Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ನಾವೂ 75 ಅಲ್ಲ 1 ಕೋಟಿಗೂ ಅಧಿಕ ಜನಸಂಖ್ಯೆ ಇದ್ದೇವೆ, ವಿಧಾನಸೌಧ ಬಿಟ್ಟುಕೊಡಿ ಅಂದ್ವಾ..? ಸಿಎಂ ಇಬ್ರಾಹಿಂ ಹೇಳಿದ್ದೇನು..?

---Advertisement---

ಜಾತಿ ಗಣತಿ ವರದು ರಾಜ್ಯದಲ್ಲಿ ಭುಗಿಲೆದ್ದ ವಾತಾವರಣ ನಿರ್ಮಾಣ‌ ಮಾಡಿದೆ. ಬಹಿರಂಗವಾದ ವರದಿಯ ಪ್ರಕಾರ ಮುಸ್ಲಿಂ ಸಮುದಾಯದವರು 75 ಲಕ್ಷ ಇದ್ದಾರೆ ಎಂದು ತೋರಿಸಲಾಗುತ್ತಿದೆ. ಉಳಿದಂತೆ ಹಿಂದೂ ಸಮುದಾಯದಲ್ಲಿರುವ ಜಾತಿಗಳಲ್ಲಿ ಲಿಂಗಾಯತ ಸಮುದಾಯವೇ ಮುಸ್ಲಿಮರಿಗಿಂತ ಕಡಿಮೆ ಇದೆ. ಇದನ್ನ ಎಲ್ಲರೂ ವಿರೋಧಿಸುತ್ತಿರುವಾಗಲೇ ಸಿ.ಎಂ.ಇಬ್ರಾಹಿಂ ಇದರ ಬಗ್ಗೆ ಮಾತನಾಡಿದ್ದಾರೆ. ನಾವೂ 75 ಲಕ್ಷ ಅಲ್ಲ ಇರೋದು 1 ಕೋಟಿ ಅಂತ ಹೇಳಿದ್ದಾರೆ.

ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿದೆ. ನಾವೀಗ ಇರೋದು 75 ಲಕ್ಷವಲ್ಲ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇದ್ದೇವೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಸಮೀಕ್ಷೆ ನಡೆಸಿಯೇ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ವರದಿಗೆ ವಿರೋಧ ಯಾಕೆ ಮಾಡ್ತಾ ಇದಾರೆ ಅನ್ನೋದು ಅರ್ಥ ಆಗ್ತಾ ಇಲ್ಲ. ಏನೋ ಜಾತಿ ಆಧಾರದ ಮೇಲೆ ಪಾರ್ಲಿಮೆಂಟ್ ಸೀಟನ್ನ ಕೊಡುವುದಾದರೇ ವಿರೋಧ ಮಾಡಲಿ. ಸುಮ್ಮನೆ ವರದಿಯನ್ನ ವಿರೋಧಿಸುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ.

ವರದಿಯ ಪ್ರಕಾರ 75 ಲಕ್ಷ ಜನಸಂಖ್ಯೆ ಇದೆ. ಆದರೆ 7‌ ಜನ ಮಾತ್ರ ಶಾಸಕರಿದ್ದಾರೆ. ಈ ವರದಿ ಖುಷಿಯೂ ಇಲ್ಲ ದುಃಖವೂ ಇಲ್ಲ. ಈಗ ಕುಮಾರಸ್ವಾಮಿಗೆ ಒಬ್ಬನೇ ಮಗ ನನಗೆ ಒಂಭತ್ತು ಜನ ಮಕ್ಕಳು. ಹಾಗಂತ ನನಗೆ ಒಬ್ಬನೇ ಮಗ ಅಂತ ಹೇಳೋಕೆ ಆಗುತ್ತಾ. ಯಾರೋ ಅಂಗಡಿ ತೆರೆದಿದ್ದಾರೆ ಒಳ್ಳೆಯದು ಆಗಲಿ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಈಗ ಇಷ್ಟೊಂದು ಜನ ಇದ್ದೀವಿ ಅಂತ ನಾವೇನಾದ್ರೂ ವಿಧಾನಸೌಧ ಬಿಟ್ಟುಕೊಡಿ ಅಂತ ಕೇಳಿದ್ವಾ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment