Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಂದ್ರಪ್ರಭಾ ಆಕ್ಸಿಡೆಂಟ್ ಮಾಡಿದ ದಿನ ಹೇಳಿದ್ದೇ ಬೇರೆ, ಇಂದು ಕಣ್ಣೀರಾಕಿ ಹೇಳಿದ್ದೇ ಬೇರೆ : ಅಷ್ಟಕ್ಕೂ ಸತ್ಯ ಏನು ನೋಡಿ..!

---Advertisement---

ಸೋಮವಾರ ಚಿಕ್ಕಮಗಳೂರಿನಲ್ಲಿ ಒಂದು ಅಪಘಾತ ನಡೆದಿತ್ತು. ಆ ಅಪಘಾತ ಮಾಡಿದ್ದು ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಇದ್ದ ಕಾರು. ಅಂದು ಅಪಘಾತ ಮಾಡಿ, ಬಿದ್ದ ವ್ಯಕ್ತಿಗೆ ಏನಾಯಿತು ಎಂದು ಕೇಳದೆ ಹೊರಟು ಹೋದರು ಎಂಬ ಆರೋಪ ಕೇಳಿ ಬಂದಿತ್ತು.

ಆದರೆ ಚಂದ್ರಪ್ರಭಾ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದರು. ಅವತ್ತು ಆ ವ್ಯಕ್ತಿ ಮದ್ಯಪಾನ ಮಾಡಿದ್ದರು. ಅಪಘಾತವಾದ ಮೇಲೆ ಪೊಲೀಸರ ಸಹಾಯ ತೆಗೆದುಕೊಂಡು ನಾನು ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ನಾನು ಶೂಟಿಂಗ್ ನಲ್ಲಿದ್ದು, ಪೊಲೀಸರಿಗೂ ಆ ಮಾಹಿತಿ ನೀಡಿದ್ದೀನಿ. ಹೆಚ್ಚಿನ ಚಿಕಿತ್ಸೆಗೂ ನಾನು ಸಹಾಯ ಮಾಡುತ್ತೀನಿ ಎಂದು ವಿಡಿಯೋ ಮಾಡಿ ಬಿಟ್ಟಿದ್ದರು. ಇದೀಗ ಅದೆಲ್ಲಾ ಉಲ್ಟಾ ಆಗಿದೆ. ವಿಚಾರವೇ ಬೇರೆಯಾಗಿದೆ.

ಇಂದು ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಚಂದ್ರಪ್ರಭಾ ಹೇಳಿದ್ದೇ ಬೇರೆ ರೀತಿಯಾಗಿದೆ. ಗಾಯಾಳು ಕುಟುಂಬಕ್ಕೆ ನೆರವಾಗುವುದಾಗಿ ತಿಳಿಸಿದ್ದಾರೆ. ಕಾರನ್ನು ನಾನೇ ಓಡಿಸುತ್ತಿದ್ದೆ. ಮೂಡಿಗೆರೆ ಅಕ್ಕಪಕ್ಕದಲ್ಲಿ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದೆ. 12 ಗಂಟೆ ಸುಮಾರಿಗೆ ಇಂಥದ್ದೊಂದು ಘಟನೆ ನಡೆದು ಹೋಗಿದೆ‌. ಕಾರು ಅಪಘಾತವಾದಾಗ ಗಾಯಾಳನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಆ ಸಮಯದಲ್ಲಿ ಗಾಯಾಳು ಮದ್ಯಪಾನ ಮಾಡಿದ್ದ ಎಂಬುದು ಸುಳ್ಳು ಎಂದು ಅವರೇ ಹೇಳಿದ್ದಾರೆ.

ದಯವಿಟ್ಟು ಕ್ಷಮೆ ಇರಲಿ. ನಾನು ಮಾನವೀಯತೆ ದೃಷ್ಟಿಯಿಂದ ನೋಡಬೇಕಿತ್ತು. ಅವರ ಕುಟುಂಬಸ್ಥರ ಜೊತೆಗೆ ಫೋನ್ ನಲ್ಲಿಯಾದರೂ ಮಾತನಾಡಬೇಕಿತ್ತು. ಆದರೆ ನಾನು ಅದನ್ನು ಕೂಡ ಮಾಡಲಿಲ್ಲ. ದಯವಿಟ್ಟು ಕ್ಷಮೆ ಇರಲಿ. ಅವರ ಕುಟುಂಬಸ್ಥರ ಜೊತೆಗೆ ನಿಲ್ಲುತ್ತೇನೆ. ಕಾನೂನು ಪ್ರಕಾರ ಎಲ್ಲಾ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...