ಮೈಸೂರು: ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ಭಾಗದಲ್ಲಿ ಆಕ್ಟೀವ್ ಆಗಿದ್ದಾರೆ. ಹೀಗಾಗಿಯೇ ಅಲ್ಲಿನ ರೈತರ ಸಮಸ್ಯೆಗಳನ್ನ ಕೇಳಲು ಇಂದು ತೆರಳಿದ್ದಾಗ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೋಪಗೊಂಡಿದ್ದಾರೆ. ಅಲ್ಲಿಯೇ ಫೋನ್ ಕರೆ ಮಾಡಿ, ಕ್ಲಾಸ್ ಕೂಡ ತೆಗೆದುಕೊಂಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ಹನುಮಪುರ ಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಸ್ಥಳಕ್ಕೆ ಹೋದಾಗ ಸಮಸ್ಯೆ ಕಣ್ಣಿಗೆ ಬಿದ್ದಿದೆ. ಅಲ್ಲಿನ ರೈತರು ಕೂಡ ಸಮಸ್ಯೆಯ ಬಗ್ಗೆ ಅಳಲನ್ನ ತೋಡಿಕೊಂಡಿದ್ದಾರೆ. ಆಗಲೇ ಅಧಿಕಾರಿಗಳಿಗೆ ಕರೆ ಮಾಡಿ, ಯತೀಂದ್ರ ಸಿದ್ದರಾಮಯ್ಯ ಅವರು ತರಾಟೆ ತೆಗೆದುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಆಗಾಗ ಜನಸಂಪರ್ಕ ಸಭೆ ನಡೆಯುತ್ತಲೇ ಇರುತ್ತದೆ. ಜನ ಸಂಪರ್ಕ ಸಭೆಯಲ್ಲಿ ಸುತ್ತಮುತ್ತಲ ಜನ ತಮಗಿರುವ ಸಮಸ್ಯೆಗಳನ್ನ ಹೊತ್ತು ಬರ್ತಾರೆ. ಕೆಲವೊಂದು ಸಲ ಅಲ್ಲೇ ಕ್ಲಿಯರ್ ಆಗುವಂತ ಸಮಸ್ಯೆಗಳನ್ನ ಅಲ್ಲಿಯೇ ಕ್ಲಿಯರ್ ಮಾಡ್ತಾರೆ. ಆಗದೆ ಇರುವುದನ್ನ ಅಧಿಕಾರಿಗಳಿಗೆ ಹೇಳಿ ಬಗೆ ಹರಿಸುವ ಪ್ರಯತ್ನ ಮಾಡ್ತಾರೆ. ಯತೀಂದ್ರ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುವಾಗಲೂ ಜನಸಂಪರ್ಕದ ವಿಚಾರವನ್ನೇ ತೆಗೆದಿದ್ದಾರೆ.
ಏನು ಆಟ ಆಡ್ತಾ ಇದ್ದೀರಾ..? ಸಿಎಂ ಕ್ಷೇತ್ರದಲ್ಲಿಯೇ ಹೀಗಾದ್ರೆ ಇನ್ನು ಬೇರೆ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡ್ತೀರಾ ನೀವೂ. ಜನ ಸಂಪರ್ಕ ಸಭೆಗಳನ್ನ ಸುಮ್ಮನೆ ಮಾಡ್ತಾರಾ ಎಂಬ ಮಾತನ್ನ ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಕಷ್ಟು ಸಲ ಅಧಿಕಾರಿಗಳು ಕೆಲಸಗಳನ್ನ ನಿರ್ಲಕ್ಷ್ಯ ಮಾಡ್ತಾರಾ. ಇದು ಎಷ್ಟೊ ರೈತರಿಗೂ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿನಿಂದ ರೈತರ ಸಮಸ್ಯೆ ಬಗೆಹರಿಯಬಹುದು.




















