ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ.
ಇನ್ನು ಅಡುಗೆ ಮನೆಯಲ್ಲಂತು ಕಡಲೇ ಬೀಜದ ಡಬ್ಬವೇ ಇದ್ದೇ ಇರುತ್ತದೆ. ರಾತ್ರಿ ನೆನೆಸಿ, ಬೆಳಗ್ಗೆ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲವಾಗಲಿದೆ.
* ಸಣ್ಣ ಇರುವವರು ತೂಕ ಹೆಚ್ಚು ಮಾಡಿಕೊಳ್ಳಬೇಕೆಂದು ಜಿಮ್ ಗೆ ಹೋಗುವುದೇ ಹೆಚ್ಚು. ಆರೋಗ್ಯಕರವಾಗಿ ತೂಕ ಹೆಚ್ಚಾಗಬೇಕು ಎಂದರೆ ರಾತ್ರಿ ನೆನೆಸಿಟ್ಟ ಕಡಲೇಕಾಯಿ ಬೀಜವನ್ನು ಬೆಳಗ್ಗೆ ತಿನ್ನಬೇಕಾಗುತ್ತದೆ.
* ಕೂದಲು ಉದುರುವುದು ಎಷ್ಟೋ ಜನರಿಗೆ ತಲೆ ನೋವಾಗಿದೆ. ನೀರಿನ ಸಮಸ್ಯೆ, ಶಾಂಪೂ ಬದಲಾವಣೆಯಿಂದ ಕೂದಲ ಉದುರುವಿಕೆ ಕಂಡು ಬರುತ್ತದೆ. ಆ ಸಮಸ್ಯೆಗೆ ಪರಿಹಾರ ನೆನೆಸಿಟ್ಟ ಕಡಲೇಕಾಯಿ ಬೀಜ
* ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ಕಾಸ್ಮೆಟಿಕ್ ಮೊರೆ ಹೋಗುತ್ತೇವೆ. ಆದರೆ ಇದು ಅಡುಗೆ ಮನೆಯ ಡಬ್ಬದಲ್ಲಿಯೇ ಸಿಗಲಿದೆ. ರಾತ್ರಿ ಕಡಲೆ ಕಾಯಿ ಬೀಜ ನೆನೆಸಿಟ್ಟು ಬೆಳಗ್ಗೆ ತಿನ್ನುವುದರಿಂದ ತ್ವಜೆ ಹೊಳೆಯುತ್ತದೆ.
* ಜ್ಞಾಪಕ ಶಕ್ತಿ ಹೆಚ್ಚು ಮಾಡಲು ಶೇಂಗಾ ಬೆಸ್ಟ್. ಇದನ್ನು ತಿನ್ನುತ್ತಾ ಬಂದರೆ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತಾ ಬರುತ್ತದೆ.