Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟಂಗ್ ಕ್ಲೀನರ್ ಕುರಿತು ಡಾ ಕೆ ವಿ ಸಂತೋಷ್ ಅವರ ಉಪಯುಕ್ತ ಮಾಹಿತಿ ಇಲ್ಲಿದೆ…!

---Advertisement---

ಸುದ್ದಿಒನ್

ಸಾಮಾನ್ಯವಾಗಿ ನಾವು ಬಾಯಿಯನ್ನು ಸ್ವಚ್ಛ ಮಾಡಲು ಹಲ್ಲು ಪುಡಿ ,ಪೇಸ್ಟ್ ,ಬ್ರಷ್ ಬಳಸುತ್ತೇವೆ. ಆದರೆ ಇದು ಎಂದಿಗೂ ಸಂಪೂರ್ಣ ಆಗಲಾರದು. ಕಾರಣ ಕೇವಲ ಹಲ್ಲನ್ನು ಸ್ವಚ್ಛ ಮಾಡಿದ ತಕ್ಷಣ ಇಡೀ ಬಾಯಿ ಸ್ವಚ್ಛವಾಗುವುದಿಲ್ಲ. ಹಲ್ಲಿನ ಸಂದುಗಳು ವಸಡುಗಳ ಮೇಲೆ ಕುಳಿತ ಪ್ಲ್ಯಾಕ್ ( ಆಹಾರದ ಉಳಿಕೆ ಅಂಶದ ಪೊರೆ ) ಬ್ರಷ್ ನಿಂದ ಸ್ವಚ್ಛವಾದರೂ ಕೂಡ ನಾಲಿಗೆಯನ್ನು ಕೂಡ ಸ್ವಚ್ಛ ಮಾಡಿದಾಗಲಷ್ಟೇ ಬಾಯಿಯ ಸ್ವಚ್ಛತೆ ಸಂಪೂರ್ಣವಾಗುತ್ತದೆ. ಆ ಕಾರಣಕ್ಕೆ ಪ್ರತಿ ದಿನವೂ ಕೂಡ ಬ್ರಷ್ ಮಾಡಿದ ನಂತರ ನಾಲಿಗೆಯನ್ನು ಕೂಡ ಕಡ್ಡಾಯವಾಗಿ ಸ್ವಚ್ಛ ಮಾಡಿಕೊಳ್ಳಬೇಕು. ಕೆಲವರಲ್ಲಿ ದಿನಕ್ಕೆ ಎರಡು ಮೂರು ಬ್ರಷ್ ಮಾಡಿದರೂ ಕೂಡ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ.ಅದಕ್ಕೆ ನಾಲಿಗೆಯು ಸ್ವಚ್ಛವಾಗದಿರುವುದೇ ಮುಖ್ಯ ಕಾರಣವಾಗಿರುತ್ತದೆ.
ಕೆಲವರು ಬೆರಳಿನಿಂದ, ಮತ್ತೆ ಕೆಲವರು ಬ್ರಷ್ನ ಬ್ರಿಸಲ್ ಭಾಗದಿಂದ ನಾಲಿಗೆಯನ್ನು ಸ್ವಚ್ಛ ಮಾಡುತ್ತಾರೆ. ಆದರೆ ಇದು ಕೂಡ ಸಂಪೂರ್ಣ ಉಪಯೋಗಕಾರಿಯಲ್ಲ,ಬದಲಾಗಿ ಟಂಗ್ ಕ್ಲೀನರ್ ಬಳಕೆಯಿಂದ  ಮಾತ್ರ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಬಹುದಾಗಿದೆ. ಒಟ್ಟಾರೆ ಬಾಯಿಯ ಆರೋಗ್ಯ ಸುಧಾರಿಸಲು ಇದು ಅತ್ಯಾವಶ್ಯಕವಾಗಿರುತ್ತದೆ. ಬಾಯಿಯ ದುರ್ವಾಸನೆಯನ್ನು ಶೇಕಡ 80ರಷ್ಟು ನಾಲಿಗೆ ಸ್ವಚ್ಛತೆಯಿಂದ ತಡೆಯಬಹುದಾಗಿದೆ.

