Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಎಂ ಆಗ್ತಿನೋ ಇಲ್ವೋ.. ಆದರೆ : ಮೈತ್ರಿ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು..?

---Advertisement---

 

ಬೆಂಗಳೂರು: ಇತ್ತೀಚೆಗಷ್ಟೇ ಛಲವಾದಿ ನಾರಾಯಣಸ್ವಾಮಿ ಅವರು ಕುಮಾರಸ್ವಾಮಿ ಅವರು ಸಿಎಂ ಆಗ್ಬೇಕು ಅಂದ್ರೆ 130 ಸೀಟನ್ನ ಜೆಡಿಎಸ್ ಗೆಲ್ಲಲಿ ಅಂದಿದ್ದರು. ಈ ಬಗ್ಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಲ್ಲಿವರೆಗೂ ಏನು ಹೇಳಿದ್ದೀನಿ, ಇಂಥ ಭ್ರಷ್ಟ, ಕೆಟ್ಟ ಸರ್ಕಾರವನ್ನು ತೆಗೀಬೇಕು ಅನ್ನೋದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಆಗೋದು ಎಲ್ಲಾ ಆಮೇಲೆ ಮುಂದಕ್ಕೆ ಎಂದಿದ್ದಾರೆ.

ಈ ರಾಜ್ಯದಲ್ಲಿ ಒಂದು ಉತ್ತಮವಾದಂತ, ಜನತಾ ಸರ್ಕಾರ ಬರಬೇಕು. ಜನಗಳ ಭಾವನೆಗಳಿಗೆ ಸ್ಪಂದಿಸುವಂತ ಸರ್ಕಾರ ಬರಬೇಕು. ಅದಕ್ಕಿಂತ ಭ್ರಷ್ಟ ಸರ್ಕಾರ ತೆಗಿಬೇಕು ಅನ್ನೋದು ನನ್ನ ಅಜೆಂಡಾ. ಇಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಚರ್ಚೆ ಇಲ್ಲ. ಅದೇನೋ ಗಾದೆ ಮಾತೆ ಇಲ್ಲಾ ಕೂಸು ಹುಟ್ಟೋಕು ಮುಂಚೆನೆ ಕುಲಾವಿ ಹೊಲೆಸಿದ್ರು ಅಂತ. ಇಲ್ಲಿ ಪ್ರಶ್ನೆ ಇನ್ನು ಎರಡು ವರ್ಷ ಇದೆ. ಬಹಳ ಶ್ರಮ ಹಾಕ್ಬೇಕಿದೆ. ಯಾರೋ ಮಾತನ್ನಾಡುವುದಕ್ಕೆ ಈಗ ಉತ್ತರ ಕೊಟ್ಟರೆ‌ ಬಹುಶಃ ನನ್ನ ಆಲೋಚನೆಯಲ್ಲಿ ಇನ್ ಮೆಚ್ಯೂರ್ ಅಂತಾರೆ ಎಂದಿದ್ದಾರೆ.

ಇದೆ ವೇಳೆ ರೆಸಾರ್ಟ್ ರಾಜಕೀಯದ ಬಗ್ಗೆ ಮಾತನಾಡಿ, ಅದೆಲ್ಲಾದರೂ ಹೋಗಲಿ ನಾಡಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಬೇಕು. ನಾವೂ ಸ್ವಲ್ಪ ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಬರೋದಕ್ಕೆ ಹೋಗ್ತೀನಿ ಅಂತಿದ್ದಾರೆ. ಹೋಗಲಿ ಬಿಡಿ. ವಂದೇ ಮಾತರಂ ನಿಂದ ಯಾರಿಗೆ ಏನ್ ತೊಂದರೆ ಇದೆ. ಇದರಿಂದ ಏನಾದರೂ ಅವಮಾನವಾ. ಈ ರೀತಿಯ ವಿಚಾರಗಳನ್ನ ಹೊರತುಪಡಿಸಿ ರಾಜ್ಯದಲ್ಲಿ ಲೂಟಿ ಆಗ್ತಾ ಇದೆಯಲ್ಲ ಆ ಲೂಟಿಯನ್ನ ಸರಿಪಡಿಸೋದು ಹೇಗೆ ಎಂಬುದನ್ನ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...