Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2026ಕ್ಕೆ ಸರ್ಕಾರದಲ್ಲಿ ಏನಾದ್ರೂ ಬದಲಾವಣೆ ಆಗುತ್ತಾ..? ಡಿಕೆಶಿ ಉತ್ತರವೇನು..?

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಬಿಡಿಸಲಾಗದ ಕಗ್ಗಟ್ಟಾಗಿರೋದು, ಬಗೆಹರಿಯಲಾಗದ ಸಮಸ್ಯೆ ಆಗಿ ಕಾಡುತ್ತಾ ಇರೋದು ಸಿಎಂ ಬದಲಾವಣೆ ವಿಚಾರ. ಈ ವರ್ಷವಾದರೂ ಅದಕ್ಕೊಂದು ಅಂತ್ಯ ಸಿಗುತ್ತಾ, ಉತ್ತರ ಸಿಗುತ್ತಾ ಎಂಬುದನ್ನ ನೋಡಬೇಕಿದೆ. ಸಿಎಂ ಆಗುವ ಕನಸು ಹೊತ್ತಿರುವ ಡಿಕೆ ಶಿವಕುಮಾರ್ ಅವರು ಹೊಸ ವರ್ಷದ ಬಗ್ಗೆ ಮಾತನ್ನಾಡಿದ್ದಾರೆ.

ಹೊಸ ವರ್ಷ 2026 ಒಳ್ಳೆ ಶುಭ ಲಗ್ನದಲ್ಲಿ ಪ್ರಾರಂಭವಾಗಿದೆ. 2025 ಈ ದೇಶದಲ್ಲಿ ಬಹಳ ಉತ್ತಮವಾದ ಆಡಳಿತವನ್ನ ಕೊಟ್ಟಿದ್ದೇವೆ. ನಾವೂ ಕರ್ನಾಟಕ ರಾಜ್ಯವನ್ನ ಗ್ಲೋಬಲ್ ಇನ್ವೆಸ್ಟರ್ ಮೀಟ್, ಟೆಕ್ ಸಮ್ಮಿಟ್ ಇರಬಹುದು ಮತ್ತು ನಾವೇನ್ ಮಾತನ್ನ ಕೊಟ್ಟಿದ್ದೆವು, ಇರಿಗೇಷನ್ ನಲ್ಲಿ ತೆಗೆದುಕೊಂಡ ನಿರ್ಧಾರರಗಳು ತುಂಗಾಭದ್ರಾ, ಕಾವೇರಿಯಲ್ಲಿ ಸಿಗದ ನ್ಯಾಯ, ಮೇಕೆದಾಟು ವಿಚಾರ, ಇತಿಹಾಸ ಪುಟಕ್ಕೆ ಸೇರುವಂತಹ ಒಂದು ಪವಿತ್ರವಾದ ನಿರ್ಣಯಗಳು. ಇದೆಲ್ಲ ನಂಗೆ ಆತ್ಮಶಕ್ತಿ ತುಂಬಿದೆ. ಜನ ಏನು ನಮ್ಮ ಮೇಲೆ ವಿಶ್ವಾಸವನ್ನ ಇಟ್ಟಿದ್ದರು. ವಿಶ್ವಾಸವಿಟ್ಟಂತ ಜನರಿಗೆ ನಂಬಿಕೆ ಉಳಿಸಿಕೊಳ್ಳುವಂತಹ ಕೆಲಸವನ್ನ ಮಾಡಿದ್ದೇವೆ‌. ಇನ್ನು ಮುಂದಕ್ಕೆ ಅನೇಕ ಕಾರ್ಯಕ್ರಮಗಳನ್ನ ರೂಪಿಸುವುದಕ್ಕೆ ಯೋಜನೆಯನ್ನ ಜಾರುಗೆ ತರ್ತೇವೆ.

 

ಬೆಂಗಳೂರು ನಗರಕ್ಕೆ ಬಹುಶಃ ನನ್ನ 35 ವರ್ಷದ ರಾಜಕಾರಣ, ಶಾಸಕನಾಗಿ 36 ವರ್ಷ. ಅಲ್ಲಿಂದ ಇಲ್ಲಿಯ ತನಕ ಲೆಕ್ಕ ಹಾಕಿಕೊಂಡರೆ ಯಾರು ಕೂಡ ಇಂಥ ಐತಿಹಾಸಿಕ ಕಾರ್ಯಕ್ರಮವನ್ನ ಮಾಡುವುದಕ್ಕೆ ಆಗಿಲ್ಲ. ಪಿಎಂ ಕೂಡ ಇಲ್ಲಿಗೆ ಮೆಟ್ರೋ ಸಂಬಂಧ ಬಂದಾಗ ಯಾವ ರೀತಿ ಹಾಡಿ ಹೊಗಳಿದ್ರು, ನಮ್ಮ ಯೋಜನೆಗೆ ಹಣ ಕೊಡದೆ ಹೋದರು, ನಾವೂ ಹೊಸ ರೂಪವನ್ನ, ಭಾರತಕ್ಕೆ ಗೌರವ ಕೊಡುವ ರೀತಿಯಲ್ಲಿ ನಡೆಸಿಕೊಂಡಿದ್ದೀವಿ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now