Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸಿ : ಎಚ್.ಎಸ್.ಟಿ.ಸ್ವಾಮಿ ಮನವಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 :
ಗಣಪತಿಯ ಆಚರಣೆಯ ಸಂಪ್ರದಾಯಗಳನ್ನು ಎಲ್ಲರೂ ಒಟ್ಟಾಗಿ ವೈಜ್ಞಾನಿಕ, ವೈಚಾರಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಳಕಳಿಯಿಂದ ಆಚರಿಸೋಣ ಎಂದು ವಿಜ್ಞಾನ ಕಾರ್ಯಕರ್ತ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕಾ ಪ್ರಕಟಣೆಯನ್ನು ನೀಡಿರುವ ಅವರು ಪ್ರತಿವರ್ಷ ನಾವೆಲ್ಲರೂ ರಾಷ್ಟ್ರೀಯ ಭಾವೈಕ್ಯತೆ, ಪೌರಾಣಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ “ಗಣೇಶ ಚತುರ್ಥಿ”ಯನ್ನು ನಾಡಿನ ಎಲ್ಲಾ ಕಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಮೊದಮೊದಲು ನಮ್ಮ ಹಿರಿಯರು ಮಣ್ಣು, ಬೆಳ್ಳಿಯಿಂದ ಮಾಡಿದ ಗಣಪತಿ ಮೂರ್ತಿಗಳನ್ನು ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿ ನಂತರ ಬಾವಿ,ಕೆರೆ, ನದಿ ಮತ್ತು ಸಮುದ್ರದಲ್ಲಿ ವಿಸರ್ಜಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆಡಂಬರ, ಆಧುನಿಕತೆಯ ಹೆಸರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಗಣಪತಿ ಮೂರ್ತಿಗಳನ್ನು ತಯಾರಿಸಿ, ಆರೋಗ್ಯಕರವಲ್ಲದ ರಾಸಾಯನಿಕ ಬಣ್ಣ ಬಳಿದು ಮಾರಾಟ ಮಾಡಲಾಗುತ್ತದೆ.

ಅಂತಹ ಮೂರ್ತಿಗಳನ್ನು ತಂದು ಪೂಜಿಸಿ ಕುಡಿಯುವ ಜಲಚರ ಪ್ರಾಣಿಗಳಿರುವ ಬಾವಿ,ಕೆರೆ, ಹಳ್ಳ ಮತ್ತು ನದಿಗಳಲ್ಲಿ ವಿಸರ್ಜಿಸಲಾಗುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಎಂಬುದು ಬಿಳಿ ಪೌಡರ್ ರೂಪದ ಒಂದು ರಾಸಾಯನಿಕ ವಸ್ತು. ಇದು ನೀರಿನೊಂದಿಗೆ ಬೆರೆತು ಗಟ್ಟಿಯಾಗಿ ಮಾರ್ಪಟ್ಟು, ನೀರಿನಲ್ಲಿ ಇನ್ನೆಂದೂ ಕರಗದ ಸ್ಥಿತಿ ತಲುಪುತ್ತದೆ. ಮೂರ್ತಿಯ ಅಂದ ಹೆಚ್ಚಿಸಲು ಲೇಪಿಸಿದ ಬಣ್ಣಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಇಂತಹ ವಿಷವಸ್ತು ನೀರಿಗೆ ಹಾಕಿದಾಗ ಹೊರಬಂದು ಜಲಚರ ಪ್ರಾಣಿಗಳ ದೇಹ ಹೊಕ್ಕು ಪ್ರಾಣಕ್ಕೆ ಕಂಟಕ ತರುತ್ತದೆ.

ಆಚರಣೆಯನ್ನು ಆಡಂಬರಗೊಳಿಸಲು ವಿಪರೀತ ಮದ್ದು, ಪಟಾಕಿ ಸಿಡಿಸಲಾಗುತ್ತದೆ. ಇದರಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ ಉಂಟಾಗಿ ಪರಿಸರದ ಆರೋಗ್ಯ ಹದಗೆಡುವುದಲ್ಲದೆ, ಜೀವನಪೂರ್ತಿ ನೋವು ಅನುಭವಿಸುತ್ತಾರೆ. ಇದರಲ್ಲಿ ನಮ್ಮ ಚಿತ್ರದುರ್ಗ ಸೈನ್ಸ್ ಫೌಂಡೇಶನ್‍ನ ಕಾಳಜಿ ಏನೆಂದರೆ, ನಮ್ಮ ಗುರು – ಹಿರಿಯರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಎಲ್ಲರೂ ಒಟ್ಟಾಗಿ ವೈಜ್ಞಾನಿಕ, ವೈಚಾರಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಳಕಳಿಯಿಂದ ಆಚರಿಸೋಣ ಎಂದು ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪರಸ್ಪರ ಇಷ್ಟಪಟ್ಟವರು ಕಾರಣವಿಲ್ಲದೆ ದೂರ ಆಗಿದ್ದಾರೆ

ಈ ರಾಶಿಯ ಪರಸ್ಪರ ಇಷ್ಟಪಟ್ಟವರು ಕಾರಣವಿಲ್ಲದೆ ದೂರ ಆಗಿದ್ದಾರೆ, ಈ ರಾಶಿಯ ಗುತ್ತಿಗೆದಾರರಿಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಸಂತೋಷದ ದಿನ, ಗುರುವಾರ ರಾಶಿ ಭವಿಷ್ಯ -ಸೆಪ್ಟೆಂಬರ್-12,2024 ಸೂರ್ಯೋದಯ: 06:07, ಸೂರ್ಯಾಸ್ತ : 06:17

ಚಿತ್ರದುರ್ಗ | ಮರಕ್ಕೆ ಕಾರು ಡಿಕ್ಕಿಯಾಗಿ 2 ವರ್ಷದ ಮಗು ಸಾವು..!

    ವರದಿ ಮತ್ತು ಫೋಟೋ ಕೃಪೆ : ಸುರೇಶ್ ಬೆಳಗೆರೆ,    ಮೊ : 97398 75729 ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 11 : ಮರಕ್ಕೆ ಕಾರು ಡಿಕ್ಕಿಯಾಗಿ, 2 ವರ್ಷದ ಮಗು ಸಾವನ್ನಪ್ಪಿರುವ

ಖಾಸಗಿ ವಿಡಿಯೋ ಲೀಕ್ ಮಾಡುವುದಾಗೊ ಬೆದರಿಕೆ : ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು

    ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕವೇ ಖ್ಯಾತಿ ಪಡೆದಿದ್ದ ವರುಣ್ ಆರಾಧ್ಯ ಬಳಿಕ ಕಲರ್ಸ್ ಕನ್ನಡದ ಬೃಂದಾವನ ಸೀರಿಯಲ್ ನಲ್ಲಿ ಅವಕಾಶವನ್ನು ಪಡೆದಿದ್ದರು. ಅದಕ್ಕೂ ಮುನ್ನ ಸುಮಾರು ವರ್ಷಗಳಿಂದ ಪ್ರೀತಿ ಮಾಡಿದ್ದಂತ ವರ್ಷಾ

error: Content is protected !!