ಮೈಸೂರು: ಪಿಎಸ್ಐ ನೇಮಕಾತಿಯನ್ನೇ ರದ್ದು ಮಾಡಿದ್ರಲ್ಲ ಈಗ ಪ್ರಾಮಾಣಿಕವಾಗಿ ಬರೆದವರ ಕಥೆ ಏನಾಗಬೇಕು. ಇದಕ್ಕೆ ಸರ್ಕಾರವೇ ಹೊಣೆ. ಈ ಸರ್ಕಾರ ಭ್ರಷ್ಟರ ಸರ್ಕಾರ. ಅದಕ್ಕೆ ಇಂಥವೆಲ್ಲಾ ಆಗುತ್ತವೆ. ನಮ್ಮ ಕಾಲದಲ್ಲಿ ಸಬ್ ಇನ್ಸ್ಪೆಕ್ಟರ್ ಗಳ ಆಯ್ಜೆಯಾಗಿರಲಿಲ್ಲವ. ಹಾಗೆಲ್ಲಾ ಈ ರೀತಿ ನಡೆದಿತ್ತಾ..?. ಎರೆಉ ವರ್ಷ ಕಾದು ಪರೀಕ್ಷೆ ಬರೆದು ಸೆಲೆಕ್ಟ್ ಆದವರ ಗತಿ ಏನಾಗಬೇಡ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಆ್ಯಸಿಡ್ ಒಂದೇ ಪ್ರಕರಣ ಅಲ್ಲ ಅನೇಕ ಪ್ರಕರಣದಲ್ಲಿ ಹೋಂ ಮಿನಿಸ್ಟರ್ ಫೇಲ್ ಆಗಿದ್ದಾರೆ. ಮೈಸೂರಲ್ಲಿ ನಡೆದಿತ್ತಲ್ಲ ಗ್ಯಾಂಗ್ ರೇಪ್ ಅಂದಿನಿಂದ ಇಂದಿನವರೆಗೂ ಎಲ್ಲಾ ಪ್ರಕರಣದಲ್ಲೂ ಹೋಂ ಮಿನಿಸ್ಟರ್ ಫೇಲ್ ಆಗಿದ್ದಾರೆ. 144 ಸೆಕ್ಷನ್ ಹಾಕುತ್ತಾರೆ. ಅವರ ಮಂತ್ರಿಗಳೇ ಬ್ರೇಕ್ ಮಾಡುತ್ತಾರೆ. ಯಾವ ಆಕ್ಷನ್ ತೆಗೆದುಕೊಂಡ್ರಿ. ಸರ್ಕಾರದಲ್ಲಿ ವೀಕ್ ಹೋಂ ಮಿನಿಸ್ಟರ್, ವೀಕ್ ಚೀಫ್ ಮಿನಿಸ್ಟರ್ ಇದ್ದಾರೆ.
ಬಿ ಎಲ್ ಸಂತೋಷ್ ನಾಯಕತ್ವ ಬದಲಾವಣೆಯೇ ಬಿಜೆಪಿ ಶಕ್ತಿ ಎಂಬ ಹೇಳಿಕೆ ನೀಡಿ ಸಿಎಂ ಬದಲಾವಣೆಯ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವೆಉ, ಅದಕ್ಕೆ ಬಸವರಾಜ್ ಅವರನ್ನು ಬದಲಾಯಿಸಬೇಕು ಅಂದುಕೊಳ್ಳುತ್ತಿದ್ದಾರೆ. ಯಾಕೆಂದರೆ ಬಸವರಾಜ್ ಆರ್ ಎಸ್ ಎಸ್ ನವನಲ್ಲ. ಮೂಲ ಆರ್ ಎಸ್ ಎಸ್ ಅಲ್ಲ. ನಮ್ಮ ಜೊತೆಯಲ್ಲೆ ಇದ್ದವನು. ನಾವೂ ಹೇಳಿದ್ವಾ ಬಿಜೆಪಿಗೆ ಹೋಗುವುದಕ್ಕೆ ಅಂತ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹಾಸ್ಯಮಯವಾಗಿ ಮಾತನಾಡಿದ್ದಾರೆ.