ಮನೆ ಕಟ್ಟಬೇಕು ಎಂಬುದು ಎಲ್ಲೆ ಕನಸು ಕೂಡ. ಅದಕ್ಕಾಗಿಯೇ ಸಾಕಷ್ಟು ವರ್ಷಗಳ ಕಾಲ ಹಣ ಉಳಿಸುತ್ತೀವಿ, ಕಷ್ಟ ಪಡುತ್ತೀವಿ. ಒದರ ಮಧ್ಯೆ ಇಷ್ಟದ ಮನೆ ಹೇಗಿರಬೇಕು ಎಂಬ ಕನಸು ಇರುತ್ತದೆ. ಕೆಲವರದ್ದು ಡ್ಯೂಪ್ಲೆಕ್ಸ್ ಮನೆಯ ಕನಸಾಗಿದ್ದರಿ, ಇನ್ನು ಹಲವರದ್ದು ತೋಟದಲ್ಲಿ ಮನೆ ಕಟ್ಟುವ ಕನಸು. ಹೀಗೆ ಅಂದ ಚಂದದ ಮನೆಯ ಕನಸಿದ್ದರೆ, ಇಲ್ಲೊಬ್ಬ ವ್ಯಕ್ತಿಗೆ ಟೈಟಾನಿಕ್ ಹಡಗಿನ ರೀತಿ ಮನೆ ಕಟ್ಟಬೇಕು ಎಂಬುದು ಆಸೆ. ಅದನ್ನ ಈಡೇರಿಸಿಕೊಂಡಿದ್ದಾನೆ.
ಈತನ ಹೆಸರು ಮಿಂಟು ಅಂತ. ಕೊಲ್ಕತ್ತಾ ನಿವಾಸಿ. ವೃತ್ತಿಯಲ್ಲಿ ರೈತನಾಗಿದ್ದಾನೆ. ಟೈಟಾನಿಕ್ ಹಡಗಿನ ರೀತಿಯಲ್ಲಿಯೇ ಮನೆ ಕಟ್ಟಬೇಕೆಂಬ ಕನಸು ಹೊತ್ತ ರೈತ, ಕಡೆಗೂ ತನ್ನ ಆಸೆ ಈಡೇರಿಸಿಕೊಂಡಿದ್ದಾರೆ. 2010ರಿಂದ ಈ ಮನೆಯನ್ನು ಕಟ್ಟುವ ಸಾಹಸಕ್ಕೆ ಕೈ ಹಾಕಿದ್ದರು. ತಾವೂ ದುಡಿದ ಹಣದಿಂದ ಶ್ರಮಪಟ್ಟು ಮನೆ ಕಟ್ಟುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಇನ್ನು ಕೂಡ ಪೂರ್ಣ ಆಗಿಲ್ಲ.
ತಮ್ಮ ಹೊಲದಲ್ಲಿ ಬಂದ ಬೆಳೆಯನ್ನು ಮಾರಿ, ಹಣ ಕೂಡಿಟ್ಟುಕೊಂಡು ಮನೆಯ ನಿರ್ಮಾಣ ಮಾಡುತ್ತಿದ್ದರು. ಅದರ ಜೊತೆಗೆ ಮೂರು ವರ್ಷಗಳ ಕಾಲ ನೇಪಾಳಕ್ಕೂ ಕೂಲಿಗಾಗಿ ಹೋಗಿದ್ದರು. ಮಿಂಟು ಅವರು ಈ ಮನೆಗೆ ತನ್ನ ತಾಯಿಯ ಹೆಸರನ್ನಿಡಲು ನಿರ್ಧರಿಸಿದ್ದಾರೆ. ಮುಂದಿನ ವರ್ಷದ ಸಮಯದಷ್ಟೊತ್ತಿಗೆ ಮನೆ ಸಂಪೂರ್ಣ ಮಾಡಲು ಮಿಂಟು ಮನಸ್ಸು ಮಾಡಿದ್ದಾರೆ.