ವಿನಯ್ ಔಟ್ ಆಗಿದ್ದಕ್ಕೆ ಪತ್ನಿ ಅಕ್ಷತಾ ಕಣ್ಣೀರು..!

suddionenews
2 Min Read

ಬಿಗ್ ಬಾಸ್ ಸೀಸನ್ 10 ಶೋಗೆ ತೆರೆ ಬಿದ್ದಿದೆ. ಈ ಬಾರಿ ವಿನ್ ಆಗುವುದು ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಯಾಕಂದರೆ ಈ ಬಾರಿಯ ಅದೆಷ್ಟೋ ಊಹೆಗಳು ತಪ್ಪಾಗಿದೆ. ಹೀಗಾಗಿ ಕೊನೆಯ ತನಕ ಫಿನಾಲೆಯನ್ನು ಕುತೂಹಲದಿಂದ ಕಾದಿದ್ದಾರೆ.

ಆರಂಭದಿಂದ ವಿನಯ್, ಕಾರ್ತಿಕ್, ಸಂಗೀತಾ ನಡುವೆ ಟಫ್ ಕಾಂಪಿಟೇಷನ್ ಇತ್ತು. ಇದರ ಜೊತೆಗೆ ಫಿನಾಲೆಗೆ ತಲುಪುವುದಕ್ಕೆ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಅರ್ಹತೆ ಪಡೆದುಕೊಂಡಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸ್ಟ್ರಾಂಗ್ ಆಗಿ ಗುರುತಿಸಿಕೊಂಡಿದ್ದು ಮಾತ್ರ ವಿನಯ್ ಗೌಡ. ಸುದೀಪ್ ಅವರ ಒಂದು ಕೈ ವಿನಯ್ ಅವರದ್ದು ಕೂಡ ಆಗಿರುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಅದೆಲ್ಲವೂ ಉಲ್ಟಾ ಆಗಿದೆ. ಅಕ್ಷರಶಃ ಪ್ರತಾಪ್ ಕೂಡ ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಫಿನಾಲೆಗೆ ನಾಲ್ಕು ಜನ ಇದ್ದರು. ವಿನಯ್, ಸಂಗೀತಾ, ಕಾರ್ತಿಕ್, ಪ್ರತಾಪ್ ಇದ್ದರು. ಈಗ ಒಬ್ಬರು ಹೊರಗೆ ಹೋಗಬೇಕು. ಯಾರು ಹೋಗ್ತಾರೆ ಎಂಬ ಪ್ರಶ್ನೆ ಬಂದಾಗ ಕಾರ್ತಿಕ್ ಹಾಗೂ ಪ್ರತಾಪ್ ಹೆಸರನ್ನೇ ಹೇಳಿದ್ದರು ಮಾಜಿ ಸ್ಪರ್ಧಿಗಳು. ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತು. ಅದುವೆ ಉಳಿದ ನಾಲ್ಕು ಜನ ತಿರುಗುವ ಕುರ್ಚಿಯಲ್ಲಿ ಕೂರಬೇಕಿತ್ತು. ಯಾರು ಕಾಣೆಯಾಗುತ್ತಾರೆ, ಅವರ ಜರ್ನಿ ಮುಗಿದಂತೆಯೇ ಸರಿ. ಆದರೆ ಸಂಗೀತಾ, ಪ್ರತಾಪ್ ಅವರು ಆರಂಭದಲ್ಲಿ ನಾಪತ್ತೆಯಾಗಿದ್ದರು. ಮತ್ತೆ ಪ್ರತ್ಯಕ್ಷರಾದರು. ವಿನಯ್ ಕೂಡ ಅದೇ ರೀತಿ ನಾಪತ್ತೆಯಾದಾಗ, ಮತ್ತೆ ಬರಬಹುದು ಎಂಬ ಊಹೆ ಇತ್ತು. ಆದರೆ ಅದು ಸುಳ್ಳಾಗಿತ್ತು.

ವಿನಯ್ ಆಟ, ಟಾಸ್ಕ್ ಗಳಲ್ಲಿ ಎಲ್ಲಿಯೂ ಬಿಡದಂತೆ ಗೆಲ್ಲುತ್ತಿದ್ದ ರೀತಿಗೆ ವಿನಯ್ ಅವರ ಮನೆಯವರಿಗೆ ಸಾಕಷ್ಟು ಹೋಪ್ ಇತ್ತು. ಫಿನಾಲೆಯಲ್ಲಿ ಸುದೀಪ್ ಅವರ ಒಂದು ಕೈ ವಿನಯ್ ಅವರದ್ದೇ ಆಗಿರುತ್ತದೆ ಎಂದು ಅವರ ಮನೆಯವರು ನಂಬಿದ್ದರು. ಅಷ್ಟೇ ಯಾಕೆ ಅವರ ಹೆಂಡತಿಗೆ ಸಾಕಷ್ಟು ವಿಶ್ವಾಸವಿತ್ತು. ಆದರೆ ಅದ್ಯಾವಾಗ ತಿರುಗುವ ಖುರ್ಚಿಯಲ್ಲಿ ವಿನಯ್ ಕಾಣದೆ ಇದ್ದಾಗ ಅಕ್ಷತಾ ಕಣ್ಣಲ್ಲಿ ನೀರು ತುಂಬಿತ್ತು.

ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ವಿನಯ್ ಅವರು ಒಂದು ತಂಡವನ್ನೇ ಕಟ್ಟಿಕೊಂಡಿದ್ದರು. ಆ ತಂಡದಲ್ಲಿ ಇಶಾನಿ, ಮೈಕಲ್, ರಕಗಷಕ್, ಸ್ನೇಹಿತ್, ನಮ್ರತಾ ಇದ್ದರು. ಎಲ್ಲರೂ ಒಬ್ಬೊಬ್ಬರಾಗಿಯೇ ಔಟ್ ಆಗುತ್ತಿದ್ದರು. ಆದರು ಇವರೆಲ್ಲರೂ ವಿನಯ್ ಅವರಿಗೆ ಬೆಂಬಲ ನೀಡಿದ್ದರು. ವಿನಯ್ ಗೆಲ್ಲಲಿ ಎಂದೇ ಹಾರೈಸುತ್ತಿದ್ದರು. ಇದೀಗ ಆ ತಂಡದಿಂದ ಆನೆ ಎಂದು ಘರ್ಜಿಸಿದ್ದ ವಿನಯ್ ಕೂಡ ಔಟ್ ಆಗಿದ್ದಾರೆ. ಇದು ಇಡೀ ತಂಡಕ್ಕೆ ಶಾಕ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks