Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀರಾ..? : ನಿಖಿಲ್ ಕುಮಾರಸ್ವಾಮಿ ಉತ್ತರ ಏನಾಗಿತ್ತು..?

---Advertisement---

ಬೀದರ್:ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸಿ ಎರಡು ಬಾರೀ ಸೋಲು ಕಂಡಿದ್ದಾರೆ. ಇತ್ತಿಚೆಗೆ ದೊಡ್ಡ ಬ್ಯಾನರ್ ನಲ್ಲಿ ಸಿನಿಮಾ ಆರಂಭಿಸಿದ್ದಾರೆ. ಅಂದೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಿಖಿಲ್ ರಾಜಕೀಯದ ಬಗ್ಗೆ ಭವಿಷ್ಯ ಹೇಳಿದ್ದರು. ನಿಖಿಲ್ ಇನ್ನು ಐದು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಿನಿಮಾದ ಕಡೆಗೆ ಹೆಚ್ಚು ಗಮನ ನೀಡುತ್ತಾರೆ ಎಂದಿದ್ದರು.

ಇದೀಗ ಅದೇ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಕೂಡ ಉತ್ತರ ನೀಡಿದ್ದಾರೆ. ನಾನು ಸಿನಿಮಾ ಶೂಟಿಂಗ್ ಆರಂಭಿಸಿ ಒಂದು ವಾರ ಆಗಿದೆ. ರಾಜಕೀಯದಿಂದ ದೂರ ಉಳಿಯಬೇಕು ಅಂತಾನೆ ಸಿನಿಮಾ ಕಡೆ ಗಮನ ಕೊಟ್ಟಿರುವುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತನಾಗಿ ಓಡಾಡುತ್ತೇನೆ ಎಂದು ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿ, ಮೈತ್ರಿ ಬಗೆಗಿನ ವಿಚಾರದಲ್ಲಿ ನಮ್ಮ‌ ಪಕ್ಷದ ವರಿಷ್ಠರೆ ತೆರೆ ಎಳೆಯುತ್ತಾರೆ‌. ಯಾರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಒಂದು ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭವಲ್ಲ. ದೇವೇಗೌಡರ ಪರಿಶ್ರಮದಿಂದ, ಕಾರ್ಯಕರ್ತರಿಂದ ಜೆಡಿಎಸ್ ಪಕ್ಷ ಇದೆ. ಬಹಳಷ್ಟು ನಾಯಕರ ಕೊಡುಗೆ ಇದೆ. ಕುಮಾರಸ್ವಾಮಿ ಅವರು ಕೂಡ ಕಳೆದ 25 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...