Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇನ್ನು ಒಂದು ವಾರ ಗ್ಯಾಸ್ ಸಮಸ್ಯೆ ಆಗುತ್ತಾ..? ಸಚಿವ‌ ಮುನಿಯಪ್ಪ ಹೇಳಿದ್ದೇನು..?

---Advertisement---

ಬೆಂಗಳೂರು: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಗಳ ಕೊರತೆಯಿಂದಾಗಿ ಉಂಟಾಗಿರುವ ಸಮಸ್ಯೆ ಅಷ್ಟಿಷ್ಟಲ್ಲ. ಅದರಲ್ಲೂ ಬೆಂಗಳೂರಿನಂಥ ಮಹಾನಗರದಲ್ಲಿ ಗ್ಯಾಸ್ ಸಮಸ್ಯೆಯಿಂದಾಗಿ ಹೊಟೇಲ್ ಎಲ್ಲಾ ಬಂದ್ ಆಗಿವೆ. ಇದರಿಂದ ಅದೆಷ್ಟೋ ಜನರ ಊಟಕ್ಕೆ ಅಲೆದಾಡುವಂತ ಪರಿಸ್ಥಿತಿ ಉಂಟಾಗಿದೆ. ಈ ವಿಚಾರ ಸದನದಲ್ಲೂ ಜೋರು ಚರ್ಚೆಗೆ ಬಂದಿದೆ. ಪರಿಷತ್ ಸದಸ್ಯರು ಕೇಳಿದ ಪ್ರಶ್ನೆಗೆ ಆಹಾರ ಸಚಿವರ ಮುನಿಯಪ್ಪ ಅವರು ಉತ್ತರ ನೀಡಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬೆಳಗ್ಗೆ 10 ಗಂಟೆಯಿಂದ ಇಲ್ಲಿವರೆಗೂ ಮೀಟಿಂಗ್ ಮಾಡಿದ್ದೇವೆ. ಆಸ್ಪತ್ರೆಗಳಿಗೆ, ಹಾಸ್ಟೇಲ್ ಗಳಿಗೆ, ರೆಸಿಡೆನ್ಶಿಯಲ್ ಸ್ಕೂಲ್ ಗಳಿಗೆ, ಈ ಆಸ್ಪತ್ರೆಗೆ ಆಗುವಂತಹ ಊಟ ತಯಾರು ಮಾಡುವಂತಹ ಸ್ಥಳದಲ್ಲಿ ಐದಾರು ಐಟಂ ಏನಿದೆ ಅವೆಲ್ಲಕ್ಕೂ ಕಮರ್ಷಿಯಲ್ ಅನ್ನು ಕೊಡ್ತೇವೆ. ತಕ್ಷಣಕ್ಕೆ ಇದು ಸಮಸ್ಯೆ ಇದೆ. ಒಂದು ವಾರದ ಬಳಿಕ ಬಹುತೇಕ ಸಮಸ್ಯೆ ಸರಿ ಹೋಗುತ್ತದೆ. ಸಡನ್ ನಿಂತಿರುವುದು ಸಮಸ್ಯೆಗೆ ಕಾರಣವಾಗಿದೆ.

ಎಲ್ಲಿ ತೀರಾ ಅವಶ್ಯಕತೆ ಇದೆ ಅಲ್ಲಿಗೆ ಸಪ್ಲೈ ಮಾಡಬೇಕಿರುತ್ತೆ. ಹೊಟೇಲ್ ಅವರಿಗೆ ನಾನು ಮನವಿ ಮಾಡಿದ್ದೀನಿ. ಸದ್ಯಕ್ಕೆ ವಾರ ಹತ್ತು ದಿನ ಎಲೆಕ್ಟ್ರಿಕ್ ಸ್ಟೌವ್ ಉಪಯೋಗಿಸಿ ಆದ್ರೂ ಅವಶ್ಯಕತೆ ಇರುವಷ್ಟು ಆಹಾರವನ್ನ ತಯಾರು ಮಾಡಿ ಎಂದಿದ್ದೇನೆ. ಹಾಸ್ಟೇಲ್, ಹಾಸ್ಪಿಟಲ್ ಗಳಿಗೆ ಆಹಾರ ತಯಾರು ಮಾಡಬೇಕಾಗುತ್ತದೆ. ಅದಕ್ಕೆಲ್ಲ ಕೂಡ ವ್ಯವಸ್ಥಿತವಾಗಿ ಕಮರ್ಷಿಯಲ್ ಸಿಲಿಂಡರ್ ಗಳನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ. ವಾರದ ನಂತರ ಎಲ್ಲವೂ ಸಲೀಸಾಗಿ ಸರಿಯಾಗುತ್ತೆ ಎಂಬ ಸೂಚನೆ ಇದೆ. ಅದರ ಬಗ್ಗೆ ನಾನು ಈಗಲೇ ಆಶ್ವಾಸನೆ ನೀಡಲ್ಲ. ಆದರೆ ಎಲ್ಲವೂ ಸರಿ ಆಗುತ್ತೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now