ಬೆಂಗಳೂರು: ಮಸೀದಿಗಳಲ್ಲಿನ ಧ್ವನಿವರ್ಧಕವನ್ನು ನಿಷೇಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಡ ಹಾಕುತ್ತಿವೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದು, ಹೈಕೋರ್ಟ್ ಆದೇಶವಿದೆ. ಡೆಸಿಬಲ್ ಎಷ್ಟು ಇರಬೇಕು ಅನ್ನೋದು ಆದೇಶದಲ್ಲಿದೆ. ಹಿಂದಿನ ಆದೇಶಗಳು ಏನಿದೆ ಅದೆಲ್ಲವನ್ನು ಹಂತ ಹಂತವಾಗಿ ಮಾಡುತ್ತಾ ಬರುತ್ತಿದ್ದೇವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಕೆಲಸವಿದು. ಯಾವುದೇ ರೀತಿಯ ಬಲವಂತವಾಗಿ ಮಾಡುವುದಿಲ್ಲ. ಗ್ರೌಂಡ್ ನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಹಲವಾರು ಸಂಘಟನೆಗಳನ್ನ ಪೊಲೀಸ್ ಠಾಣಾ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ಸಭೆಗಳನ್ನು ಈ ಹಿಂದೆಯೂ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ.
ಕುಮಾರಸ್ವಾಮಿ ಅವರು ಪ್ರತಿಭಟನರ ಮಾಡುವ ಹಕ್ಕಿದೆ. ಆದರೆ ಆಧಾರ ರಹಿತವಾದ ಹೇಳಿಕೆಗೆ ನಾನು ಉತ್ತರ ಕೊಡಲ್ಲ. ಬಿಜೆಪಿ ಸರ್ಕಾರಕ್ಕೆ ಕರ್ನಾಟಕ ಜನತೆಯ ಆಶೀರ್ವಾದವಿದೆ. ಇದರ ವಿಚಾರ ಇಟ್ಟುಕೊಂಡು ನಾವೂ ಆಡಳಿತ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚುಕಟ್ಟು ಆಡಳಿತ ನಡೆಸುತ್ತೇವೆ . ಕೆಲವೊಂದು ಹೇಳಿಕೆಗಳಿಂದ ಸಮಸ್ಯೆಗಳು ಪರಿಹಾರ ಆಗೋದಿಲ್ಲ. ಈಗಾಗಲೇ ಬಂದಿರುವ ಹಲವಾರು ವಿಚಾರಗಳು ಈ ಹಿಂದಿರುವ ವಿಚಾರಗಳೇ ಆಗಿವೆ. ಹೊಸ ವಿಚಾರವೇನಲ್ಲ.
ಈಗ ತೋರಿಸುತ್ತಿರುವ ವಿಚಾರಗಳು ಸಹ ಹಳೆಯ ಆದೇಶಗಳೇ. ನಾವೇನು ಹೊಸದಾಗಿ ಯಾವುದೇ ಆದೇಶ ಮಾಡಿಲ್ಲ. ಎಲ್ಲವನ್ನು ಕೂಡ ಗಮನದಲ್ಲಿಟ್ಟುಕೊಂಡು ಯಾವುದೇ ಸಮಾಜ ಆಗಲಿ, ಸಂಘಟನೆಯಾಗಲೀ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿಯುತವಾಗಿರುವಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಇಲ್ಲಿ ಎಲ್ಲರೂ ಸಮಾನರೆ, ಯಾವುದೇ ಬೇಧ ಭಾವ ಇರುವುದಿಲ್ಲ ಎಂದಿದ್ದಾರೆ.