Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂಡ್ಯದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು..?

---Advertisement---

ಮಂಡ್ಯ: ಇಂದು ಆದಿಚುಂಚನಗಿರಿಗೆ ಭೇಟಿ ನೀಡಿದ್ದಂತ ಪಿಎಂ ಮೋದಿ, ಇಡೀ ಮಠವನ್ನ ಸುತ್ತಾಡಿದ್ರು. ಬಳಿಕ ಗುರುಭೈರವೈಕ್ಯ ಮಂದಿರವನ್ನ ಉದ್ಘಾಟನೆ ಮಾಡಿದ್ರು. ಈ ವೇಳೆ ತಮ್ಮ ಭಾಷಣದಲ್ಲಿ ಮಂಡ್ಯ ಹಾಗೂ ಕರ್ನಾಟಕವನ್ನ ಹಾಡಿ ಹೊಗಳಿದರು. ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದರು.

ಇಂದು ನನ್ನ ಮನಸ್ಸಿನ ಭಾವನೆಗಳನ್ನು ಶಬ್ಧದಲ್ಲಿ ಹೇಳಲು ಕಷ್ಟ ಸಾಧ್ಯ. ಕಾಲಭೈರವನ ಮಂದಿರದ ದರ್ಶನ, ಪೂಜೆ, ಶ್ರೀಗುರುಭೈರವೈಕ್ಯ ಮಂದಿರದ ಉದ್ಘಾಟನೆಯಲ್ಲಿ ಸಾಕ್ಷಿಯಾಗುವುದು, ಐತಿಹಾಸಿಕ ಜ್ವಾಲಾ ಪೀಠದಲ್ಲಿ, ಆಧ್ಯಾತ್ಮಿಕ ಪೀಠದಲ್ಲಿ ಸಂತರ ಸಾನಿಧ್ಯದಲ್ಲಿ ಇರಲು, ಜನ ಸಮೂಹವನ್ನು ಭೇಟಿಯಾಗುತ್ತಿರುವ ಈ ನನ್ನ ವಿಶೇಷ ಅನುಭವ ಯಾವಾಗಲೂ ನನ್ನ ಜೊತೆಗೆ ಇರುತ್ತದೆ‌. ಇದು ನನ್ನ ಸೌಭಾಗ್ಯ. ಕರ್ನಾಟಕಕ್ಕೆ ಬರುವುದೆಂದರೆ ನನಗೆ ತುಂಬಾ ಸಂತೋಷದ ವಿಷಯ.

ಪ್ರತಿ ಬಾರಿ ಇಲ್ಲಿಗೆ ಬಂದಾಗ ನನಗೆ ಹೊಸ ಪ್ರೇರಣೆ ಸಿಗುತ್ತದೆ. ಆದರೆ ಇವತ್ತು ಸಕ್ಕರೆ ನಗರ ಮಧುರ ಮಂಡ್ಯದ ಭೇಟಿ ಎಲ್ಲಾ ರೀತಿಯಲ್ಲೂ ಬಹಳ ಮಹತ್ವದ್ದಾಗಿದೆ. ಈ ಭೂಮಿ ಕಬ್ಬಿನ ಸಿಹಿಯಿಂದ ಹೆಸರಿಡಲ್ಪಡುತ್ತದೆ. ಇಲ್ಲಿನ ಜನರ ಭಾಷೆಯಲ್ಲೂ ಅದೇ ಸಿಹಿ ಕಾಣಿಸುತ್ತದೆ. ಜನರ ಸ್ವಾಗತ, ಹೃದಯವನ್ನು ಮುಟ್ಟುತ್ತದೆ. ಕರ್ನಾಟಕ ತತ್ವಜ್ಞಾನ ಹಾಗೂ ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ದರ್ಶನ ಹಾಗೂ ಟೆಕ್ನಾಲಜಿ ಎರಡರ ಶಕ್ತಿಯೂ ಇಲ್ಲಿದೆ. ಶ್ರೀಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ರೀತಿ ಆಧ್ಯಾತ್ಮಿಕ ಕೇಂದ್ರ ಈ ಭೂಮಿಯಲ್ಲಿದೆ ಎಂದರು. ಜೊತೆಗೆ 9 ಸಂಕಲ್ಪಗಳ ಬಗ್ಗೆಯೂ ಪ್ರಧಾನಿ ಮೋದಿ ಈ ವೇಳೆ ತಿಳಿಸಿದ್ದಾರೆ. ಸಂಕಲ್ಪಗಳಿಂದ ಗುರಿಯನ್ನ ಹೇಗೆ ವೇಗವಾಗಿ ಮುನ್ನೆಡೆಸಬಹುದು ಎಂಬುದನ್ನ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now