ಕಲಬುರಗಿ: ಕೇಂದ್ರಿಯ ವಿವಿಯಲ್ಲಿ ಸ್ವಾಮಿ ವಿವೇಕಾನಂದ ಅವರಿಗೆ ಅವಮಾನ ಆದ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರಿಯ ವಿವಿಗೆ ನಾನು ಆದಷ್ಟು ಬೇಗ ಭೇಟಿ ನೀಡುತ್ತೇನೆ. ವಿಧ್ಯಾಭ್ಯಾಸ ನೀಡುವುದನ್ನು ಬಿಟ್ಟು ವಿವಿ ಬೇರೆಲ್ಲವನ್ನು ಮಾಡುತ್ತಿದೆ. ಕಲಬುರಗಿಗಿಂತ ಸೆಂಟ್ರಲ್ ವಿವಿಯಲ್ಲಿಯೇ ಜಾಸ್ತಿ ರಾಜಕೀಯ ನಡೆಯುತ್ತಿದೆ. ವಿವಿಯವರು ಕೇಂದ್ರಕ್ಕೆ ಮಾತ್ರ ಸಂಬಂಧ ಇದ್ದೀವಿ ಎಂದುಕೊಂಡಿರಬಹುದು. ಆದರೆ ರಾಜ್ಯ ಕೂಡ ಸಾಕಷ್ಟು ಸವಲತ್ತುಗಳನ್ನು ನೀಡಿದೆ.
ಒಂದು ಸಲ ಈಗಾಗಲೇ ಹೇಳಿದ್ದೇನೆ. ಆದರೂ ತಿದ್ದುಕೊಂಡಿಲ್ಲ. ಇನ್ನೊಂದು ಬಾರಿ ಹೇಳುತ್ತೇನೆ. ಅಲ್ಲಿ ಆರ್ ಎಸ್ ಎಸ್ ಕಚೇರಿ ತೆರೆಯುವುದಕ್ಕೆ ಬಿಡುವುದಿಲ್ಲ. ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸಕ್ಕಾಗಿ ಕೇಂದ್ರೀಯ ವಿವಿ ತಂದಿರುವುದು, ಆರ್ ಎಸ್ ಎಸ್ ಕಚೇರಿ ತೆರೆಯುವುದಕ್ಕೆ ಅಲ್ಲ. ಯಾವ್ಯಾವ ಉದ್ದೇಶಗಳಿಗೆ ತೆರೆದಿದ್ದೀವೋ ಅದೇ ಉದ್ದೇಶ ನೆರವೇರಬೇಕು ಎಂದಿದ್ದಾರೆ
ಇನ್ನು ಇದೇ ವೇಳೆ ಚೈತ್ರಾ ಕುಂದಾಪುರದ ಬಗ್ಗೆ ಮಾತನಾಡಿ, ಎಲ್ಲರೂ ಯಾಕೆ ಕುಮಾರ ಕೃಪಾದಿಂದಾನೇ ಆಪರೇಟ್ ಆಗಿರುವುದು..? ಇದೇ ಚೈತ್ರಾ ಕುಂದಾಪುರ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದವರು ಎಂದಿದ್ದಾರೆ.