Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಒಳ ಮೀಸಲಾತಿ ಗೊಂದಲದ ಬಗ್ಗೆ ಸಂಸದ ಗೋವಿಂದ ಕಾರಜೋಳ ಅವರು ಹೇಳಿದ್ದೇನು..?

---Advertisement---

ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಬಗ್ಗೆ ಒಂದಷ್ಟು ಗೊಂದಲ ಇನ್ನು ಬಗೆಹರಿದಂತೆ ಇಲ್ಲ. ಈ ಗೊಂದಲದ ಬಗ್ಗೆ ಸಂಸದ ಗೋವಿಂದ ಕಾರಜೋಳ ಅವರು ರಾಜ್ಯಪಾಲರ ಗಮನಕ್ಕೂ ತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿಜೀ ಅವರ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ನಮ್ಮ ಸರ್ಕಾರ ಒಳ ಮೀಸಲಾತಿ ಕೊಡುವುದಕ್ಕೆ ಒಪ್ಪಿಗೆ ಇದೆ ಎಂಬ ಮಾತನ್ನ ಕೋರ್ಟ್ ಮುಂದೆ ಹೇಳಲಾಗಿದೆ ಎಂದಿದ್ದಾರೆ.

ಈ ಸಂಬಂಧ ಸುಪ್ರೀಂ ಕೋರ್ಟ್ ಆಗಸ್ಟ್ 1-2024ಕ್ಕೆ ಆದೇಶವನ್ನು ಮಾಡಿ, ಒಳಮೀಸಲಾತಿಯನ್ನು ಕೊಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ, ಯಾರೂ ಹೆಚ್ಚು ಫಲಾನುಭವಿಗಳಿದ್ದಾರೆ, ಯಾರೂ ಕಡಿಮೆ ಫಲಾನುಭವಿಗಳಿದ್ದಾರೆ ಅದನ್ನು ಗಮನದಲ್ಲಿಟ್ಟುಕೊಂಡು ಒಳಮೀಸಲಾತಿಯನ್ನು ಮಾಡಬೇಕು ಅಂತ ಹೇಳಿ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ಅದಾದ ನಂತರ ನಾವೆಲ್ಲ ವಿಚಾರ ಮಾಡಿದ್ದೆವು, ಸಿದ್ದರಾಮಯ್ಯ ಅವರ ಸರ್ಕಾರ ಬಿಲ್ ಅನ್ನು ಮಂಡಿಸುವುದಕ್ಕೂ ಮುಂಚೆ ಸರ್ವ ಪಕ್ಷಗಳ ನಿಯೋಗ ಕರೀತಾರೆ, ಎಲ್ಲರ ಅಭಿಪ್ರಾಯವನ್ನು ಕೇಳ್ತಾರೆ ಎಂಬ ಭಾವನೆ ಇತ್ತು. ಆದರೆ ಹಾಗೇ‌ ಮಾಡ್ಲಿಲ್ಲ.

ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯನವರ ಸರ್ಕಾರ ಏಕಪಕ್ಷೀಯವಾಗಿ ನಿರ್ಣಯ ಮಾಡಿ ಯಾವುದನ್ನು ಕೂಡ ಶಾಸನ ಬದ್ಧವಾಗಿ ಮಾಡಲಿಲ್ಲ. ಸಂವಿಧಾನ ಬದ್ಧವಾಗಿಯೂ ಮಾಡಲಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಂತೆಯೂ ಮಾಡ್ಲಿಲ್ಲ. ಐದು ಕ್ಯಾಟಗರಿ ಮಾಡಿದ್ದಂತ ನಾಗಮೋಹನ್ ದಾಸ್ ಅವರ ವರದಿಯನ್ನ ಗಾಳಿಗೆ ತೂರಿ, ಮೂರು ಕ್ಯಾಟಗರಿ ಮಾಡಿದಂತೆ ಕಾಜಿ ನ್ಯಾಯವನ್ನ ಮಾಡಿದರು. ಮನಸ್ಸೋ ಇಚ್ಚೆ ಮಾಡಿದ್ದು ಅನ್ಯಾಯ. ಅದರಲ್ಲಿ ದೊಡ್ಡ ಅನ್ಯಾಯವಾಗಿದ್ದು ಅಲೆಮಾರಿ ಜನಾಂಗಕ್ಕೆ. ಆ ಕ್ಯಾಟಗರಿಯನ್ನೇ ಮರ್ಜ್ ಮಾಡಿ ಹಾಕಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...