Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಿಳಾ ಮೀಸಲಾತಿ ಮಸೂದೆ ವಿವಾದ: ಕಾಂಗ್ರೆಸ್ ವಿರುದ್ಧ ಹನುಮಂತೇಗೌಡ ತೀವ್ರ ಟೀಕೆ

---Advertisement---

 

ಸುದ್ದಿಒನ್, ಚಿತ್ರದುರ್ಗ. ಏ.18 :
ಭಾರತದ ಸಮರ್ಥ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಮಾಡಿದ ಯಶಸ್ವಿ ಪ್ರಯತ್ನಕ್ಕೆ ಸೋಲಾಗಿದೆ. ಇದು ಮಹಿಳೆಯರಿಗೆ ಮಾಡಿದ ಅಪಮಾನವೇ ಹೊರತು ಇನ್ನೇನೂ ಅಲ್ಲ. ಕಾಂಗ್ರೆಸ್‍ನ ರಾಹುಲ್ ಗಾಂಧಿ ಮತ್ತು ಅವರ ಮಿತ್ರ ಪಕ್ಷಗಳದ್ದು ಮಹಿಳೆಯರ ವಿಚಾರದಲ್ಲಿ ಕೇವಲ ಮೊಸಳೆಕಣ್ಣೀರು ಮಾತ್ರ. ಅಭಿವೃದ್ಧಿಶೀಲ ರಾಷ್ಟ್ರದ ಪ್ರಯತ್ನದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಚಿಂತನೆಗೆ ಧಕ್ಕೆ ತಂದಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಮುಖಂಡ ಹನುಮಂತೇಗೌಡ ದೂರಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಅವಕಾಶ ನೀಡಿದ್ದರೆ ಅದನ್ನು ಸುವರ್ಣಾಕ್ಷರದಲ್ಲಿ ್ಲಬರೆದಿಡಬಹುದಿತ್ತು ಇದು ಕೇವಲ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಯತ್ನವಲ್ಲ ಎಲ್ಲ ಪಕ್ಷಗಳ ಪ್ರಯತ್ನ ಇದರ ಹಿಂದಿದೆ ಎಂದು ಬಿಂಬಿಸಬಹುದಿತ್ತು. ಆದರೆ, ನಿನ್ನೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮಹಿಳಾ ವಿರೋಧಿ ಧೋರಣೆ ಅನಾವರಣಗೊಂಡಿದೆ.ವಿಪಕ್ಷಗಳು ಮಹಿಳಾ ಮೀಸಲಾತಿಯನ್ನು ವಿರೋಧಿ ಸುತ್ತಿವೆ. ಪ್ರತಿ ಪಕ್ಷಗಳ ವಿರೋಧವು ಈ ಮಸೂದೆ ಅನುಷ್ಠಾನ ವಿರುದ್ಧವಲ್ಲ, ಬದಲಾಗಿ ಮಹಿಳಾ ಮೀಸಲಾತಿಯ ವಿರುದ್ಧವಾಗಿದೆ. ಮೂರು ಮಸೂದೆಗಳ ಉದ್ದೇಶ ಮಹಿಳಾ ಸಬಲೀಕರಣ.ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯ ಕಾರ್ಯವಿಧಾನಕ್ಕಿಂತ ಹೆಚ್ಚಾಗಿ ಅದರ ವಿಷಯವನ್ನು ವಿರೋಧಿಸಿವೆ. ಮಹಿಳಾ ಮೀಸಲಾತಿ ಪರ ಇದ್ದೇವೆ ಎನ್ನುತ್ತಿದ್ದ ವಿಪಕ್ಷಗಳು ಸಂಸತ್ತಿನಲ್ಲಿ ತಮ್ಮ ಅಸಲಿ ಚಿಂತನೆ ಏನೆಂಬುದನ್ನು ತೋರಿಸಿಕೊಟ್ಟಿವೆ ಎಂದು ಟೀಕಿಸಿದರು.

ನರೇಂದ್ರ ಮೋದಿಜೀ ಅವರು ಮಹಿಳಾ ಸಶಕ್ತೀಕರಣ ಜಾರಿ ಮಾಡಿ 2029 ರಲ್ಲಿ ಚುನಾವಣೆ ನಡೆಸುವುದು, ಒಬ್ಬ ವ್ಯಕ್ತಿ ಒಂದು ಮತ ಎಂಬ ಸಿದ್ಧಾಂತವನ್ನು ದೃಢಗೊಳಿಸುವ ಚಿಂತನೆ ಹೊಂದಿದ್ದರು. ನಾರಿ ಶಕ್ತಿಗೆ 2029ಕ್ಕಿಂತ ಮೊದಲು ಅವಕಾಶ ಕೊಡಲು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಿದ್ಧವಿಲ್ಲ ಎಂಬುದು ಸಾಬೀತಾಗಿದೆ. ಹಿಂದುಳಿದ ವರ್ಗದ ನಾಯಕ ಮೋದಿಜೀ ಅವರಿಗೆ ವಂಶಪಾರಂಪರ್ಯದಿಂದ ಪ್ರಧಾನಿ ಹುದ್ದೆ ಬಂದಿಲ್ಲ; ಅದನ್ನು ಮೂರನೇ ಬಾರಿ ಮತದಾರರು ನೀಡಿದ್ದಾರೆ. ಮೋದಿಯವರ ಸರಕಾರ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು ಒಬಿಸಿ ಗುರುತಿಸುವಿಕೆಯ ಅಧಿಕಾರವನ್ನು ರಾಜ್ಯಗಳಿಗೆ ನೀಡಿ ಅಧಿಕಾರ ಸಶಕ್ತೀಕರಣ ಮಾಡಿತ್ತು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಚುನಾವಣೆ ಗೆಲ್ಲುವುದೊಂದೇ ಏಕಮಾತ್ರಉದ್ದೇಶ. ಬಿಜೆಪಿಗೆ ರಾಷ್ಟ್ರ ನಿರ್ಮಾಣದ ಚಿಂತನೆ ಇದೆ ಎಂದರು.

