Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಂಬೈನಲ್ಲಿ ಬೆಕ್ಕುಗಳನ್ನು ಹತ್ಯೆ ಮಾಡುತ್ತಿದ್ದ ‘ಕ್ಯಾಟ್ ಕಿಲ್ಲರ್’ ಅರೆಸ್ಟ್!

---Advertisement---

ಮುಂಬೈ.ಸೆಪ್ಟೆಂಬರ್.12: ಮುಂಬೈನ ಗೋವಂಡಿ ಪ್ರದೇಶದಲ್ಲಿ ಬೆಕ್ಕುಗಳು ಮತ್ತು ಅವುಗಳ ಮರಿಗಳನ್ನು ಸರಣಿಯಾಗಿ ಹತ್ಯೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಶಿವಾ ಎಂದು ಗುರುತಿಸಲಾಗಿದ್ದು, ಈತ ಬೆಕ್ಕುಗಳನ್ನು ಕೊಲ್ಲುತ್ತಿದ್ದ ಹಿಂದಿನ ಉದ್ದೇಶ ಮತ್ತು ಆತನ ಮಾನಸಿಕ ಸ್ಥಿತಿಯ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಗೋವಂಡಿಯ ಪಾಂಜ್ರಾಪೋಲ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೆಕ್ಕುಗಳ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸೆಪ್ಟೆಂಬರ್ 3ರಂದು ನಾಲ್ಕು ಬೆಕ್ಕುಗಳು ಶವವಾಗಿ ಪತ್ತೆಯಾಗಿದ್ದರೆ, ಸೆಪ್ಟೆಂಬರ್ 5ರಂದು ಮತ್ತೆರಡು ಬೆಕ್ಕುಗಳು ವಿಕೃತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಹೀಗೆ ಕೇವಲ ಕೆಲವೇ ದಿನಗಳಲ್ಲಿ ಆರು ಬೆಕ್ಕುಗಳ ಮೃತದೇಹಗಳು ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ಈ ಭಾಗದಿಂದ ಸುಮಾರು 20ಕ್ಕೂ ಹೆಚ್ಚು ಬೆಕ್ಕುಗಳು ನಿಗೂಢವಾಗಿ ನಾಪತ್ತೆಯಾಗಿದ್ದವು.

ಬೆಕ್ಕುಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಕೊಲ್ಲಲಾಗುತ್ತಿದೆ ಎಂಬ ಅನುಮಾನದ ಮೇರೆಗೆ ಪ್ರಾಣಿ ಪ್ರೇಮಿ ಹಾಗೂ ‘ಪೀಟಾ’ (PETA) ಕಾರ್ಯಕರ್ತೆ ರುಬಿನಾ ಪಠಾಣ್ ನೀಡಿದ ದೂರಿನನ್ವಯ ಆರ್‌ಸಿಎಫ್ ಠಾಣಾ ಪೊಲೀಸರು ಅಜ್ಞಾತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಘಟನೆಯ ಬೆನ್ನಲ್ಲೇ ಆರೋಪಿಯ ಪತ್ತೆಗೆ ಸಹಾಯ ಮಾಡಿದವರಿಗೆ ಪೀಟಾ ಇಂಡಿಯಾ ಸಂಸ್ಥೆಯು 50 ಸಾವಿರ ರೂಪಾಯಿ ನಗದು ಬಹುಮಾನವನ್ನು ಕೂಡ ಘೋಷಿಸಿತ್ತು.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶನಿವಾರ ಆರೋಪಿ ಶಿವಾನನ್ನು ಸೆರೆಹಿಡಿದಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನೇ ಬೆಕ್ಕುಗಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪ್ರಕರಣದ ಕುರಿತು ಮಾತನಾಡಿರುವ ಡಿಸಿಪಿ ಸಮೀರ್ ಶೇಖ್, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 325 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾಟ-ಮಂತ್ರದ (ಬ್ಲ್ಯಾಕ್ ಮ್ಯಾಜಿಕ್) ಆಯಾಮ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Join WhatsApp

Join Now

Join Telegram

Join Now