ಏನಿದು ಟಂಗ್ ಕ್ಲೀನರ್ :
ಇದೊಂದು ವಿಶಿಷ್ಟ ಸಾಧನವಾಗಿದ್ದು ಬಾಯಿ ಮತ್ತು ದಂತ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಬಾಯಲ್ಲಿ ಸೇರಿರುವ ಸತ್ತ ಜೀವಕೋಶಗಳ ಅಂಶ, ಕೊಳೆ, ಬ್ಯಾಕ್ಟೀರಿಯಾ, ಉಳಿಕೆ ಆಹಾರದ ಅಂಶ… ಎಲ್ಲವನ್ನು ಸಂಪೂರ್ಣವಾಗಿ ನಾಲಿಗೆಯಿಂದ ತೆಗೆದುಹಾಕುತ್ತದೆ. ನಾಲಿಗೆಯು ಸಂಪೂರ್ಣ ಸಮತಟ್ಟಾಗಿರದೆ ಹುರುಕು (Roughness )ಹೊಂದಿರುತ್ತದೆ. ಆಹಾರ ಜಾರದೆ ನಾಲಿಗೆಗೆ ರುಚಿ ಸಿಗುವಂತಾಗಲು, ಆಹಾರ ಹಿಡಿತ ಸಿಗಲು ಆಹಾರ ನುಣ್ಣಗಾಗಲು ಈ ಹುರುಕು ಅನುಕೂಲ ಮಾಡಿಕೊಡುತ್ತದೆ. ನಾಲಿಗೆ ಮೇಲಿನ ಅಂಕುಡೊಂಕು ಮೇಲ್ಪದರವು ಸ್ವಲ್ಪವಾದರೂ ಆಹಾರ ಅಂಶವನ್ನು ನಾಲಿಗೆಯ ಮೇಲ್ಭಾಗದಲ್ಲಿ ಉಳಿಸುತ್ತದೆ. ಇದು ಉಸಿರಿನ ದುರ್ವಾಸನೆಗೆ ದಂತ ಸಮಸ್ಯೆಗೆ,ಅನಾರೋಗ್ಯಕ್ಕೆ… ಕಾರಣವಾಗುತ್ತದೆ.‌ಆ ಕಾರಣಕ್ಕೆ ನಾಲಿಗೆಯನ್ನು ಕೂಡ ನಾವು ಸ್ವಚ್ಛ ಮಾಡಲೇಬೇಕು. ಕೆಲವರು ತಿಳಿದಂತೆ ಟಂಗ್ ಕ್ಲೀನರ್ ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ,ಬದಲಾಗಿ ನಾಲಿಗೆಯ ಕೊಳೆ ತೆಗೆದ ಮೇಲೆ  ರುಚಿಯನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಬ್ರಷ್ ಮಾಡಿದ ನಂತರ ಇದನ್ನು 45° ಕೋನದಲ್ಲಿ ನಾಲಿಗೆಯಿಂದ ಶುರು ಮಾಡಿ  ಹಿಂಭಾಗದಿಂದ ಹೊರಭಾಗಕ್ಕೆ ಎರಡರಿಂದ ಮೂರು ಬಾರಿ ನಯವಾಗಿ ಉಜ್ಜಿ . ನಂತರ ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ ಉಗಿಯಬೇಕು.

