ಸೋಮವಾರ ಚಿಕ್ಕಮಗಳೂರಿನಲ್ಲಿ ಒಂದು ಅಪಘಾತ ನಡೆದಿತ್ತು. ಆ ಅಪಘಾತ ಮಾಡಿದ್ದು ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಇದ್ದ ಕಾರು. ಅಂದು ಅಪಘಾತ ಮಾಡಿ, ಬಿದ್ದ ವ್ಯಕ್ತಿಗೆ ಏನಾಯಿತು ಎಂದು ಕೇಳದೆ ಹೊರಟು ಹೋದರು ಎಂಬ ಆರೋಪ ಕೇಳಿ ಬಂದಿತ್ತು.
ಆದರೆ ಚಂದ್ರಪ್ರಭಾ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದರು. ಅವತ್ತು ಆ ವ್ಯಕ್ತಿ ಮದ್ಯಪಾನ ಮಾಡಿದ್ದರು. ಅಪಘಾತವಾದ ಮೇಲೆ ಪೊಲೀಸರ ಸಹಾಯ ತೆಗೆದುಕೊಂಡು ನಾನು ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ನಾನು ಶೂಟಿಂಗ್ ನಲ್ಲಿದ್ದು, ಪೊಲೀಸರಿಗೂ ಆ ಮಾಹಿತಿ ನೀಡಿದ್ದೀನಿ. ಹೆಚ್ಚಿನ ಚಿಕಿತ್ಸೆಗೂ ನಾನು ಸಹಾಯ ಮಾಡುತ್ತೀನಿ ಎಂದು ವಿಡಿಯೋ ಮಾಡಿ ಬಿಟ್ಟಿದ್ದರು. ಇದೀಗ ಅದೆಲ್ಲಾ ಉಲ್ಟಾ ಆಗಿದೆ. ವಿಚಾರವೇ ಬೇರೆಯಾಗಿದೆ.
ಇಂದು ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಚಂದ್ರಪ್ರಭಾ ಹೇಳಿದ್ದೇ ಬೇರೆ ರೀತಿಯಾಗಿದೆ. ಗಾಯಾಳು ಕುಟುಂಬಕ್ಕೆ ನೆರವಾಗುವುದಾಗಿ ತಿಳಿಸಿದ್ದಾರೆ. ಕಾರನ್ನು ನಾನೇ ಓಡಿಸುತ್ತಿದ್ದೆ. ಮೂಡಿಗೆರೆ ಅಕ್ಕಪಕ್ಕದಲ್ಲಿ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದೆ. 12 ಗಂಟೆ ಸುಮಾರಿಗೆ ಇಂಥದ್ದೊಂದು ಘಟನೆ ನಡೆದು ಹೋಗಿದೆ. ಕಾರು ಅಪಘಾತವಾದಾಗ ಗಾಯಾಳನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಆ ಸಮಯದಲ್ಲಿ ಗಾಯಾಳು ಮದ್ಯಪಾನ ಮಾಡಿದ್ದ ಎಂಬುದು ಸುಳ್ಳು ಎಂದು ಅವರೇ ಹೇಳಿದ್ದಾರೆ.
ದಯವಿಟ್ಟು ಕ್ಷಮೆ ಇರಲಿ. ನಾನು ಮಾನವೀಯತೆ ದೃಷ್ಟಿಯಿಂದ ನೋಡಬೇಕಿತ್ತು. ಅವರ ಕುಟುಂಬಸ್ಥರ ಜೊತೆಗೆ ಫೋನ್ ನಲ್ಲಿಯಾದರೂ ಮಾತನಾಡಬೇಕಿತ್ತು. ಆದರೆ ನಾನು ಅದನ್ನು ಕೂಡ ಮಾಡಲಿಲ್ಲ. ದಯವಿಟ್ಟು ಕ್ಷಮೆ ಇರಲಿ. ಅವರ ಕುಟುಂಬಸ್ಥರ ಜೊತೆಗೆ ನಿಲ್ಲುತ್ತೇನೆ. ಕಾನೂನು ಪ್ರಕಾರ ಎಲ್ಲಾ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.