Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ವೈ.ಟಿ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಗಂಗಾಧರ್ ಆಯ್ಕೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಜು.22) :  ಜಿಲ್ಲಾ ವಕೀಲರ ಅಧ್ಯಕ್ಷರಾಗಿ ನೂತನ ಅಧ್ಯಕ್ಷರಾಗಿ ವೈ.ಟಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಜಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ವಕೀಲರ ಸಂಘದ ಚುನಾವಣೆ  ವಕೀಲರ ಭವನದಲ್ಲಿ  ಶಾಂತಿಯುತವಾಗಿ ಜರುಗಿತು.  ಮಳೆಯ ನಡುವೆಯೂ ಶೇ 90 ರಷ್ಟು ಮತದಾನವಾಗಿದೆ. ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷರಾದ ಹೆಚ್. ಹನುಮಂತಪ್ಪ, ಕಾನೂನು ಪದವಿ ಪಡೆದಿರುವ ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಮಹಾಸ್ವಾಮೀಜಿ ಸೇರಿದಂತೆ ಅನೇಕ ಹಿರಿಯರು, ವಿಶೇಷ ಚೇತನರು ಮತಚಲಾಯಿಸಿದರು.  ಒಟ್ಟು 863 ಮತಗಳಿಗೆ 765 ಮತಚಲಾವಣೆಯಾಗಿದೆ.

ಚಿತ್ರದುರ್ಗ ಜಿಲ್ಲಾ ವಕೀಲರ ಅಧ್ಯಕ್ಷರಾಗಿ ನೂತನ ಅಧ್ಯಕ್ಷರಾಗಿ ವೈಟಿ ತಿಪ್ಪೇಸ್ವಾಮಿ (ವೈಟಿಎಸ್) ಅವರು 304 ಮತಗಳನ್ನು ಪಡೆದು ಜಯಶೀಲರಾದರು. ಕಣದಲ್ಲಿದ್ದ  ಕೆ.ಮಂಜುನಾಥ ರೆಡ್ಡಿ (ಕೆಎಂಆರ್) 262 ಮತಗಳನ್ನು, ಹೆಚ್.ಎಸ್. ಮಹೇಶ್ವರಪ್ಪ (ಹೆಚ್ ಎಸ್.ಎಂ.ಪಿ) 174 ಮತಗಳನ್ನು ಟಿ.ಚಂದ್ರಣ್ಣ 13 ಮತ್ತು ಟಿ. ಬೊಮ್ಮಯ್ಯ 18 ಮತಗಳನ್ನು ಪಡೆದಿದ್ದಾರೆ.

ಉಪಾಧ್ಯಕ್ಷರಾಗಿ ಜಿ.ಎಂ.ಅನಿಲ್ ಕುಮಾರ್ ಅವರು  399 ಮತಗಳನ್ನು ಪಡೆದು ಜಯಶೀಲರಾದರು.  ಕಣದಲ್ಲಿದ್ದ ಎಂ.ಕೆ.ಲೋಕೇಶ್ 228, ಕಿರಣ್ ಜೈನ್ 29, ಎಂ.ತಿಪ್ಪೇಸ್ವಾಮಿ 109, ಕಣದಿಂದ ಹಿಂದೆ ಸರಿದಿದ್ದ ಎಂ.ಸಿ.ನರಹರಿ 06 ಮತಗಳನ್ನು ಪಡೆದಿದ್ದಾರೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗಾಗಿ ನಾಲ್ವರು ಕಣದಲ್ಲಿದ್ದರು. ಆರ್. ಗಂಗಾಧರ್ 388 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಹಾಲಿ ಉಪಾಧ್ಯಕ್ಷರಾಗಿದ್ದ ಜಿ.ಸಿ. ದಯಾನಂದ್ 174, ಹೆಚ್. ಓ ಜಗದೀಶ್ 112, ಸಿ.ಎಸ್.ರವೀಂದ್ರ 77 ಮತಗಳನ್ನು ಪಡೆದಿದ್ದಾರೆ.

ಖಜಾಂಚಿ ಹುದ್ದೆಗೆ ಬಿ.ಇ. ಪ್ರದೀಪ್  535 ಮತಗಳನ್ನು ಪಡೆದು ಆಯ್ಕೆ ಯಾಗಿದ್ದಾರೆ. ಪ್ರತಿಸ್ಪರ್ಧಿಗಳು ಡಿ.ವೆಂಕಟೇಶ್  210 ಮತ ಪಡೆದಿದ್ದಾರೆ.

ಜಂಟಿ ಕಾರ್ಯದರ್ಶಿಯಾಗಿ ಗಿರೀಶ್ ಬಿ. ಮಲ್ಲಾಪುರ 354 ಮತಗಳನ್ನು ಪಡೆದು ಆಯ್ಕೆಯಾದರು. ಕಣದಲ್ಲಿದ್ದ ಆರ್. ಗೋಪಾಲ್  160, ಹೆಚ್. ಸೋಮಶೇಖರ್ ರೆಡ್ಡಿ   296. ಮತ ಪಡೆದಿದ್ದಾರೆ.

ಚುನಾವಣೆಗೂ ಮುನ್ನ ವಕೀಲರ ಸಂಘದ ಅಧ್ಯಕ್ಷರಾದ ಸಿ.ಶಿವುಯಾದವ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...