ಬೆಂಗಳೂರು: ಇತ್ತೀಚೆಗಷ್ಟೇ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆ ವೇಳೆ ರಾಧಿಕಾ ಕುಮಾರಸ್ವಾಮಿ ಅವರು ಜಮೀರ್ ಜೊತೆಗೆ ನಡೆಸಿದ ಹಣದ ವ್ಯವಹಾರದ ಬಗ್ಗೆ ಒಪ್ಪಿಕೊಂಡಿದ್ದಾರೆ. ಲಕ್ಕಿ ಸಿನಿಮಾದಲ್ಲಿ ಬಂದಂತ ಲಾಭದಿಂದ ಎರಡು ಕೋಟಿಯನ್ನ ಜಮೀರ್ ಅಹ್ಮದ್ ಅವರಿಗೆ ಸಾಲವಾಗಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದೀಗ ಆ ಪ್ರಶ್ನೆಗೆ ಸಚಿವ ಜಮೀರ್ ಅಹ್ಮದ್ ಉತ್ತರಿಸಿದ್ದಾರೆ.
ಮನೆ ತೆಗೆದುಕೊಳ್ಳುವಾಗ ರಾಧಿಕಾ ಕುಮಾರಸ್ವಾಮಿ ಅವರು ಎರಡು ಕೋಟಿ ಹಣವನ್ನ ನೀಡಿದ್ದಾರೆ. ಇನ್ ಕಂ ಟ್ಯಾಕ್ಸ್ ನಲ್ಲಿ ನಾನು ತೋರಿಸಿದ್ದೀನಿ, ಅವರು ತೋರಿಸಿದ್ದಾರೆ. ನಮ್ಮ ಮನೆ ಮೇಲೆ ಇಡಿ ರೇಡ್ ಆಗಿತ್ತು. ಆ ಕೇಸನ್ನ ಎಸಿಪಿಗೆ ನೀಡಲಾಗಿತ್ತು. ಎಸಿಪಿ ಆದ್ಮೇಲೆ ಲೋಕಾಯುಕ್ತಕ್ಕೆ ರೆಫರ್ ಮಾಡಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಸ್ಟೇಟ್ಮೆಂಟ್ ತೆಗೆದುಕೊಳ್ಳಬೇಕಿತ್ತು ತೆಗೆದುಕೊಂಡಿದ್ದಾರೆ. ಕೊಟ್ಟಿದ್ದೀನಿ ಅಂತ ಅವರು ಹೇಳಿದ್ದಾರೆ, ನಾನು ಹೇಳಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಕೆಜಿಎಫ್ ಬಾಬು ಕೂಡ ಜಮೀರ್ ಅಹ್ಮದ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಕೆಜಿಎಫ್ ಬಾಬು, 2013ರಲ್ಲಿ ಜಮೀರ್ ಸಾಹೇಬ್ರು ಒಂದು ಮನೆ ತಗೊಂಡ್ರು. ಶಿವಾಜಿನಗರದ ಬಂಬೂನಗರದಲ್ಲಿ. ಅಸ್ಲಾಂ ಪಾಷಾ ಎಂಬುವವರಿಂದ ತೆಗೆದುಕೊಂಡಿದ್ದರು. ಅದಕ್ಕೆ ದುಡ್ಡು ಕಟ್ಟಿಲ್ಲ ಅಂತ ಫೈನಲ್ ನೋಟೀಸ್ ಬಂದಿಲ್ಲ. ಎರಡು ತಿಂಗಳು ಸಮಯ ನೀಡಿದ್ದರು. ಆಗ ಜಮೀರ್ ನನ್ನ ಕರೆದಿದ್ದರು. ಮರ್ಯಾದೆ ಹೋಗ್ತಿದೆ, ಮೂರುವರೆ ಕೋಟಿ ಹಣ ಬೇಕು ಅಂತ ಕೇಳಿದ್ರು. ಆರು ತಿಂಗಳಲ್ಲಿಯೇ ಕೊಡ್ತೀನಿ ಅಂದಿದ್ರು. ಸರಿ ಅಂತ ಬ್ಯಾಂಕ್ ಗೆ ಹೋಗಿ ನೇರವಾಗಿ ಕಟ್ಟಿ ಬಂದ್ವಿ. ಆದ್ರೆ ಇಲ್ಲಿಯವರೆಗೂ ಹಣ ಕೊಟ್ಟಿಲ್ಲ ಎಂದಿದ್ದಾರೆ.

