Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರೈತರು ನಮ್ಮ ಕಷ್ಟ ಅರ್ಥ ಮಾಡ್ಕೊಳ್ಳಲಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಹೆಬ್ಬಾಳ್ಕರ್
---Advertisement---

ಬೆಂಗಳೂರು : ಶುಗರ್ ಫ್ಯಾಕ್ಟರಿಗಳನ್ನ ಹೊಂದಿರುವವರಲ್ಲಿ ಹೆಚ್ಚಿನದಾಗಿ ರಾಜಕಾರಣಿಗಳೇ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಎಲ್ಲಾ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೇನೆ ನೀಡಲಾಗಿದೆ. ಸಂಪುಟ ಸಭೆ ಮುಗಿಸಿಕೊಂಡು ಹೊರಗೆ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ರೈತರು ನಮ್ಮ ಕಷ್ಟವನ್ನ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಶುಗರ್ ಫ್ಯಾಕ್ಟರಿ ಓನರ್ ಆದ್ರೂ ಕೂಡ ನಾವೂ ರೈತರೆ. ರೈತರ ಸಂಕಷ್ಟ ನಮಗೂ ಅರ್ಥವಾಗುತ್ತೆ. ನಮಗೂ ಏನು ತಿಂದರೆ ಇದೆ ಎಂಬುದನ್ನ ಅವರು ಅರ್ಥ ಮಾಡ್ಕೊಬೇಕು ಎಂಬುದೇ ನಮ್ಮ ಕಾಳಜಿ. ಯಾರಿಗೂ ಅನ್ಯಾಯ ಆಗುವುದಕ್ಕೆ ಬಿಡಲ್ಲ. ಮಾನ್ಯ ಮುಖ್ಯಮಂತ್ರಿಗಳು ಸಂಪೂರ್ಣವಾಗಿ ಇದರ ಬಗ್ಗೆ ಮಾಹಿತಿ ನೀಡ್ತಾರೆ. ನಮ್ಮ ರಾಜ್ಯದ ಜವಾಬ್ದಾರಿ ಏನು..? ಕೇಂದ್ರದ ಜವಾಬ್ದಾರಿ ಏನು..? ಕೇಂದ್ರ ಸರ್ಕಾರ ಏನೆಲ್ಲಾ ಫಿಕ್ಸ್ ಮಾಡ್ತಾರೆ ಎಂಬುದೆಲ್ಲವನ್ನು ಮುಖ್ಯಮಂತ್ರಿ ಅವರೇ ಹೇಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಸಚಿವ ಸಂಪುಟದಲ್ಲಿ ಏನೆಲ್ಲಾ ಆಯ್ತು ಎಂಬುದನ್ನ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಲಿದ್ದಾರೆ. ಬೆಳಗಾವಿಯಲ್ಲಿ ಮಾತ್ರ ಕಬ್ಬು ಬೆಳೆಗಾರರು ಪ್ರತಿಭಟನೆ ಆರಂಭಿಸಿದ್ದರು. ಆದರೆ ಈಗ ನಾನಾ ಭಾಗದಲ್ಲಿ ರೈತರು ಬೆಂಬಲ ಬೆಲೆ ಕೋರಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನದ ಮೇಲೆ ರೈತರ ನಿರ್ಧಾರವೂ ನಿಂತಿರುತ್ತೆ. ಬಿಜೆಪಿ ನಾಯಕರು ಬೆಂಬಲ ನೀಡುತ್ತಿರುವುದಕ್ಕೆ ಗರಂ ಆಗಿರುವ ಕಾಂಗ್ರೆಸ್ ನಾಯಕರು, ಕೇಂದ್ರಕ್ಕೆ ಇದನ್ನ ತಿಳಿಸಿ, ಸರಿ ಮಾಡಬೇಕು ಅಲ್ವಾ ಎನ್ನುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...