Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಾರೀ ಅವರು : ವಿಜಯೇಂದ್ರ ವಿರುದ್ಧ ಬಸವರಾಜ ರಾಯರೆಡ್ಡಿ ಗರಂ..!

---Advertisement---

ಬೆಳಗಾವಿ: ಸರ್ಕಾರಕ್ಕೆ ಪಿಂಚಣಿ ಕೊಡಲು ಆಗುತ್ತಿಲ್ಲವೆಂದು ಹೇಳಿದ್ದ ವಿಜಯೇಂದ್ರ ಅವರ ಮಾತಿಗೆ ಬಸವರಾಜ ರಾಯರೆಡ್ಡಿ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ್ದು, ಹೊಸ ಸರ್ಕಾರ ಬಂದಾಗ 2 ಲಕ್ಷ 47 ಸಾವಿರ ಕೋಟಿ ರೂಪಾಯಿ ಕಾಮಗಾರಿಗಳ ಟೆಂಡರ್ ಕರೆದು ಬಿಟ್ಟರು. ಇದನ್ನ ಯಾರು ಸರಿಯಾಗಿ ಹೇಳ್ತಾ ಇಲ್ಲ. ಕರೆದು ಹೋಗಿ ಬಿಟ್ಟವರು ಅವರು, ಈಗ ಪೇಮೆಂಟ್ ಮಾಡ್ತಾ ಇರೋದು ನಾವು. ಅದು ನಮಗೆ ಬರ್ಡನ್ ಆಗಿರೋದು. ಗ್ಯಾರಂಟಿ ಅಲ್ಲ ಗ್ಯಾರಂಟಿ ಯಾವತ್ತಿಗೂ ನಿಲ್ಲುವುದಿಲ್ಲ.

ನಮ್ಮ ಸಿದ್ದರಾಮಯ್ಯ ಅವರು ಒಳ್ಳೆಯ ಮುಖ್ಯಮಂತ್ರಿ ಹಾಗೂ ಒಳ್ಳೆಯ ಹಣಕಾಸು ಮಂತ್ರಿಯಾಗಿದ್ದಾರೆ. ನಾನು ಆರ್ಥಿಕ ಸಲಹೆಗಾರನಿದ್ದೇನೆ. ಹಾಗಾಗಿ‌ ನನಗೂ ಎಲ್ಲವೂ ಗೊತ್ತಿದೆ. ಈ ವರ್ಷ 4 ಲಕ್ಷ 80 ಸಾವಿರ ಕೋಟಿ ಬಜೆಟ್ ಕೊಟ್ಟಿದ್ದೇವೆ‌. ಬಹುತೇಕ ಮುಂದಿನ ಸಲ 4 ಲಕ್ಷ 30 ಸಾವಿರ ಕೋಟಿ ಕೊಡ್ತೇವೆ. ಬಜೆಟ್ ಪ್ರಿಪೇರ್ ಮಾಡ್ತಾ ಇದ್ದೇವೆ. ಒಳ್ಳೆಯ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಇನ್ನು ಎರಡೂವರೆ ವರ್ಷ ಮಾಡುತ್ತೇವೆ ಎಂದಿದ್ದಾರೆ.

ಪಿಂಚಣಿ ಕೊಡುವುದಕ್ಕೂ ಹಣವಿಲ್ಲವಂತಲ್ಲ ಎಂದು ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಇದೆಲ್ಲಾ ನಾನ್ ಸೆನ್ಸ್. ಯಾರೀ ಅವರು ಕರ್ಕೊಂಡ್ ಬನ್ನಿ ಹೇಳಿದವರು. ಒಂದು ತಿಂಗಳು ತಡವಾಗಿರಬಹುದು. ಜಿಎಸ್ಟಿ ಹಣ ಬಂದ್ರೆ ತಾನೇ ಕೊಡುವುದು. ಕೇಂದ್ರ ಸರ್ಕಾರಕ್ಕೆ ಹೋಗುತ್ತೆ. ಅವರು 50 ತಗೊಂಡು ನಮಗೆ 50 ಕೊಡ್ತಾರೆ. ಅವರು ಕೊಡುವುದು ತಡವಾದಾಗ ಇಲ್ಲಿ ಕೊಡುವುದು ತಡವಾಗುತ್ತೆ. ಗೃಹ ಲಕ್ಷ್ಮೀಯದ್ದು ಯಾವುದೇ ಸಮಸ್ಯೆ ಇಲ್ಲ ಕೊಡ್ತಾ ಇದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now