ಕಾಂಗ್ರೆಸ್ ಪಕ್ಷವು ಸುಮಾರು ಆರೂವರೆ ದಶಕಗಳ ಕಾಲ ದೇಶದ ಆಡಳಿತದಲ್ಲಿ ಇದ್ದಾಗ ಒಬಿಸಿ ಸಮುದಾಯಕ್ಕೆ ಅನ್ಯಾಯ ಮಾಡಿತ್ತು. ಮಂಡಲ್ ವರದಿ ಜಾರಿ ಮಾಡಲು ಹಿಂಜರಿಕೆ ತೋರಿದ ಇವರದು ತೋರಿಕೆಯ ಒಬಿಸಿ ಪ್ರೀತಿ ಎಂಬುದು ಜನರಿಗೆ ಗೊತ್ತಿದೆ.ಇನ್ನು ಮುಂದೆ ಮಹಿಳೆಯರ ಕುರಿತ ಇವರ ಮಾತುಗಳು ಕೇವಲ ತೋರಿಕೆಯದೆಂದುಹಾಗೂ ತಮ್ಮ ಅವಕಾಶವನ್ನು ಕಾಂಗ್ರೆಸ್ ಪಕ್ಷ ಕಿತ್ತುಕೊಂಡಿದೆ ಎಂದು ಮಹಿಳೆಯರೂ ಅರ್ಥ ಮಾಡಿಕೊಳ್ಳಲಿದ್ದಾರೆ ಹಾಗೂ ಇವರಿಗೆ ಸೂಕ್ತ ಪಾಠ ಕಲಿಸುವ ವಿಶ್ವಾಸವಿದೆ ಪ್ರಥಮ ಆದಿವಾಸಿ ಮಹಿಳೆ ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿಗಳಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನದು ಕೇವಲ ವಿರೋಧಕ್ಕಾಗಿ ವಿರೋಧ. ನಾವು 370ನೇ ವಿಧಿರದ್ದು ಮಾಡಿದೆವು. ಅದನ್ನು ವಿರೋಧಿಸಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದಾಗಲೂ ವಿರೋಧ , ಸಿಎಎ ಅನುಷ್ಠಾನಕ್ಕೂ ವಿರೋಧವಿತ್ತು. ತ್ರಿವಳಿ ತಲಾಖ್ ರದ್ದನ್ನೂ ವಿರೋಧಿಸಿದ್ದರು. ಜಿಎಸ್‍ಟಿ ಜಾರಿಗೂ ವಿರೋಧ ಮಾಡಿದರು. ಆಯುಷ್ಮಾನ್ ಭಾರತ್ ಅನುಷ್ಠಾನಕ್ಕೆ ವಿರೋಧ, ಹೊಸ ಸಂಸತ್ತಿನ ಭವನ ನಿರ್ಮಾಣಕ್ಕೂ ವಿರೋಧ, ನಕ್ಸಲ್‍ವಾದ ಅಂತ್ಯ ಹಾಕಿದ್ದಕ್ಕೂ ವಿರೋಧ ಇವರದಾಗಿತ್ತು. ದೇಶ ರಕ್ಷಣೆಗಾಗಿ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಆಪರೇಷನ್ ಸಿಂಧೂರ ಮಾಡಿದೆ ಅದಕ್ಕೂ ವಿರೋಧ ಮಾಡಿದರು, ಜನಸಂಖ್ಯೆ ಆಧಾರದಲ್ಲಿ ಜನಪ್ರತಿನಿಧಿಗಳ ಹೆಚ್ಚಳದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುವುದಿಲ್ಲ ಇದು ಕೇವಲ ಸುಳ್ಳು ಸುದ್ದಿ ಅಷ್ಟೇ. ದಕ್ಷಿಣದ ಕರ್ನಾಟಕ, ,ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳಗಳ ಒಟ್ಟು ಸಂಸದರ ಸಂಖ್ಯೆ 129ರಿಂದ195ಕ್ಕೆ ಏರಿಸುವ ಉದ್ದೇಶ ಇತ್ತು. ಈ ಆಶಯಕ್ಕೆ ಇದೀಗ ಸೋಲಾಗಿದೆ. ಭಾರತವನ್ನು ಉತ್ತರ- ದಕ್ಷಿಣ ಎಂದು ಒಡೆಯುವ ಪ್ರಯತ್ನ ಕಾಂಗ್ರೆಸ್ ಮತ್ತು ಇತರ ಪಕ್ಷಗಳದಾಗಿತ್ತು ಎಂದು ಹನುಮಂತೇಗೌಡ ತಿಳಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...