರೊಂದಿಗೆ ಸಮಾಜಕ್ಕೆ ಅಗತ್ಯ ಎನಿಸುವ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದು ಅವರಿಗೆ ಇಷ್ಟವಾದ ಕೆಲಸವೂ ಹೌದು ಎಂದು ಆಶಿಸಿದರು.

ರೋಟೇರಿಯನ್ ಟಿ. ವೀರಭದ್ರಸ್ವಾಮಿ ಮಾತನಾಡಿ ಶಿಸ್ತು, ಸಮಯಪಾಲನೆ ಮತ್ತು ಬದ್ಧತೆಗೆ ಮತ್ತೊಂದು ಹೆಸರು ಚಿನ್ಮಯಾನಂದ ಅವರು.ನಾವು ಅವರಿಂದ ಕಲಿಯುವುದು ಬಹಳವೇ ಇದೆ. ನಮ್ಮ ಆರೋಗ್ಯ ಸದೃಢವಾಗಿ ರಿಸಿಕೊಳ್ಳಲು ಯೋಗ ತರಬೇತಿ ಅವರಿಂದ ಪಡೆಯುವ ಮೂಲಕ ಅವರನ್ನ ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡೋಣ ಎಂದು ಸಲಹೆ ಮಾಡಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ಹುರುಳಿ ಎಂ. ಬಸವರಾಜ್ ಮಾತನಾಡಿ ತಾಯಿ ತಂದೆ ಹೊರತುಪಡಿಸಿದರೆ ನಂತರದ್ದು ಗುರುವಿನ ಸ್ಥಾನ.ಅವರು ನಮ್ಮ ಬದುಕಿನಲ್ಲಿ ಶ್ರೇಷ್ಠ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿರೆ. ಚಿನ್ಮಯಾನಂದ ಅವರು ಯೋಗದ ಬಗ್ಗೆ ಪ್ರಾಮಾಣಿಕವಾಗಿ ಜನರಿಗೆ ತಿಳಿಸುತ್ತಾ, ಜನ ಆರೋಗ್ಯದಿಂದ ಇರುವ ಬಗ್ಗೆ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಸರಳ, ಸದುವಿನಯದೊಂದಿಗೆ ತಮ್ಮ ಹೆಸರಿಗೆ ತಕ್ಕಂತೆ ಯೋಗದ ಮೂಲಕ ಆನಂದವನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ ಚಿನ್ಮಯಾಂದ ಅವರು. ಜನಪರ , ಪರೋಕಾರದ ಕೆಲಸಗಳು ಅವರಿಂದ ನಡೆದಿವೆ. ಅವರನ್ನು ನಾವು ಅನುಸರಿಸುವುದು ಬಹಳವೇ ಇದೆ ಎಂದು ಅಭಿಪ್ರಾಯ ಪಟ್ಟರು.

ಯೋಗಾಭ್ಯಾಸಿಗಳಾದ ಮಮತಾ ಮಾತನಾಡಿ ಯೋಗ ತರಗತಿಗಳಲ್ಲಿ ಲಿಂಗ ತಾರತಮ್ಯ ಎಣಿಸದೆ, ನಮ್ಮ ಬೆನ್ನು ತಟ್ಟಿ ಕಠಿಣ ಅಭ್ಯಾಸಗಳನ್ನು ತಿದ್ದುತ್ತಾ, ಸುಲಲಿತ ರೀತಿಯಲ್ಲಿ ಮಾಡಿಸುತ್ತಾ ಪ್ರೇರೇಪಿಸುತ್ತಾರೆ .ಅಂತಹವರು ನಮ್ಮೊಂದಿಗೆ ಇರುವುದೇ ಒಂದು ಸಂತಸದ ಸಂಗತಿ ಎಂದರು. ರೀನಾ ವೀರಭದ್ರಪ್ಪ ಮಾತನಾಡಿ ಯಾವುದೇ ಪ್ರತಿ ಫಲಾಪೇಕ್ಷೆ, ನಿರೀಕ್ಷೆ ಇಲ್ಲದೆ ಯೋಗವನ್ನು ಮಾರಾಟದ ಸರಕನ್ನಾಗಿಸದೆ ಅತ್ಯಂತ ಕಡಿಮೆ ದರವನ್ನು ಪಡೆದು ಯೋಗವನ್ನು ಕಲಿಸುವ, ಆ ಮೂಲಕ ಸದೃಢ ದೇಹ ಮತ್ತು ಮನವನ್ನು ಹೊಂದೋಣ ಎನ್ನುವ ಅವರ ಸಹೃದಯ ನಮಗೆ ಆನಂದ ತಂದಿದೆ. ಹಾಗೆಯೇ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರದ ವಿವಿಧ ಬಡಾವಣೆಗಳ ಯೋಗಾಸನ ತರಬೇತಿದಾರರು ಭಾಗವಹಿಸಿ ಅಭಿನಂದನೆ ಸಲ್ಲಿಸಿ ,ಶುಭ ಹಾರೈಸಿದರು. ಕೋಕಿಲ ಎಂ ಪ್ರಾರ್ಥಿಸಿದರೆ, ಯೋಗಾಭ್ಯಾಸಿ ಹಾಗೂ ಶಿಕ್ಷಕಿ ವಿಮಲಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಗರದ ಜೋಗಿಮಟ್ಟಿ ರಸ್ತೆಯ ಪಕ್ಕದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು .ಈ ಸಂದರ್ಭದಲ್ಲಿ ರೀನಾ ವೀರಭದ್ರಪ್ಪ, ನಿರ್ಮಲಾ ಸೇರಿದಂತೆ ಜನಪರ ಕಾಳಜಿಯ ಅನೇಕರು ಹಾಗೂ ಚಿನ್ಮಯಾನಂದರ ಅಭಿಮಾನಿಗಳು ಭಾಗವಹಿಸಿದ್ದರು.

ಚಿನ್ಮಯಾನಂದ ಅವರು ಅ. 6 ರಿಂದ 20ನೇ ತಾರೀಕಿನವರೆಗೂ ತಮ್ಮ ಮನೆಯ ಮಹಡಿಯ ಮೇಲೆ ಸುಮಾರು 20ರಿಂದ 30 ಜನರಿಗೆ ವಿವಿಧ ವಸ್ತುಗಳನ್ನು ಬಳಸಿ ಯೋಗಾಸನ ಮಾಡುವ ಯೋಗಾಭ್ಯಾಸವನ್ನ ಉಚಿತವಾಗಿ ನಡೆಸಿಕೊಟ್ಟರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...