Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

4ನೇ ದಿನದ ಚಳಿಗಾಲದ ಅಧಿವೇಶನ : ಉತ್ತರ ಕರ್ನಾಟಕದ ಸಮಸ್ಯೆ ಜೊತೆಗೆ ಏನೆಲ್ಲಾ ಚರ್ಚೆ ಆಯ್ತು..?

---Advertisement---

ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭವಾಗಿ ಇಂದಿಗೆ ನಾಲ್ಕು ದಿನವಾಗಿದೆ. ಇಂದು ಸದನದಲ್ಲಿ ಏನೆಲ್ಲಾ ಚರ್ಚೆಯಾಯ್ತು ಎಂಬ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

* ವಿಪಕ್ಷ ನಾಯಕರು ಇಂದು ಕೂಡ ಕುರ್ಚಿ ವಿಚಾರವಾಗಿ ಧ್ವನಿ ಎತ್ತಿದರು‌. ಅದರಲ್ಲೂ ಸಿ ಅಶ್ವತ್ಥ್ ಅವರ ಹಾಡನ್ನು ಹಾಡುವ ಮೂಲಕ ಕಿಚಾಯಿಸಿದರು. ಕಾಣದ ಕುರ್ಚಿಗೆ ಹಂಬಲಿಸಿದೆ ಮನ.. ಕೂರಬಲ್ಲನೇ ಒಂದು ದಿನ ಎಂಬ ಸಾಲುಗಳನ್ನ ಹೇಳಿದರು.

* ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಅವರನ್ನು ರೇಗಿಸಿದರು‌. ಸಿದ್ದರಾಮಯ್ಯ ಅವರು ಇತಿಹಾಸವನ್ನು ರಚನೆ ಮಾಡುತ್ತಾರೆ. ಆ ದಿನಕ್ಕಾಗಿ ಕಾಯುತ್ತಾ ಇದ್ದಾರೆ ಎಂದರು. 1950 ರಿಂದ ದಕ್ಷಿಣ ಕರ್ನಾಟಕದವರು 15 ಜನ ಮುಖ್ಯಮಂತ್ರಿ ಗಳಾಗಿದ್ದಾರೆ. ಉತ್ತರ ಕರ್ನಾಟಕದವರು 8 ಬಾರಿ ಆಗಿದ್ದಾರೆ. ಯಾವ ಮುಖ್ಯಮಂತ್ರಿಯೂ ಐದು ವರ್ಷಗಳನ್ನು ಪೂರೈಸಿಲ್ಲ. ಆರು ತಿಂಗಳು, ಒಂದು ವರ್ಷ ಅಂತಾ ಏನಾದರೂ ಭ್ರಷ್ಟಾಚಾರ ಆರೋಪ ಬಂದ ಇಳಿಸಲಾಗಿದೆ ಎಂದರು.

* ಶಾಸಕ ರಾಜು ಕಾಗೆ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರು‌. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದರು. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಈಗ ಶಾಸಕರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಂದರೆ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಅಂತ ಹೇಳಬೇಕಾ ಅಥವಾ ಬೇರೊಂದು ಪದ ಬಳಸಬೇಕಾ ಎಂದು ಕೇಳಿದರು.

* 224 ಶಾಸಕರು ಹಾಗೂ ಕನ್ನಡ  ಸಂಘಟನೆಗಳು ವಿರೋಧ ಮಾಡಿದರೂ ನಾನು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬದ್ಧವಾಗಿದ್ದೇನೆ ಎಂದು ಕಾಗೆ ಹೇಳಿದರು. ಈ ಬಗ್ಗೆ ನಾನು ಸಾಯುವವರೆಗೆ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡುತ್ತಾ, ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷೆ ಬೇಡಬೇಕಾ ಎಂದಯ ರಾಜು ಕಾಗೆ ಪ್ರಶ್ನೆ ಮಾಡಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...