ಬೆಂಗಳೂರು: ಚುನಾವಣೆಗೂ ಮೊದಲು ಚಿತ್ರದುರ್ಗದಲ್ಲಿ ಒಂದು ಎಸ್ಸಿ/ಎಸ್ಟಿ ಸಮಾವೇಶವನ್ನು ಮಾಡಿದ್ದೆವು. ಆ ಸಂದರ್ಭದಲ್ಲಿ ಒಂದು ನುರ್ಣಯ ಮಾಡಿದ್ದೆವು. ಈ ಸದಾಶಿವ ಆಯೋಗದ ವರದಿಯನ್ನು ನಾವೂ ಎರಡು ಸದನದಲ್ಲಿ ಮಂಡಿಸುತ್ತೀವಿ ಎಂದು ನಿರ್ಧಾರ ಮಾಡಿದ್ದೆವು. ಅಧಿವೇಶನ ಆಗಿದ್ದು, ಚುನಾವಣೆಗೂ ಮೊದಲು. ಹಿಂದೆ ಬೊಮ್ಮಾಯಿ ಅವರು ಅದನ್ನು ಒಂದು ಸಮಿತಿ ಮಾಡಿ ಈ ವರದಿಯನ್ನು ರಿಜೆಕ್ಟ್ ಮಾಡಿದರು. ಬಳಿಕ ಬೇರೆ ವಿಷಯವನ್ನು ತೆಗೆದುಕೊಂಡು ಅವರು ಮೀಸಲಾತಿಯನ್ನು ಹೆಚ್ಚು ಮಾಡಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಅವರು ಒಳಮೀಸಲಾತಿಯಲ್ಲಿ ಇಷ್ಟು ಪರ್ಸೆಂಟ್ ಕೊಡಬೇಕು ಅಂತ ಎಲ್ಲಾ ಮಾಡಿದ್ದರು. ಅದು ಕಾನೂನಾತ್ಮಕವಾಗಿ ಆಗಿಲ್ಲ ಅದು. ಈಗ ಪುನರ್ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.
ಈಗ ಸರ್ಕಾರದಲ್ಲಿ ಒಂದು ನಿರ್ಧಾರ ಮಾಡಬೇಕಾಗುತ್ತದೆ. ಈಗಾಗಲೇ ಚರ್ಚೆಯಾಗಿದೆ. ಸಂಪುಟದಲ್ಲಿಯೇ ಅದನ್ನು ತಂದು ಮಾಡಬೇಕು. ಈಗ ಸದನಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ಅವರು ವರದಿಯನ್ನ ರಿಜೆಕ್ಟ್ ಮಾಡಿದ್ದಾರೆ. ಒಳಮೀಸಲಾತಿಗೆ ಕೈ ಹಾಕಿದ್ದ ಬಿಜೆಪಿ ಪೆಟ್ಟು ತಿಂದಿತ್ತು ಎಂಬ ಮಾತಿಗೆ ಉತ್ತರಿಸಿದ ಪರಮೇಶ್ವರ್, ನಾವಿಲ್ಲಿ ಪೆಟ್ಟು ತಿನ್ನುವ ಪ್ರಶ್ನೆಯೇ ಬರುವುದಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂಬುದಷ್ಟೇ ನಮ್ಮ ಗುರಿ. ಆ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಬೇಕು. ಅದು ಸರ್ಕಾರದ ಜವಬ್ದಾರಿ. ಟೀಕೆ ಟಿಪ್ಪಣಿಗಳು ಇರುತ್ತವೆ. ಅದಕ್ಕೆಲ್ಲಾ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ನಿಗಮ ಮಂಡಳಿಗಳ ಬಗ್ಗೆ ಮಾತನಾಡಿ, ಅವರಿಗೂ ಒಂದು ಅಧಿಕಾರ ಸಿಗಬೇಕು, ಸಮಾಜ ಸೇವೆ ಮಾಡಬೇಕು ಅಂತ ಇರುತ್ತೆ. ಎಲ್ಲರು ಮಂತ್ರಿ ಆಗುವುದಕ್ಕೆ ಆಗಲ್ಲ. ಮೂರು ಸಲ ನಾಲ್ಕು ಸಲ ಗೆದ್ದಿದ್ದಾರೆ ಕೆಲವ್ರು. ಅದನ್ನು ಅರಿತುಕೊಂಡಿರುವುದಕ್ಕೆ ಮಂಡಳಿಗಳಿಗೆ ನೇಮಕ ಮಾಡುವುದು. ಸದ್ಯದಲ್ಲಿಯೇ ಅದರ ನಿರ್ಣಯವಾಗುತ್ತದೆ ಎಂದಿದ್ದಾರೆ.