Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಂಜಾರ ಸಮುದಾಯಕ್ಕೆ ಯಡಿಯೂರಪ್ಪರವರ ಕೊಡುಗೆ ಅಪಾರ : ಸತೀಶ್ ಕುಮಾರ್

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 06 :ಯಡಿಯೂರಪ್ಪರವರ ಮುಖ್ಯಮಂತ್ರಿಗಳಾಗಿದ್ದಾಗ ಬಂಜಾರ ಸಮುದಾಯವನ್ನು ಹಲವಾರು ರೀತಿಯಲ್ಲಿ ಅಭೀವೃದ್ದಿಯನ್ನು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮೇ. 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಅಭೀಮಾನೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಬಂಜಾರ ಸಮುದಾಯದ ಬಂಧುಗಳು ಸ್ವ ಪ್ರೇರಣೆಯಿಂದ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಬಂಜಾರ (ಲಂಬಾಣಿ) ಸಮಾಜದ ಜಿಲ್ಲಾ ಅಧ್ಯಕ್ಷರು ಎಂ ಸತೀಶ್ ಕುಮಾರ್ ಸಮುದಾಯದವರಿಗೆ ಕರೆ ನೀಡಿದರು.

ಚಿತ್ರದುರ್ಗದ ಬಂಜಾರ (ಲಂಬಾಣಿ) ಸಮಾಜದ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಡಿ ಯೂರಪ್ಪರವರು ರಾಜ್ಯದ ಮುಖ್ಯಮಂತ್ರಿ ಗಳಾಗಿದ್ದಾಗ ರಾಜ್ಯದ ಬಂಜಾರರ ಅಭಿವೃದ್ಧಿಗಾಗಿ ತಾಂಡ ಅಭೀವೃದ್ದಿ ನಿಗಮವನ್ನು ಸ್ಥಾಪನೆ ಮಾಡುವುದರ ಮೂಲಕ ತಾಂಡಗಳ ಅಭೀವೃದ್ದಿಯನ್ನು ಮಾಡಿದ್ದಾರೆ, ಹಾಗೂ ಜಿಲ್ಲಾ ತಾಲೂಕು ಹೋಬಳಿ ಗಳನ್ನು ಸೇವಾಲಾಲ್ ಭವನವನ್ನು ನಿರ್ಮಿಸಿದ್ದಾರೆ ಇದ್ದಲ್ಲದೆ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜನ್ಮಸ್ಥಳವಾದ  ಸೂರಗೊಂಡನಕೊಪ್ಪ ನಮ್ಮ ಸಮುದಾಯ ಸ್ಥಳದಲ್ಲಿ ವಿವಿಧ ರೀತಿಯ ಅಭೀವೃದ್ದಿ ಕಾರ್ಯವನ್ನು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಸಮುದಾಯಕ್ಕೆ ಇಷ್ಟೊಂದು ಕಾರ್ಯವನ್ನು ಮಾಡಿದಂತ ವ್ಯಕ್ತಿಯ ಅಭೀಮಾನೋತ್ಸವ ಕಾರ್ಯಕ್ರಮ ನಮ್ಮ ಊರಿನಲ್ಲಿ ನಡೆಯುತ್ತಿರುವಾಗ ಅದಕ್ಕೆ ಬೆಂಬಲವನ್ನು ವ್ಯಕ್ತಪಡಿಸುವುದರ ಜೊತೆಗೆ ಸ್ವಯಂ ಆಗಿ ಭಾಗವಹಿಸಬೇಕಿದೆ ಎಂದರು.

ಜನ ಸೇವೆಗಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದು ಸಹಾ ಹೋರಾಟವನ್ನು ಮಾಡಲಿಲ್ಲ, ಬಡವರ ಕಣ್ಣಿರನ್ನು ಒರೆಸುವ ಸಲುವಾಗಿ ಕೆಲಸವನ್ನು ಮಾಡಿದ್ದಾರೆ 50 ವರ್ಷ ಬಡವರ ಪರವಾಗಿ ಕೆಲಸವನ್ನು ಮಾಡಿದ್ದಾರೆ. ಯಡಿಯೂರಪ್ಪರವರೆಂದರೆ ರಾಜ್ಯದಲ್ಲಿ ಹೋರಾಟವನ್ನು ನಡೆಸುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಿಎಸ್.ವೈ ಎಂದರೆ ಹೋರಾಟ ಎಂಬ ಮನೋಭಾವ ಎಲ್ಲರಲ್ಲೂ ಸಹಾ ಮೂಡಿದೆ.  ಛಲಕ್ಕೆ ಮತ್ತೋಂದು ಹೆಸರೆ ಯಡೆಯೂರಪ್ಪ ಎನ್ನಬಹುದಾಗಿದೆ ಎಂದು ಎಂ ಸತೀಶ್ ಕುಮಾರ್ ತಿಳಿಸಿದರು.

ಬಂಜಾರ (ಲಂಬಾಣಿ) ಸಮಾಜದ ಜಿಲ್ಲಾ ಅಧ್ಯಕ್ಷರು ಎಂ ಸತೀಶ್ ಕುಮಾರ್ ಹೊಸದುರ್ಗ ತಾಲೂಕ ಅಧ್ಯಕ್ಷ ರಾದ ಪ್ರವೀಣ್‍ನಾಯಕ್, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿನಾಯಕ್, ಹೊಳಲ್ಕೆರೆಯ ಸದಸ್ಯ ಕಾಳ್ಯ ನಾಯಕ್, ಈರಾನಾಯಕ್, ಶೋಭಾ, ಆನಂದಪ್ಪ, ಪರಶುರಾಮ್, ಮಂಜನಾಯಕ್ ಇತರರು ಭಾಗವಹಿಸಿದ್ದರು

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...