ವಿವಿ ತರಿಸಿರುವುದು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ.. ಆರ್ ಎಸ್ ಎಸ್ ಕಚೇರಿಗೆ ಅಲ್ಲ : ಪ್ರಿಯಾಂಕ್ ಖರ್ಗೆ

Facebook
Twitter
Telegram
WhatsApp

ಕಲಬುರಗಿ: ಕೇಂದ್ರಿಯ ವಿವಿಯಲ್ಲಿ ಸ್ವಾಮಿ ವಿವೇಕಾನಂದ ಅವರಿಗೆ ಅವಮಾನ ಆದ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರಿಯ ವಿವಿಗೆ ನಾನು ಆದಷ್ಟು ಬೇಗ ಭೇಟಿ ನೀಡುತ್ತೇನೆ. ವಿಧ್ಯಾಭ್ಯಾಸ ನೀಡುವುದನ್ನು ಬಿಟ್ಟು ವಿವಿ ಬೇರೆಲ್ಲವನ್ನು ಮಾಡುತ್ತಿದೆ. ಕಲಬುರಗಿಗಿಂತ ಸೆಂಟ್ರಲ್ ವಿವಿಯಲ್ಲಿಯೇ ಜಾಸ್ತಿ ರಾಜಕೀಯ ನಡೆಯುತ್ತಿದೆ. ವಿವಿಯವರು ಕೇಂದ್ರಕ್ಕೆ ಮಾತ್ರ ಸಂಬಂಧ ಇದ್ದೀವಿ ಎಂದುಕೊಂಡಿರಬಹುದು. ಆದರೆ ರಾಜ್ಯ ಕೂಡ ಸಾಕಷ್ಟು ಸವಲತ್ತುಗಳನ್ನು ನೀಡಿದೆ.

ಒಂದು ಸಲ ಈಗಾಗಲೇ ಹೇಳಿದ್ದೇನೆ. ಆದರೂ ತಿದ್ದುಕೊಂಡಿಲ್ಲ. ಇನ್ನೊಂದು ಬಾರಿ ಹೇಳುತ್ತೇನೆ. ಅಲ್ಲಿ ಆರ್ ಎಸ್ ಎಸ್ ಕಚೇರಿ ತೆರೆಯುವುದಕ್ಕೆ ಬಿಡುವುದಿಲ್ಲ. ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸಕ್ಕಾಗಿ ಕೇಂದ್ರೀಯ ವಿವಿ ತಂದಿರುವುದು, ಆರ್ ಎಸ್ ಎಸ್ ಕಚೇರಿ ತೆರೆಯುವುದಕ್ಕೆ ಅಲ್ಲ. ಯಾವ್ಯಾವ ಉದ್ದೇಶಗಳಿಗೆ ತೆರೆದಿದ್ದೀವೋ ಅದೇ ಉದ್ದೇಶ ನೆರವೇರಬೇಕು ಎಂದಿದ್ದಾರೆ

ಇನ್ನು ಇದೇ ವೇಳೆ ಚೈತ್ರಾ ಕುಂದಾಪುರದ ಬಗ್ಗೆ ಮಾತನಾಡಿ, ಎಲ್ಲರೂ ಯಾಕೆ ಕುಮಾರ ಕೃಪಾದಿಂದಾನೇ ಆಪರೇಟ್ ಆಗಿರುವುದು..? ಇದೇ ಚೈತ್ರಾ ಕುಂದಾಪುರ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದವರು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸರ್ಕಾರಿ ಕೆಲಸ ಕೊಡಿಸುವುದಾಗಿ ಸಚಿವರ ಆಪ್ತರಿಂದ ಕೋಟಿ ಕೋಟಿ ಲೂಟಿ : ರಾಯಚೂರು ನಿರುದ್ಯೋಗಿ ಯುವಕರಿಗೆ ಮೋಸ..!

ರಾಯಚೂರು: ರಾಜ್ಯದಲ್ಲಿ ಚೈತ್ರಾ ಮೋಸ ಇನ್ನು ವಿಧವಿಧವಾಗಿ ತೆರೆದುಕೊಳ್ಳುತ್ತಲೇ ಇದೆ. ಬಿಜೆಪಿ ಎಂಎಲ್ಎ ಟಿಕೆಟ್ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾಳೆ‌. ಆದರೆ ಈಗ ಮತ್ತೊಂದು ಮೋಸ ಬಯಲಾಗಿದೆ. ಸಚಿವರ ಆಪ್ತರೊಬ್ಬರು ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್

ಕಾವೇರಿ ವಿಚಾರಕ್ಕೆ ಕಣ್ಣೀರು ಹಾಕಿದ ಮಾಜಿ ಪ್ರಧಾನಿ ದೇವೇಗೌಡ..!

  ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ಆಗ್ರಹಿಸಿ ಇಂದು ಹಲವಾರು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡ್ರು ಸುದ್ದಿಗೋಷ್ಟಿ ನಡೆಸಿ, ಕಾವೇರಿ ವಿಚಾರಕ್ಕೆ ಕಣ್ಣೀರು ಹಾಕಿದ್ದಾರೆ‌. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ

ಹಿರಿಯೂರಿನಲ್ಲಿ ನಡೆದ ಜನತಾ ದರ್ಶನ ಹೇಗಿತ್ತು ? ಸಚಿವ ಸುಧಾಕರ್ ಅಧಿಕಾರಿಗಳಿಗೆ ನೀಡಿದ ಸೂಚನೆ ಏನು ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…!

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.25 : ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಬೇಕು ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ  ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿರಿಯೂರು

error: Content is protected !!