ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 02 : ಭಾರತದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ ಅದರಲ್ಲೂ ನವರಾತ್ರಿ ಹಬ್ಬದ ಪ್ರಯುಕ್ತ ಶಮಿ ಅಥವಾ ಬನ್ನಿ ಮರವನ್ನು ಮಹಿಳೆಯರು ಭಯ ಭಕ್ತಿಯಿಂದ 9 ದಿನಗಳ ಕಾಲ ಪೂಜೆ ಮಾಡಿ ಇಷ್ಟಾರ್ಥಗಳು ನೆರವೇರಲಿ ಎಂದು ಕಾಳಿಯಲ್ಲಿ ಬೇಡಿಕೊಳ್ಳುತ್ತಾರೆ.
ನವರಾತ್ರಿಯ ನಂತರ ಅಧರ್ಮದ ವಿರುದ್ಧ ಜಯವನ್ನು ಸಾಧಿಸುವ ವಿಜಯದಶಮಿ ಹಬ್ಬವನ್ನು ಆಚರಿಸುವ ಹಿನ್ನೆಲೆಯಲ್ಲಿ ವಿಜಯ ದಶಮಿ ಹಬ್ಬವು ಆಯಾ ಪ್ರದೇಶಗಳಿಗೆ ತಕ್ಕಂತೆ ತನ್ನ ಆಚರಣೆಯಲ್ಲಿ, ನಂಬಿಕೆಯಲ್ಲಿ ಭಿನ್ನತೆಯನ್ನು ಹೊಂದಿದೆ.
ಕರ್ನಾಟಕದಲ್ಲಿ ಈ ದಿನ ಶಮಿ ಪೂಜೆಗೆ ಅಥವಾ ಬನ್ನಿ ವೃಕ್ಷದ ಪೂಜೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ನವರಾತ್ರಿ ವೇಳೆ ಅನೇಕ ರೂಪಗಳ ದೇವಿಗೆ ಅರ್ಚನೆ ನಡೆಯುತ್ತದೆ. ಇದರ ಜೊತೆಯಲ್ಲೇ ಮಹಾನಮಿಯ ದಿನದಂದು ಬನ್ನಿ (ಶಮಿ) ವೃಕ್ಷದ ಪೂಜೆ ನಡೆಯುತ್ತದೆ. 9 ದಿನಗಳ ಕಾಲ ಮಹಿಳೆಯರಿಂದ ಮೌನಾನುಷ್ಟಾನ ಮೂಲಕ ವಿವಿಧ ಕಡೆ ಬನ್ನಿ ಮರಕ್ಕೆ ನಸುಕಿನ ವೇಳೆ ವಿಶೇಷ ಪೂಜೆ ಮಾಡುವಂತಹ ಪದ್ದತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ನವರಾತ್ರಿ ಪ್ರಾರಂಭವಾದ ದಿನದಿಂದ ಒಟ್ಟು 9 ದಿನಗಳ ಮಹಿಳೆಯರು ಮೌನ ವ್ರತಾಚರಣೆ ಮೂಲಕ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ವ್ರತ ಕೈಗೊಂಡ ಮಹಿಳೆಯರು ಶುಭ್ರತೆಯಿಂದ ಹೂವ್ವು ಹಣ್ಣು ಕಾಯಿ ತಂದು ಬನ್ನಿ ಇರುವ ಕಡೆ ಹೋಗಿ ಮರಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ಬನ್ನಿ ಮಹಾಕಾಳಿ ದೇವತೆಗೆ ನಮಸ್ಕರಿಸುತ್ತಾರೆ. ದೇವಿಗೆ ನೈವೇದ್ಯ ಸಮರ್ಪಣೆ ಮಾಡಿ ಇಷ್ಟಾರ್ಥ ಗಳ ನೆರವೇರಿಲಿ ಎಂದು ವಿಶೇಷ ಪೂಜೆಗಳನ್ನ ಕೈಗೊಳ್ಳತ್ತಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