ಟಂಗ್ ಕ್ಲೀನರನ್ನು ಬಳಸುವಾಗ ಅತ್ಯಂತ ನಾಜೂಕಾಗಿ ಬಳಸಬೇಕು. ಬಳಸುವಾಗ ನಿಧಾನವಾಗಿ ನಾಲಿಗೆ ಮೇಲ್ಭಾಗವನ್ನು ನಯವಾಗಿ ಉಜ್ಜಿಕೊಳ್ಳಬೇಕು. ನಾಲಿಗೆಯನ್ನು ಜೋರಾಗಿ ಎಳೆಯಬಾರದು.
*ಪ್ರತಿದಿನ ಬೆಳಿಗ್ಗೆ ಒಂದು ಬಾರಿ ಮಾತ್ರ ಮಾಡಬೇಕು.
*ಪ್ರತಿ ಮೂರರಿಂದ ನಾಲ್ಕು ತಿಂಗಳಿಗೆ ಟಂಗ್ ಕ್ಲೀನರ್ ಹೊಸದು ಬಳಸಬೇಕು. ತಾವು ಬಳಸುವ ಟಂಗ್ ಕ್ಲೀನರ್ ಬೇರೆಯವರಿಗೆ ಕೊಡಬಾರದು. ನಿಮಗೆ ಅನುಕೂಲಕಾರಿಯಾದ ಕ್ಲೀನರ್ ಮಾತ್ರ ಬಳಸಬೇಕು.  ಅದರಲ್ಲಿ ಸ್ಟೀಲ್, ಪ್ಲಾಸ್ಟಿಕ್ ಲೋಹ, ಬ್ಯಾಟರಿ ಚಾಲಿತ ಕ್ಲೀನರ್.. ಗಳಿದ್ದು,ನಿಮಗೆ ಯಾವ ರೀತಿಯ ಕ್ಲೀನರ್ ಬೇಕೆಂದು ನೀವೇ ಸ್ವಯಂ ನಿರ್ಧಾರ ಮಾಡಿಕೊಳ್ಳಿ.
*ಪ್ರತಿದಿನ ಬಳಕೆ ಮಾಡುವ ಮೊದಲು ಹಾಗೂ ಬಳಕೆ ಮಾಡಿದ ನಂತರ ಕ್ಲೀನರ್ ಸ್ವಚ್ಛ ಮಾಡಬೇಕು.
*ತೇವಾಂಶ ಇರದಂತೆ ಒಣಗಲು ಬಿಡಬೇಕು.
*ಪ್ರತಿ ದಿನ ಬ್ರಷ್ ಮಾಡಿದ ನಂತರವಷ್ಟೇ ಕ್ಲೀನರ್ ಬಳಸಬೇಕು.

ಯಾವಾಗ ಬಳಸಬಾರದು :
* ನಿಮಗೆ ತೀವ್ರ ಅನಾರೋಗ್ಯ ಗಂಟಲು ನೋವು,ವಾಂತಿ, ನಾಲಿಗೆಯಲ್ಲಿ ಅಲ್ಸರ್, ಹುಣ್ಣು, ಗಾಯಗಳಾಗಿದ್ದಾಗ ರಕ್ತಸ್ರಾವವಿದ್ದಾಗ ಬಳಕೆ ಮಾಡಬಾರದು.
* ತುಂಬಾ ಸಣ್ಣ ಮಕ್ಕಳಿಗೆ ಕ್ಲೀನರ್ ಬಳಸಬಾರದು. ಮಕ್ಕಳ ನಾಲಿಗೆಯನ್ನು ಬ್ರಷ್ ನಲ್ಲಿ ದೊಡ್ಡವರೇ ಸ್ವಚ್ಛ ಮಾಡಬೇಕು.
* ರಕ್ತಸ್ರಾವ ಇರುವ ನಾಲಿಗೆಯ ಭಾಗ,ರಕ್ತಸ್ರಾವಕ್ಕೆ ಕಾರಣವಾಗುವ ಔಷಧಗಳ ಬಳಕೆ ಮಾಡುವವರು ಬಹಳಷ್ಟು ನಾಜುಕಿನಿಂದ ಬಳಸಬೇಕು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...