ರಷ್ಯಾದಲ್ಲಿ ವ್ಯಾಗ್ನರ್ ಗುಂಪು ಮತ್ತು ಸೇನೆ ನಡುವೆ ನಡೆಯುತ್ತಿದ್ದ ಸಂಘರ್ಷ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಾಸ್ಕೋ ಗೆ ಹೋಗಿ ನುಗ್ಗುತ್ತೇವೆ ಎಂದು ವ್ಯಾಗ್ನಾರ್ ಪಡೆ ಘೋಷಣೆ ಮಾಡಿದೆ.
ರಷ್ಯಾ ಆಂತರಿಕ ಸಂಕಷ್ಟದಿಂದ ಭಾರತಕ್ಕೂ ರಷ್ಯಾದಿಂದ ಭಾರತ ಅತಿ ಹೆಚ್ಚು ಸಮಸ್ಯೆ ಕಾಡಬಹುದು. ಇಂಧನ ಆಮದು ವಿಚಾರಕ್ಕೆ ಸಮಸ್ಯೆಯೂ ಆಗಬಹುದು. ಕಳೆದೊಂದು ವರ್ಷದಿಂದ ಅತಿ ಹೆಚ್ಚು ತೈಲ ಆಮದು ಆಗುತ್ತಿರುವುದು ರಷ್ಯಾದಿಂದ. ಪೆಟ್ರೋಲ್ ಸೇರಿ ಅತಿ ಹೆಚ್ಚು ತೈಲ ಆಮದು ಕಡಿಮೆ ದರದಲ್ಲಿ ಭಾರತಕ್ಕೆ ತೈಲ, ಆಮದು ಮಾಡುತ್ತಿದ್ದ ರಷ್ಯಾ ಪರಿಸ್ಥಿತಿ ಗಂಭೀರವಾದ್ರೆ, ತೈಲ ಸರಬರಾಜು ಸಂಕಷ್ಟ ಭಾರತಕ್ಕೆ ಹೆಚ್ಚಾಗಲಿದ್ಯಾ ಅನ್ನೋ ಪ್ರಶ್ನೆಗಳು ಕಾಡುತ್ತಿದೆ. ಪೆಟ್ರೋಲ್ ಡೀಸೆಲ್ ದರ ರಷ್ಯಾದಿಂದ ಆಮದಾಗದಿದ್ದರೆ ಭಾರತದಲ್ಲಿ ದರ ಹೆಚ್ಚಳವಾಗಲಿದೆ.
ನಮ್ಮ ರಾಷ್ಟ್ರಕ್ಕೆ ಕುತ್ತು ಹೆಚ್ಚಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟೀನ್ ಹೇಳಿದ್ದಾರೆ. ಶತ್ರುಗಳು ನಮ್ಮಮನೆ ಬಾಗಿಲಿಗೆ ಬಂದು ಕುಳಿತಿದ್ದಾರೆ. ನಮ್ಮವರ ರಕ್ಷಣೆಗಾಗಿ ಹೋರಾಟ ಅನಿವಾರ್ಯ. ನಮ್ಮಲ್ಲೆ ಒಡಕು ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದಿದ್ದಾರೆ ಪುಟಿನ್. ನಮ್ಮ ಸೈನಿಕರು ವಿರೋಚಿತ ಹೋರಾಟ ನಡೆಸುತ್ತಿದ್ದಾರೆ ಎಂದಿದ್ದಾರೆ.