Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SC/ST ಶಾಸಕರ ದಿಢೀರ್ ಸಭೆ ಬಗ್ಗೆ ಎಂ ಬಿ ಪಾಟೀಲ್ ಏನಂದ್ರು..?

---Advertisement---

 

ಬೆಂಗಳೂರು: ದಿಢೀರ್ ಅಂತ ಎಸ್ಸಿ, ಎಸ್ಟಿ ಶಾಸಕರ ಸಭೆಯನ್ನ ನಡೆಸಲಾಗಿದೆ. ಇದು ರಾಜಕೀಯ ಪಡಸಾಲೆಯಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪೇನಿದೆ, ಎಲ್ಲಾ ಸಮುದಾಯದವರು ಸೇರುತ್ತಾರೆ ಎಂದಿದ್ದಾರೆ.

ಲಿಂಗಾಯತರು ಸೇರುತ್ತಾರೆ, ಅದರಲ್ಲಿ ಅಂತ ತಪ್ಪೇನಿದೆ. ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಸಮುದಾಯದವರು ಸೇರಿದ್ದರು. ಆ ಸಮುದಾಯದವರು ಸೇರಿ ತಮ್ಮ ತಮ್ಮ ಸಮುದಾಯದ, ಜನರ ಸಮಸ್ಯೆಗಳ ಬಗ್ಗೆ, ಸೂಕ್ತ ಪ್ರಾತಿನಿದ್ಯಗಳ ಬಗ್ಗೆ ಚರ್ಚೆ ನಡೆಸ್ತಾರೆ. ಏನು ತಪ್ಪಿದೆ ಎಂದು ಪುನಃ ಪ್ರಶ್ನೆ ಕೇಳಿದ್ದಾರೆ.

ಬೆಳಗಾವಿ ಸಮಾವೇಶದಲ್ಲಿ ಎಲ್ಲಾ ಸಮುದಾಯದವರು ಕೂಡಿದ್ದಾರೆ. ನಾವೂ ಲಿಂಗಾಯತರು ಕೂಡಿರಲಿಲ್ಲ. ಅಜೆಂಡಾ ಏನಿಲ್ಲಾ. ನಮ್ಮ ಲಿಂಗಾಯತರಿಗೂ ನಮಗೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸೋನಿಯಾ ಗಾಂಧಿ ಅವರ ಮೇಲೆ, ರಾಹುಲ್ ಗಾಂಧಿ ಅವರ ಮೇಲೆ, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಆ ಮೀಟಿಂಗ್ ನಲ್ಲಿ ಏನು ಚರ್ಚೆ ಆಗಿಲ್ಲ. ಲಿಂಗಾಯತರು ಕೂಡ 34 ಶಾಸಕರು ಹೋಗಿದ್ದರು. ಬಿಗ್ಗೆಸ್ಟ್ ಸಂಖ್ಯೆ ಇರೋದೆ ಲಿಂಗಾಯತರು. ಇಲ್ಲಿ ಯಾರದ್ದು ವೈಯಕ್ತಿಕ ಬೇಡಿಕೆ ಇಲ್ಲ. ಸಮಾಜದ ದೃಷ್ಟಿಯಿಂದ ನಮ್ಮ ಪಾಲು ನಮಗೆ ಸಿಗಬೇಕು, ನಮ್ಮ ಶೇರು ನಮಗೆ ಸಿಗಬೇಕು. ವೈಯಕ್ತಿವಾದಂತ ಬೇಡಿಕೆ ಯಾವುದು ಇಲ್ಲ. ಈ ಬಾರಿ ಲಿಂಗಾಯತರೇ ಮೇಜರ್ ಆಗಿದ್ದೀವಿ. 57 ರಲ್ಲಿ 34 ಜನ ಗೆದ್ದಿದ್ದೀವಿ. ಬಿಜೆಪಿ 72 ಜನರಿಗೇನೋ ಕೊಟ್ಟಿತ್ತು. ಅದರಲ್ಲಿ 13 ಜನ ಗೆದ್ದಿದ್ದಾರೆ‌. ಅದು ಏನು ತೋರಿಸುತ್ತೆ ಕಾಂಗ್ರೆಸ್ ಕಡೆ ಜನ ವಾಲುತ್ತಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರೇಣುಕಾಸ್ವಾಮಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌: ಬೆದರಿಕೆ ಪ್ರಕರಣದ ಉದ್ಯಮಿ ಜೊತೆ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದೇಕೆ?

ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ: ಮಾಯಕೊಂಡ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದ ಬದ್ಧ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ

ಕಾವ್ಯ ಬರೆಯುವುದು, ಕಟ್ಟುವುದು ಹೃದಯಕ್ಕೆ ಸಂಬಂಧಿಸಿದ ಕೆಲಸ: ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ

ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದವನ ವಿರುದ್ಧ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು : ಬೊಮ್ಮಾಯಿ

ಬಾಂಗ್ಲಾದೇಶದಲ್ಲಿ ನಿವೃತ್ತ ಶಿಕ್ಷಕ ಸೇರಿ ಒಂದೇ ಕುಟುಂಬದ ನಾಲ್ವರ ಸಾವು : ಮನೆಯಲ್ಲಿ ಮೃತದೇಹಗಳು ಪತ್ತೆ.!