2024ರಲ್ಲಿ ನಾವೇ ಅಧಿಕಾರಕ್ಕೆ ಬರ್ತೇವೆ : ಒಂದಾದ ವಿಕ್ಷಗಳಿಗೆ ಮೋದಿ ಖಡಕ್ ಉತ್ತರ

 

ನವದೆಹಲಿ: ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ, ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು, ನಾವೂ ಮತ್ತೆ ಅಧಿಕಾರಕ್ಕೆ ಬರುತ್ತೀವಿ ಎಂದೇ ಖಡಕ್ ಉತ್ತರ ನೀಡಿದ್ದಾರೆ.

ಕಳೆದ ಮೂರು ದಿನದಿಂದ ಸಂಸತ್ ನಲ್ಲಿ ಹಲವರು ಮಾತನಾಡಿದ್ದಾರೆ. ದೇಶದ ಜನತೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ವಿರೋಧ ಪಕ್ಚಗಳು ಅಧಿಕಾರ ಪಡೆಯುವ ದಾಹದಲ್ಲಿವೆ. ಆದರೆ 2024ರಲ್ಲಿ ಎಲ್ಲಾ ದಾಖಲೆ ಮುರಿದು ಮತ್ತೆ ಅಧಿಕಾರಕ್ಕೆ ಬರುತ್ತೀವಿ.

ನಮಗೆ ಭಗವಂತನ ಮೇಲೆ ನಂಬಿಕೆ ಇದೆ. ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ನಮ್ಮ ವಿರೋಧವಿಲ್ಲ. 2018ರಲ್ಲೂ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದು ನಿಮ್ಮ ನಡುವಿನ ವಿಶ್ವಾಸದ ಪ್ರಸ್ತಾವನೆಯಾಗಿದೆ. ಅವಿಶ್ವಾಸ ಪ್ರಸ್ತಾವನೆ ನಮ್ಮ ಪಾಲಿಗೆ ಶುಭವೇ ಆಗಲಿದೆ. ಎನ್‌ಡಿಎ ಬಲವೇ ಇಂಡಿಯಾದ ಬಲವಾಗಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *