ಬಿಗ್‌ಬಾಸ್ 10ರ ಸ್ಪರ್ಧಿ ವರ್ತೂರು ಸಂತೋಷ್, ಈ ಬಾರಿ ಬಿಗ್ ಬಾಸ್ ರನ್ನರ್ ಅಪ್‌ಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈಗ
ಮೊದಲ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಕರೆ ಮಾಡಿ 2 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಾರೆ.
ಬಿಗ್‌ಬಾಸ್ 10ರಲ್ಲಿ ವರ್ತೂರು ಸಂತೋಷ್ ಇದ್ದರು. ನಾಲ್ಕನೆಯ ರನ್ನರ್ ಅಪ್ ಆಗಿದ್ದರು. ಬಿಗ್ ಬಾಸ್ ನಲ್ಲಿ ಕೊನೆಯ ಕ್ಷಣದವರೆಗೆ ಬಂದು, ಗೆಲುವು ಸಾಧಿಸಿಲ್ಲ ಎಂದರೆ ತುಂಬಾ ನೋವಾಗುತ್ತದೆ. ಆದ್ದರಿಂದ 2ನೇ ರನ್ನರ್ ಅಪ್‌ಗೆ ಹಣವನ್ನು ನೀಡಲು ಆಸೆ ಪಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ , ಬಿಗ್‌ಬಾಸ್ ವೇದಿಕೆಯ ಮೇಲೆ ನನ್ನನ್ನು ಕರೆಯಬೇಕು. ಅಲ್ಲಿ 2ನೇ ರನ್ನರ್ ಅಪ್‌ಗೆ ಹಣವನ್ನು ನೀಡುತ್ತೇನೆ. ಬಿಗ್‌ಬಾಸ್ ವೇದಿಕೆ ಮೇಲೆ ನನ್ನನ್ನು ಕರೆದಿಲ್ಲ ಎಂದರೆ, ರನ್ನರ್ ಅಪ್‌ಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎಂದಿದ್ದರು.

ಇದೀಗ ರಕ್ಷಿತಾ ಶೆಟ್ಟಿ ಅವರಿಗೆ ಕರೆ ಮಾಡಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ ವರ್ತೂರು ಸಂತೋಷ್. ಮನೆಗೆ ಬಂದಾಗ, ಮೀನು ತರಿಸಿ ಇಡುತ್ತೇನೆ. ಫ್ರೈ ಮಾಡಿಕೊಡಬೇಕು ಎಂದು ಹೇಳಿದ್ದಾರೆ ವರ್ತೂರು ಸಂತೋಷ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














