ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನಾಚಾರಣೆಯನ್ನು” ಆಚರಿಸಲಾಗುತ್ತದೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಮಾರ್ಚ್ ೮ನ್ನು ಅವರಿಗೆ ಅರ್ಪಿಸಲಾಗಿದೆ.
ಮಾರ್ಚ್ 8 ದಿನಾಂಕಕ್ಕೂ ವಿಶೇಷವಾದ ಇತಿಹಾಸವಿದೆ. 1908ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳೆಯರು ಉತ್ತಮ ವೇತನ, ಕಡಿಮೆ ಕೆಲಸದ ಸಮಯ ಮತ್ತು ಮತದಾನದ ಹಕ್ಕಿಗಾಗಿ ಮೆರವಣಿಗೆ ನಡೆಸಿದರು. ನಂತರ 1910ರಲ್ಲಿ ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸುವ ಕಲ್ಪನೆ ಮುಂದುವರಿಯಿತು. 1917ರಲ್ಲಿ ರಷ್ಯಾದಲ್ಲಿ ಮಹಿಳೆಯರು “ಬ್ರೆಡ್ ಮತ್ತು ಶಾಂತಿ”ಗಾಗಿ ನಡೆಸಿದ ಪ್ರತಿಭಟನೆ ಕೂಡ ಈ ದಿನದ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದೆ.
2026ರ ಅಂತರರಾಷ್ಟ್ರೀಯ ಮಹಿಳಾ ದಿನದ ವಿಷಯವಾಗಿ ವಿಶ್ವಸಂಸ್ಥೆ “ಹಕ್ಕುಗಳು, ನ್ಯಾಯ ಮತ್ತು ಕ್ರಿಯೆ – ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ” ಎಂಬ ಸಂದೇಶವನ್ನು ಘೋಷಿಸಿದೆ. ಈ ವಿಷಯವು ಮಹಿಳೆಯರಿಗೆ ಕಾನೂನಿನಲ್ಲಿ ಇರುವ ಹಕ್ಕುಗಳು ನಿಜ ಜೀವನದಲ್ಲಿಯೂ ಅನುಷ್ಠಾನವಾಗಬೇಕು ಎಂಬುದನ್ನು ಒತ್ತಿಹೇಳುತ್ತದೆ. ಇನ್ನೂ ಜಗತ್ತಿನ ಹಲವು ಭಾಗಗಳಲ್ಲಿ ಮಹಿಳೆಯರು ಪುರುಷರಿಗೆ ಇರುವ ಹಕ್ಕುಗಳಿಗಿಂತ ಕಡಿಮೆ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂಬುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.










