ಮಾರುಕಟ್ಟೆಗೆ ಹಲವು ದಿನಗಳಿಂದಾನೇ ಕಿತ್ತಳೆ ಹಣ್ಣು ಬಂದಿದೆ. ಚಳಿಗಾಲಕ್ಕೆ ದೇಹದಲ್ಲಿ ನೀರಿನಂಶ ಸೇರಿಕೊಳ್ಳಬೇಕು ಅಂದ್ರೆ ಹೆಚ್ಚೆಚ್ಚು ಕಿತ್ತಳೆಯನ್ನು ತಿನ್ನಬೇಕು. ಆದರೆ ಕಿತ್ತಳೆ ಹಣ್ಣು ತಿನ್ನುವಾಗ ಹಲವರು ಸಾಕಷ್ಟು ತಪ್ಪುಗಳನ್ನ ಮಾಡುತ್ತಾರೆ. ಹಾಗಾದ್ರೆ ಆಗುವ ತಪ್ಪುಗಳೇನು..? ಹೇಗೆ ಹಣ್ಣನ್ನ ತಿನ್ನಬೇಕು ಗೊತ್ತಾ..?
* ಬಿಳಿ ನಾರನ್ನು ತೆಗೆದು ತಿನ್ನುವುದರಿಂದ ಏನು ಪ್ರಯೋಜನವಿಲ್ಲ. ಅದರಲ್ಲಿ ಫೈಬರ್ ಅಂಶ ಹೆಚ್ಚಾಗಿಯೇ ಅಡಗಿದೆ.ಬಿಳಿ ನಾರಿನಲ್ಲಿ ವಿಟಮಿನ್ ಸಿ ಅಡಗಿದೆ. ವಿಟಮಿನ್ ಸಿ ಮನುಷ್ಯನ ದೇಹಕ್ಕೆ ಬಹಳ ಮುಖ್ಯ.
* ಹೃದಯದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುತ್ತದೆ. ಆಗಾಗ ಆರೆಂಜ್ ತಿನ್ನುವುದರಿಂದ ಅದರಲ್ಲೂ ನಾರಿನ ಜೊತೆಗೆ ತಿನ್ನುವುದರಿಂದ ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡುತ್ತದೆ.
* ಅಷ್ಟೇ ಅಲ್ಲ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೂರ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
* ಚರ್ಮದ ಕಾಂತಿಗೂ ಆರೇಂಜ್ ಬೆಸ್ಟ್ ಮದ್ದು. ಪ್ರತಿದಿನ ಒಂದಾದರೂ ಆರೆಂಜ್ ತಿನ್ನುತ್ತಾ ಬಂದರೆ ಚರ್ಮ ಹೊಳೆಯುತ್ತದೆ. ಅದರ ಸಿಪ್ಪೆಯನ್ನಯ ಒಣಗಿಸಿ, ಪುಡಿ ಮಾಡಿ ಫೇಸ್ ಪ್ಯಾಕ್ ಕೂಡ ಮಾಡಬಹುದು.
* ಇನ್ನು ರಕ್ತಕ್ಕೂ ಇದು ಸಂಬಂಧಪಟ್ಟಿದೆ. ರಕ್ತ ಪರಿಚಲನೆಗೆ ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ ರಕ್ತ ಒಂದೇ ಕಡೆ ಕ್ಲಾಟ್ ಆಗೋದಕ್ಕೆ ಬಿಡಲ್ಲ.
* ಆರೆಂಜ್ ನಲ್ಲಿ ಫೈಬರ್ ಅಂಶ ಹೆಚ್ಚಾಗಿ ಅಡಗಿದೆ. ತೂಕ ಇಳಿಕೆಗೆ, ಬೊಜ್ಜು ಕರಗಿಸಲು ಇನ್ನೆಲ್ಲೋ ಹೋಗಬೇಕಾದ, ಇನ್ನೇನೋ ಫಾಲೋ ಮಾಡಬೇಕಾದ ಅನಿವಾರ್ಯತೆ ಇಲ್ಲ. ಡಯೆಟ್ ಮಾಡುವವರು ತಮ್ಮ ಆಹಾರದಲ್ಲಿ ಆರೆಂಜ್ ಸೇರಿಸಿಕೊಳ್ಳಿ.
* ಆರೆಂಜ್ ನಲ್ಲಿರುವಷ್ಟೇ ವಿಟಮಿನ್ ಸಿ ಆ ನಾರಿನಲ್ಲೂ ಇದೆ. ಯಾವುದೇ ಕಾರಣಕ್ಕೂ ನಾರನ್ನು ತೆಗೆದು ಆರೆಂಜ್ ತಿನ್ನಬೇಡಿ. ಹಾಗೇ ತಿಂದರೆ ಲಾಭ ಜಾಸ್ತಿ.