ಬೆಂಗಳೂರು: ಬರೀ ಕೇಂದ್ರ ಜಿಎಸ್ಟಿ, ರಾಜ್ಯ ಜಿಎಸ್ಟಿ ಕಟ್ಟಿ ಕಟ್ಟಿನೇ ಸುಸ್ತಾಗಿದ್ದ ರಾಜ್ಯದ ಜನತೆಗೆ ಸದ್ಯ ಗುಡ್ ನ್ಯೂಸ್ ಸಿಕ್ಕಿದೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಜಿಎಸ್ಟಿ ಪ್ರಾರಂಭ ಮಾಡುವಾಗಲೆ ಅಂದಿನ ಪ್ರಧಾನ ಮಂತ್ರಿಗಳು ಯೂನಿಫಾರ್ಮ್ ಜಿಎಸ್ಟಿ ತರಬೇಕು ಎಂಬುದರ ಬಗ್ಗೆ ಯೋಚನೆ ಚರ್ಚೆ ಮಾಡಿದ್ರು. ಅದು 28-30, 40ರ ತನಕ ಹೋಯ್ತು. ಯಾವ ಪದಾರ್ಥಗಳು ಸಾಮಾನ್ಯ ಜನರಿಗೆ ತಲುಪುತ್ತೆ ಆ ಪದಾರ್ಥಗಳಿಗೆ ಜಿಎಸ್ಟಿ ಇರಬಾರದು, ಇದ್ದರು ಕೂಡ ಸಾಮಾನ್ಯ ಜನರಿಗೆ ಕೈಗೆಟಕುವಂತೆ ಮಾಡಬೇಕು. ಆದರೆ ಅದಕ್ಕೂ ಕೂಡ ಇವರು 20-28% ಎಲ್ಲಾ ಜಿಎಸ್ಟಿ ಹಾಕುದ್ರು. ಈಗ ಅದನ್ನ ಕಡಿಮೆ ಮಾಡಿದ್ದಾರೆ ಅಂತ ಕೇಳ್ಪಟ್ಟೆವು.

ನಮ್ಮ ಪಕ್ಷದವರು ಕೂಡ ಈ ಹಿಂದೆ ಅನೇಕ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಪಾರ್ಲಿಮೆಂಟ್ ನಲ್ಲಿಯೂ ಪ್ರಸ್ತಾಪ ಮಾಡಿದ್ದಾರೆ, ಹೊರಗಡೆಯು ಮಾಡಿದ್ದಾರೆ. ಈಗ ಅವರಿಗೆ ಮನವರಿಕೆಯಾದಂತೆ ಕಾಣಿಸ್ತಾ ಇದೆ. ಅದನ್ನ ಸ್ವಾಗತ ಮಾಡ್ತೇನೆ. 5%, 0% ಎಲ್ಲಾ ಮಾಡಿದ್ದಾರೆ. ಅದು ಖುಷಿಯ ವಿಚಾರವೇ ಸರಿ. ಆದರೆ ಇನ್ನು ಕೆಲವೊಂದು ವಸ್ತುಗಳನ್ನ ಅಷ್ಟೇ ದರ ಇಟ್ಟಿದ್ದಾರೆ. ಅವುಗಳ ಕಡೆಗೂ ಗಮನ ಕೊಡಬೇಕು. ಬಹಳ ದೇಶಗಳಲ್ಲಿ 5%,6% ಮೇಲೆ ಹೋಗಿಲ್ಲ. ಆ ರೀತಿ ಎಲ್ಲಾ ದೇಶಗಳಲ್ಲೂ ಇದ್ದಂತೆ ಇಲ್ಲಿಯೂ ಜಾರಿಗೆ ಬರಬೇಕು. ಕೇಂದ್ರ ಸರ್ಕಾರಕ್ಕೆ ಹಣ ಬೇಕು, ಅಭಿವೃದ್ಧಿ ಆಗಬೇಕು. ಆದರೆ ಮತ್ತೆ ಈ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು ಎಂದಿದ್ದಾರೆ.


















