Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಶ್ ತಾಯಿಯ ಹೊಸ ಪ್ರೊಡಕ್ಷನ್ ಹೌಸ್ : ಮಗ, ಸೊಸೆಗೆ ಸಿನಿಮಾ ಮಾಡಲ್ಲ ಅಂದಿದ್ಯಾಕೆ ಪುಷ್ಪ..?

---Advertisement---

ಬೆಂಗಳೂರು; ಕನ್ನಡ ಇಂಡಸ್ಟ್ರಿಗೆ ಹೊಸದೊಂದು ಬ್ಯಾನರ್ ಹುಟ್ಟಿಕೊಂಡಿದೆ. ಅದುವೇ PA ಪ್ರೊಡಕ್ಷನ್. ಪುಷ್ಪ ಅರುಣ್ ಕುಮಾರ್ ಬ್ಯಾನರ್ ಎಂಬುದು. ಈ ಬ್ಯಾನರ್ ಮೂಲಕ ಕೊತ್ತಲವಾಡ ಸಿನಿಮಾವನ್ನ ಮಾಡ್ತಾ ಇದಾರೆ. ಇದಕ್ಕೆ ಪೃಥ್ವಿ ಅಂಬಾರ್ ಹೀರೋ. ಹಿಸಬರಿಗೆ ಅವಕಾಶ ನೀಡುವ ಮೂಲಕ ಒಂದಷ್ಟು ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಇಂದು ಟೀಸರ್ ಲಾಂಚ್ ಆದ್ಮೇಲೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಮಾಧ್ಯಮದವರ ಜೊತೆಗೆ ಒಂದಷ್ಟು ಮಾತುಕತೆ ನಡೆಸಿದರು.

ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುಷ್ಪ ಅವರು, ಯಶ್ ಗಾಗಿ ಸಿನಿಮಾ ಮಾಡಲ್ಲ. ಹೊಸಬರಿಗೆ ಸಿನಿಮಾ ಮಾಡಬೇಕು ಅಂತ ಇರೋದು. ಯಾಕಂದ್ರೆ ಯಶ್ ತುಂಬಾ ಬೆಳೆದಿದ್ದಾರೆ. ನಾವಿನ್ನೂ ಈಗ ಶುರು ಮಾಡಿರೋ ಸಂಸ್ಥೆ ಇದು. ಹಾಗಾಗಿ ಮೊದಲು ನಾವೂ ಏನು ಅಂತ ತೋರಿಸೋಣಾ. ಈ ಮೊದಲೇ ಸಿನಿಮಾ ಪ್ರೊಡಕ್ಷನ್ ಶುರು ಮಾಡಬಹುದಿತ್ತು. ಆದರೆ ಆಗ ನಮ್ಮ ಬಳಿ ಅಷ್ಟೊಂದು ಹಣ ಇರಲಿಲ್ಲ. ಈಗ ಎಲ್ಲಾ ಜದೆ. ಹಾಗಾಗಿ ಸಿನಿಮಾ ನಿರ್ಮಾಣ ಮಾಡ್ತಾ ಇದ್ದೀವಿ. ನಮ್ಮ ಯಜಮಾನರು ಹಾಸನದಲ್ಲಿ ಕೃಷಿ ನೋಡಿಕೊಳ್ತಾರೆ‌. ಮನೆಯಲ್ಲಿ ಎಲ್ಲರೂ ಸಪೋರ್ಟ್ ಮಾಡ್ತಾರೆ ಎಂದರು.

ಸೊಸೆಗೋಸ್ಕರ ಸಿನಿಮಾ ಮಾಡ್ತೀರಾ ಎಂದಾಗ, ನನ್ನ ಸೊಸೆ ರಾಧಿಕಾ ಓಕೆ ಎಂದರೆ ನಾನು ಸಿನಿಮಾ ಮಾಡುವುದಕ್ಕೆ ರೆಡಿ ಇದ್ದೀನಿ. ನೀವೂ ಅವಳ ಕಾಲ್ ಶೀಟ್ ಕೊಡಿಸಿ ನಾನು ಮಾಡ್ತೀನಿ ಎಂದು ಹೇಳುವ ಮೂಲಕ ಸೊಸೆ ತುಂಬಾ ಬ್ಯುಸಿ ಅಂತಾ ಹೇಳಿದರು. ರಾಧಿಕಾ ಪಂಡಿತ್ ಮದುವೆಯಾಗಿ, ಮಕ್ಕಳಾದ ಮೇಲೆ ಅಪ್ಪಟ ಗೃಹಿಣಿಯಾಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment