ಯಾರೇಳಿದ್ದು ಡಿಕೆಶಿ ಕನಸಿನ ಕೂಸು ಇದು ಅಂತ..?

suddionenews
1 Min Read

ತುಮಕೂರು; ಹೇಮಾವತಿ ಕೆನಾಲ್ ವಿವಾದ ಕಳೆದ ಮೂರು ದಿನದಿಂದ ಜೋರಾಗಿದೆ. ಹೇಮಾವತಿ ಕೆನಾಲ್ ಯೋಜನೆ ಉಳಿದ ಕೆಲವನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ಬಿಜೆಪಿ ನಾಯಕರು, ಮಠಾಧೀಶರು ವಿರೋಧ ವ್ಯಕ್ತಪಡಿಸಿದರು. ಅದರಲ್ಲೂ ಇಲ್ಲಿನ ನೀರನ್ನ ರಾಮನಗರಕ್ಕೆ ತೆಗೆದುಕೊಂಡು ಹೋಗುತ್ತೇವೆಂದಾಗ ತುಮಕೂರಿನ ಜನತೆ ರೊಚ್ಚಿಗೆದ್ದಿದ್ದಾರೆ. ಇದರ ಬೆನ್ನಲ್ಲೇ ಇದು ಡಿಕೆ ಶಿವಕುಮಾರ್ ಕನಸಿನ ಕೂಸು ಎಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಯಾರೇಳಿದ್ದು ಇದು ಡಿಕೆ ಶಿವಕುಮಾರ್ ಕನಸಿನ ಕೂಸು ಅಂತ. ಸರ್ಕಾರದ ಯೋಜನೆ ಇದು. ನೀವೂ ಹೇಳಿಕೊಳ್ಳಬಹುದು ಇದು ನಮ್ಮ ಕನಸಿನ ಕೂಸು ಅಂತ. ರಾಜ್ಯದ ಒಂದು ಭಾಗದಲ್ಲಿ ನಡೆಯುವ ಯೋಜನೆ ಇದು. ಕುಣಿಗಲ್‌ ಒಂದೇ ಅಲ್ಲ 16 ತಾಲೂಕಿನಿಂದ ಇದೆ. ಪ್ರಶ್ನೆ ಬಂದಿರೋದು ಕುಣಿಗಲ್ ವಿಚಾರ ಮಾತ್ರ ಅಲ್ಲ. ಒಂದು ತಿಂಗಳಾಯ್ತು ಪೂಜೆ ಮಾಡಿ.

ನೀರಾವರಿ ಯೋಜನೆ ರಾತ್ರೋ ರಾತ್ರಿ ಆಗೋದಲ್ಲ. ಒಂದೊಂದು ಸಲ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತದೆ. ಆಲಮಟ್ಟಿದು ಎಷ್ಟು ವರ್ಷ ತೆಗೆದುಕೊಳ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರಹ ಫೌಂಡೇಷನ್ ಹಾಕಿದ್ದು, 65ರಲ್ಲಿ ಮುಗ್ದದ್ದು ಎಷ್ಟು ವರ್ಷ ಆಯ್ತು. ಜಸ್ಟಿಫೈ ಮಾಡ್ತಾ ಇಲ್ಲ. ಆದರೆ ನೀರಾವರಿ ಯೋಜನೆಗಳ ಬಗ್ಗೆ ಆಗುವ ಕೆಲಸಗಳ ಬಗ್ಗೆ ಹೇಳಿದೆ. ಸುರೇಶ್ ಗೌಡರು ಆತಂಕಪಡುವಂತದ್ದಿಲ್ಲ. 70ರಲ್ಲಿ ಕುಣಿಗಲ್ ನೀರು ಎಕ್ಸ್ಪ್ರೆಸ್ ನಲ್ಲಿ ಆಯ್ತು ಅಂದ್ರೆ 901 ಕ್ಯೂಸೆಕ್ ನೀರು ಹೋಗ್ತಾ ಇರುತ್ತೆ. ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಇದರಿಂದ ರಾಮನಗರಕ್ಕೆ ನೀರು ತಗೊಂಡು ಹೋಗುವುದು ಇಲ್ಲ. ಮಾಗಡಿಗೆ ಆ‌ಲೊಕೇಷನ್ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *