ಮೈಸೂರು: ಸಿಎಂ ಸಿದ್ದರಾಮಯ್ಯ ಇದ್ದ ಜೀಪ್ ನಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಮೊಮ್ಮಗನನ್ನು ಕರೆದುಕೊಂಡು ಹೋಗಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಸಿ.ಮಹದೇವಪ್ಪ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನೋಡಿಲ್ಲ, ಕೇಳಿದೆ ಎಂದಿದ್ದಾರೆ.
ಸಹಜವಾಗಿ ಮುಖ್ಯಮಂತ್ರಿಗಳು ದಸರಾ ದಿನ, ಉದ್ಘಾಟಕರ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಹಾಗೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಾರೆ. ಅದಾದ ಮೇಲೆ ದಸರಾ 11ನೇ ದಿನ ಆಚರಿಸುತ್ತಾರೆ. ನಂದಿ ಕಂಬಕ್ಕೆ ಪೂಜೆಯನ್ನ ಸಲ್ಲಿಸ್ತಾರೆ. ಅಲ್ಲಿಂದ ವಾಪಾಸ್ ನಮ್ಮ ಸ್ಥಳಕ್ಕೆ ಬಂದು ಕುಳಿತು ಕೊಳ್ತೇವೆ. ಅದರಲ್ಲಿ ಪ್ರೋಟೋಕಾಲ್ ಅಂತೆಲ್ಲಾ ಏನಿಲ್ಲ. ಹೇಗೆ ಬೇಕಾದರೂ ಹೋಗಬಹುದು. ಸುಮ್ಮನೆ ಹೋಗುವ ಬದಲು, ಅಷ್ಟೊಂದು ಜನ ಸೇರಿದ್ದಾರೆ. ಜನಗಳಿಗೆ ಕೈ ಬೀಸಿ, ಕೃತಜ್ಞತೆಯ ಭಾವವನ್ನ ನೀಡಬೇಕು. ನಾವೆಲ್ಲಾ ಭಾರತೀಯರು, ವೈವಿಧ್ಯತೆಯಿಂದ ಏಕತೆಯಿಂದ ಜಾತಿ, ಧರ್ಮ, ರಾಜಕಾರಣವನ್ನು ಮೀರಿ ನಮ್ಮ ದೇಶವನ್ನು ಕಟ್ಟೋಣಾ ಅನ್ನೋದನ್ನ ಒಬ್ಬ ನಾಯಕನಾಗಿ ಮಾಡಬೇಕು ಅನ್ನೋದನ್ನ ಬಿಟ್ರೆ, ದಸರಾ ಆಚರಣೆ ಯಾರಿಗೆ ಗೊತ್ತಿಲ್ಲ ಅಂತವರು ಇದನ್ನೆಲ್ಲಾ ಸೃಷ್ಟಿ ಮಾಡಿರೋದು.
ಆ ಮಗು ಬಂದಿದ್ದಕ್ಕೂ ಪ್ರೋಟೋಕಾಲ್ ಇಲ್ಲ, ಸೆಲ್ಯೂಟ್ ಇಲ್ಲ. ಅದು ಬಿಟ್ಟು ಅಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ. ಸಿಎಂ ಅವರಿಗೆ ಪ್ರೋಟೋಕಾಲ್ ಇರುತ್ತದೆ. ಹಾಗೇ ಯಾರೆಂದರೆ ಹಾಗೇ ಸಿಎಂ ಜೊತೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಮಹದೇವಪ್ಪ ಅವರ ಮೊಮ್ಮಗ ಹೋಗಿದ್ದಕ್ಕೆ ಸಾಕಷ್ಟು ಚರ್ಚೆಗಳಾಗಿತ್ತು.
