ನವದೆಹಲಿ: ತಮಿಳುನಾಡು ಕಾವೇರಿಗಾಗಿ ಪದೇ ಪದೇ ಕ್ಯಾತೆ ತೆಗಯುತ್ತಲೆ ಇದೆ. ಕರ್ನಾಟಕದಲ್ಲಿ ಮಳೆ ಇಲ್ಲದೆ ಹೋದರೂ ನಮಗೆ ಬರಬೇಕಾದ ನೀರನ್ನು ಬಿಡಬೇಕು ಎಂದು ಕೇಳಿದೆ. ಹೀಗಾಗಿ ಈ ಸಂಬಂಧ ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದೆ.
ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ ತ್ರಿ ಸದಸ್ಯ ಪೀಠವೂ ಕೆಲವು ಸೂಚನೆಗಳನ್ನು ನೀಡಿ, ಸೆಪ್ಟೆಂಬರ್ 1ಕ್ಕೆಅರ್ಜಿ ವಿಚಾರಣೆ ಮೂಂದೂಡಿಕೆ ಮಾಡಿದೆ. ಇಂದು ತಮಿಳುನಾಡು ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಬಿ. ಆರ್. ಗವಾಯಿ, ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಬಿ. ಕೆ. ಮಿಶ್ರಾ ಒಳಗೊಂಡ ತ್ರಿ ಸದಸ್ಯಪೀಠದಲ್ಲಿ ನಡೆದಿದೆ.
ಸುಪ್ರೀಂ ಕೋರ್ಟ್, ಮಧ್ಯಂತರ ಅವಧಿಯೊಳಗೆ ಕಾವೇರಿ ನದಿ ಪಾತ್ರದ ರಾಜ್ಯಗಳ ಸಭೆ ನಡೆಸುವಂತೆ, ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಈ ಸಂಬಂಧ ಸೆಪ್ಟೆಂಬರ್ 28 ರಂದು ಈ ಸಂಬಂಧ ಸಭೆ ನಡೆಯಲಿದೆ. ಸಭೆ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಅರ್ಜಿ ವಿಚಾರಣೆ ನಡೆಸಲಾಗುತ್ತದೆ.
ಕರ್ನಾಟಕದಲ್ಲಿ ಮಳೆಯ ಪ್ರಮಾಣವೇ ಕುಸಿದಿದೆ. ಹೀಗಿರುವಾಗ ಇರುವ ಜಲಾಶಯಗಳೆಲ್ಲಾ ಭತ್ತಿ ಹೋಗುತ್ತಿದೆ. ಆದ್ರೆ ಕಾವೇರಿ ನದಿ ನೀರಿಗಾಗಿ ತಮಿಳುನಾಡು ಅರ್ಜಿ ಸಲ್ಲಿಕೆ ಮಾಡಿದೆ. ಮಳೆ ಇಲ್ಲದ ಕಾರಣ ನೀರು ಬಿಡುವುದಕ್ಕೆ ಕರ್ನಾಟಕ, ಆಗಲ್ಲ ಎಂದು ಅರ್ಜಿ ಸಲ್ಲಿಕೆ ಮಾಡಿದೆ.