ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 : ಇದೇ ಫೆಬ್ರವರಿ 09 ರಂದು ಪರಶುರಾಮಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು 12 ಗಂಟೆಯೊಳಗೆ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗ್ರಾಮದ ಜಮೀನೊಂದರಲ್ಲಿ ಜೆಜೆ ಕಾಲನಿ ನಿವಾಸಿ ಜೆ.ಎಚ್.ಪ್ರಭಾಕರ್ (52) ಶವ ಕಂಡುಬಂದಿತ್ತು. ಕೊಲೆಶಂಕೆ ವ್ಯಕ್ತಪಡಿಸಿ ಪತ್ನಿ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು, ಕಲ್ಯಾಣದುರ್ಗ ತಾಲ್ಲೂಕಿನ ಕುಂದುರ್ಪಿ ಮಂಡಲದ ನಿವಾಸಿ ಆನಂದರೆಡ್ಡಿ ಮತ್ತು ಪಾವಗಡ ತಾಲ್ಲೂಕು ಕೋಟಗುಡ್ಡ ಗ್ರಾಮದ ರಾಮಕೃಷ್ಣ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಪ್ರಕರಣ ಭೇದಿಸಿದ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ, ತಳಕು ಪಿಐ ಹನುಮಂತಪ್ಪ ಶಿವೀಹಳ್ಳಿ, ಪರಶುರಾಂಪುರ ಪಿಎಸ್‍ಐ ಎಚ್.ಮಾರುತಿ,, ಶಿವಕುಮಾರ್, ಎಚ್.ಸಿ. ಏಕಾಂತರೆಡ್ಡಿ, ವೀರೇಶ್, ಮಂಜುನಾಥ್, ನರೇಶಕುಮಾರ್, ಬಸವರೆಡ್ಡಿ, ಹನುಮಂತಪ್ಪ, ಶಿವಣ್ಣನಾಯ್ಕ, ಮಂಜುನಾಥ್, ನಾಗರಾಜ, ರಂಗಸ್ವಾಮಿ, ರಾಜೇಶ್, ಶಶಿಕುಮಾರ್, ರವಿ, ಹರಸೀಶ್, ನಿತೀನ್‍ಕುಮಾರ್, ಪುರುಷೋತ್ತಮ ಅವರ ಕಾರ್ಯಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.

