Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಸೀದಿಗಳಲ್ಲಿ ಧ್ವನಿವರ್ಧಕ ವಿಚಾರದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಮಸೀದಿಗಳಲ್ಲಿನ ಧ್ವನಿವರ್ಧಕವನ್ನು ನಿಷೇಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಡ ಹಾಕುತ್ತಿವೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದು, ಹೈಕೋರ್ಟ್ ಆದೇಶವಿದೆ. ಡೆಸಿಬಲ್ ಎಷ್ಟು ಇರಬೇಕು ಅನ್ನೋದು ಆದೇಶದಲ್ಲಿದೆ. ಹಿಂದಿನ ಆದೇಶಗಳು ಏನಿದೆ ಅದೆಲ್ಲವನ್ನು ಹಂತ ಹಂತವಾಗಿ ಮಾಡುತ್ತಾ ಬರುತ್ತಿದ್ದೇವೆ.‌ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಕೆಲಸವಿದು. ಯಾವುದೇ ರೀತಿಯ ಬಲವಂತವಾಗಿ‌ ಮಾಡುವುದಿಲ್ಲ. ಗ್ರೌಂಡ್ ನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಹಲವಾರು ಸಂಘಟನೆಗಳನ್ನ ಪೊಲೀಸ್ ಠಾಣಾ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ಸಭೆಗಳನ್ನು ಈ ಹಿಂದೆಯೂ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ.

ಕುಮಾರಸ್ವಾಮಿ ಅವರು ಪ್ರತಿಭಟನರ ಮಾಡುವ ಹಕ್ಕಿದೆ. ಆದರೆ ಆಧಾರ ರಹಿತವಾದ ಹೇಳಿಕೆಗೆ ನಾನು ಉತ್ತರ ಕೊಡಲ್ಲ. ಬಿಜೆಪಿ ಸರ್ಕಾರಕ್ಕೆ ಕರ್ನಾಟಕ ಜನತೆಯ ಆಶೀರ್ವಾದವಿದೆ. ಇದರ ವಿಚಾರ ಇಟ್ಟುಕೊಂಡು‌ ನಾವೂ ಆಡಳಿತ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚುಕಟ್ಟು ಆಡಳಿತ ನಡೆಸುತ್ತೇವೆ . ಕೆಲವೊಂದು ಹೇಳಿಕೆಗಳಿಂದ ಸಮಸ್ಯೆಗಳು ಪರಿಹಾರ ಆಗೋದಿಲ್ಲ. ಈಗಾಗಲೇ ಬಂದಿರುವ ಹಲವಾರು ವಿಚಾರಗಳು ಈ ಹಿಂದಿರುವ ವಿಚಾರಗಳೇ ಆಗಿವೆ. ಹೊಸ ವಿಚಾರವೇನಲ್ಲ.

ಈಗ ತೋರಿಸುತ್ತಿರುವ ವಿಚಾರಗಳು ಸಹ ಹಳೆಯ ಆದೇಶಗಳೇ. ನಾವೇನು ಹೊಸದಾಗಿ ಯಾವುದೇ ಆದೇಶ ಮಾಡಿಲ್ಲ. ಎಲ್ಲವನ್ನು ಕೂಡ ಗಮನದಲ್ಲಿಟ್ಟುಕೊಂಡು ಯಾವುದೇ ಸಮಾಜ ಆಗಲಿ, ಸಂಘಟನೆಯಾಗಲೀ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿಯುತವಾಗಿರುವಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಇಲ್ಲಿ ಎಲ್ಲರೂ ಸಮಾನರೆ, ಯಾವುದೇ ಬೇಧ ಭಾವ ಇರುವುದಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗುಡುಗು, ಸಿಡಿಲು ಬಡಿತ: ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು

ಚಿತ್ರದುರ್ಗ. ಏ.25 : ಗುಡುಗು, ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳ ಸಂದರ್ಭದಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿ ತಿಳಿಸಿದ ನಿಯಮಗಳನ್ನು ಸಾರ್ವಜನಿಕರು ಚಾಚು ತಪ್ಪದೆ ಪಾಲನೆ ಮಾಡಬೇಕು

ಕಾಯಕ ಸಮುದಾಯ ಬಿ.ಎನ್.ಚಂದ್ರಪ್ಪ, ಪ್ರಭಾ ಮಲ್ಲಿಕಾರ್ಜನ್ ರವರನ್ನು ಬೆಂಬಲಿಸಲಿ : ಎನ್.ಡಿ.ಕುಮಾರ್ ಮನವಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ.25 : ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಎನ್.ಚಂದ್ರಪ್ಪ, ಮತ್ತು ದಾವಣಗೆರೆ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜನ್ ಅವರನ್ನು

ದೇಶದ ಅಭಿವೃದ್ಧಿಗಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ :  ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ. 25:  ದೇಶದ ಅಭಿವೃದ್ಧಿಗಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವ್ಯಕ್ತಿ ಮೇಲಿದೆ.

error: Content is protected !!