ಯೋಗದಿಂದ ಮನಸ್ಸು ಹಗುರವಾಗುತ್ತದೆ : ಶಾಸಕಿ ಪೂರ್ಣಿಮಾ ಶ್ರೀನಿವಾಸ್

suddionenews
1 Min Read

ಚಳ್ಳಕೆರೆ, (ಅ.19) : ಯೋಗವು ಮನಸ್ಸಿಗೆ ಮತ್ತು ದೇಹಕ್ಕೆ ಬಹಳ ಮುಖ್ಯ, ಯೋಗ ಮಾಡುವುದರಿಂದ ದೇಹಕ್ಕೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ. ಮನಷ್ಯನಲ್ಲಿರುವ ಕೆಲವು ಒತ್ತಡಗಳು ಯೋಗ ಮಾಡುವುದರಿಂದ ದೂರವಾಗಿ, ಮನಸ್ಸು ಹಗುರವಾಗುತ್ತದೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ನಗರದ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಯೋಗ ಎನ್ನುವುದು ಈಗಿನ ಪೀಳಿಗೆಗೆ ಬಹಳ ಮುಖ್ಯವಾಗಿಬೇಕು. ಈಗಿನ ಜನರಲ್ಲಿ ದೇಹಕ್ಕೆ ಶ್ರಮದಾನ ಎನ್ನುವುದು ನೀಡುವುದಿಲ್ಲ. ಹಿಂದಿನ ಕಾಲದಲ್ಲಿ ಕೆಳಗಡೆ ಕುಳಿತು ಊಟ ಮಾಡುತ್ತಿದ್ದರು, ಕಾಳುಗಳನ್ನು ಬೀಸೋ ಕಲ್ಲಿನಲ್ಲಿ ಬೀಸುತ್ತಿದ್ದರು ಅದೇ ಅವರಿಗೆ ಯೋಗ ಮಾಡಿದಂತೆಯಾಗವುದು. ಆದರೆ ಈಗಿನ ಜೀವನ ಶೈಲಿ ಬದಲಾವಣೆಯಾದಂತೆ ಜನರ ಜೀವನವು ಬದಲಾಗಿದೆ. ಈಗ ನೆಲದ ಕುಳಿತುಕೊಳ್ಳುವುದಿಲ್ಲ. ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತಾರೆ. ಕಾಳುಗಳನ್ನು ಬೀಸಲ್ಲ ಇದರಿಂದ ಈಗಿನ ಪೀಳಿಗೆಗೆ ಯೋಗ ಅವಶ್ಯವಾಗಿಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊಸದುರ್ಗ ಕನಕಗುರುಪೀಠದ  ಈಶ್ವರಾನಂದ ಸ್ವಾಮೀಜಿಗಳ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ್ಯ ಸಂಚಾಲಕ ಜಿ. ಮಂಜುನಾಥಣ್ಣ,  ವೇದಾವತಿ ವಲಯ ಸಂಚಾಲಕ ಎ.ಕುಮಾರಣ್ಣ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *