Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಗುರು ಮತ್ತು ಕೂದಲು ಕತ್ತರಿಸುವಾಗ ನಮಗೆ ಯಾಕೆ ನೋವಾಗುವುದಿಲ್ಲ? ಇಲ್ಲಿದೆ ವೈಜ್ಞಾನಿಕ ಕಾರಣ 

---Advertisement---

ನಮ್ಮ ದೇಹದ ಚರ್ಮಕ್ಕೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ನೋವಾಗುತ್ತದೆ‌. ಯಾರಾದರೂ ಚೂಟಿದರೂ ಉರಿಯುತ್ತದೆ‌. ಆದರೆ, ಉಗುರು (Nail) ಅಥವಾ ಕೂದಲನ್ನು (Hair) ಕತ್ತರಿ ಅಥವಾ ನೈಲ್ ಕಟರ್ ನಿಂದ ಕತ್ತರಿಸಿದರೂ ನಮಗೆ  ನೋವಿನ ಅನುಭವವಾಗುವುದಿಲ್ಲ. ಏಕೆ ?ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ!

ನಮ್ಮ ದೇಹದ ಯಾವುದೇ ಭಾಗಕ್ಕೆ ಸಣ್ಣ ಪೆಟ್ಟಾದರೂ  ನಮಗೆ ತಕ್ಷಣ ನೋವಿನ ಅನುಭವವಾಗುತ್ತದೆ. ಆದರೆ ಅದೇ ದೇಹದ ಭಾಗವಾಗಿ ಬೆಳೆಯುವ ಉಗುರು ಮತ್ತು ಕೂದಲನ್ನು ಕತ್ತರಿಸುವಾಗ ನಮಗೆ ನೋವು ಉಂಟಾಗುವುದಿಲ್ಲ. ಇದರ ಹಿಂದೆ ಒಂದು ಕುತೂಹಲಕಾರಿ ವೈಜ್ಞಾನಿಕ ಕಾರಣವಿದೆ.

ವೈಜ್ಞಾನಿಕವಾಗಿ ಹೇಳುವುದಾದರೆ ದೇಹದ ಇತರ ಭಾಗಗಳಲ್ಲಿರುವ ಜೀವಕೋಶಗಳು ಜೀವಂತವಾಗಿದ್ದು ಅವು ನರಮಂಡಲದೊಂದಿಗೆ ನೇರ ಸಂಪರ್ಕ ಹೊಂದಿರುತ್ತವೆ. ಹೀಗಾಗಿ ಅಲ್ಲಿ ಯಾವುದೇ ಬದಲಾವಣೆಯಾದರೂ ಮೆದುಳಿಗೆ ತಕ್ಷಣ ಸಂದೇಶ ರವಾನೆಯಾಗಿ ನಮಗೆ ನೋವು ಅಥವಾ ಸ್ಪರ್ಶದ ಅರಿವಾಗುತ್ತದೆ. ನಮ್ಮ ದೇಹದಲ್ಲಿ ನೋವನ್ನು ಅನುಭವಿಸಲು ನರಗಳು ಅಗತ್ಯ. ಚರ್ಮದಲ್ಲಿ ಅಥವಾ ಮಾಂಸಕೋಶಗಳಲ್ಲಿ ನರಗಳು ಇದ್ದುದರಿಂದ ಅವುಗಳಿಗೆ ಗಾಯವಾದಾಗ ನೋವು ಅನುಭವಿಸುತ್ತೇವೆ. ಆದರೆ ಉಗುರುಗಳ ಮೇಲ್ಭಾಗ ಮತ್ತು ಕೂದಲಿನ ಹೊರಭಾಗದಲ್ಲಿ ಯಾವುದೇ ನರಗಳಿಲ್ಲ. ಆದ್ದರಿಂದ ಅವನ್ನು ಕತ್ತರಿಸಿದಾಗ ಮೆದುಳಿಗೆ ನೋವಿನ ಸಂದೇಶ ಹೋಗುವುದಿಲ್ಲ.

ನಮ್ಮ ಉಗುರುಗಳು ಮತ್ತು ಕೂದಲುಗಳು ಸತ್ತ ಜೀವಕೋಶಗಳಿಂದ ಅಥವಾ ಡೆಡ್ ಸೆಲ್ಸ್ ನಿಂದ ಮಾಡಲ್ಪಟ್ಟಿವೆ.ಉಗುರು ಮತ್ತು ಕೂದಲಿನ ಹೊರಭಾಗವು ನಿರ್ಜೀವ ಕೋಶಗಳಿಂದ ಕೂಡಿದೆ. ಈ ಸತ್ತ ಜೀವಕೋಶಗಳಲ್ಲಿ ಯಾವುದೇ ನರಗಳ ಸಂಪರ್ಕವಿರುವುದಿಲ್ಲ. ಇದೇ ಕಾರಣಕ್ಕೆ ನಾವು ಕತ್ತರಿ ಅಥವಾ ನೇಲ್ ಕಟರ್ ಬಳಸಿ ಇವುಗಳನ್ನು ಕತ್ತರಿಸಿದಾಗ ನಮಗೆ ಯಾವುದೇ ನೋವಿನ ಅನುಭವ ಆಗುವುದಿಲ್ಲ.

ಕೂದಲು ಮತ್ತು ಉಗುರುಗಳು ಮುಖ್ಯವಾಗಿ ಕೇರಟಿನ್ ಎಂಬ ಪ್ರೋಟೀನ್‌ನಿಂದ ನಿರ್ಮಿತವಾಗಿವೆ. ಕೇರಟಿನ್ ಒಂದು ಕಠಿಣ ಮತ್ತು ಸತ್ತ ಕೋಶಗಳಿಂದ ನಿರ್ಮಿತ ಪದಾರ್ಥವಾಗಿದೆ. ಅಂದರೆ ನಾವು ಹೊರಗೆ ನೋಡುತ್ತಿರುವ ಕೂದಲು ಮತ್ತು ಉಗುರುಗಳು ಜೀವಂತ ಕೋಶಗಳಿಂದ ನಿರ್ಮಿತವಾಗಿರುವುದಿಲ್ಲ. ಅವು ಸತ್ತ ಕೋಶಗಳ ಪದರಗಳಿಂದ ನಿರ್ಮಿತವಾಗಿರುವುದರಿಂದ ಅವುಗಳಲ್ಲಿ ನರಗಳು ಅಥವಾ ರಕ್ತನಾಳಗಳು ಇರುವುದಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...