ಬೆಂಗಳೂರು: ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಧರ್ಮಸ್ಥಳದ ಬಗ್ಗೆ ಮಾತನಾಡಿದ್ದಾರೆ. ವೀರೇಂದ್ರ ಹೆಗ್ಗಡೆಯವರ ಜೊತೆಗೆ ನಾವಿದ್ದೇವೆ ಎಂದಿದ್ದಾರೆ.
ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದ ಶ್ರೀಜ್ಷೇತ್ರದ ಬಗ್ಗೆ, ಆಗಿರುವಂತ ಅಪಮಾನ ಹಾಗೂ ಹಲವಾರು ಅನುಮಾನಗಳಿಗೆ ಎಡೆ ಮಾಡಿ ಕೊಡುವಂತದ್ದಕ್ಕೆ. ಸರ್ಕಾರ ತನ್ನ ಹೆಜ್ಜೆಯನ್ನ ಯಾವ ರೀತಿ ಇಟ್ಟುದೆ ಅನ್ನೋದನ್ನ ನೋಡಿಕೊಂಡು ಬಂದಿದ್ದೇವೆ. ಎಸ್ಐಟಿ ಧರ್ಮಸ್ಥಳದ ವಿಚಾರವಾಗಿ ತರಾತುರಿಯಲಗಲಿ, ಬಹಳ ಉತ್ಸಾಹಕತೆಯಿಂದ, ಬೇರೆ ಪ್ರಕರಣದಲ್ಲೂ ತರಾತುರಿಯಲ್ಲಿ ಎಸ್ಐಟಿ ರಚನೆ ಮಾಡಿದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ.
ಧರ್ಮಸ್ಥಳದ ವಿಚಾರವಾಗಿ ಒಂದು ಸಂಘಟಿತ ಮತ್ತು ವ್ಯವಸ್ಥಿತವಾದ ಪಿತೂರಿ ಮುನ್ನಲೆಗೆ ಬಂದಿರುವಂತದ್ದು, ಎಸ್ಐಟಿ ರಚನೆಯಾದ ನಂತರ. ಮೊದಲನೇಯದಾಗಿ ಎಸ್ಐಟಿ ಯಾತಕ್ಕೋಸ್ಕರ ರಚನೆ ಆಯ್ತು ಅನ್ನೋದು ನಮ್ಮೆಲ್ಲರನ್ನು ಕಾಡ್ತಾ ಇದೆ. ಅನಾಮಧೇಯ ವ್ಯಕ್ತಿ ಬಂದು, ಒಂದು ಬುರುಡೆ ಇದೆ. ಮಾಸ್ ಮರ್ಡರ್ ಗಳು ಅಲ್ಲಿ ನಡೆದಿವೆ ಎಂದು ಹೇಳಿದ ಕೂಡಲೇ ಎಸ್ಐಟಿ ರಚನೆ ಮಾಡ್ತಾರೆ. ಸರ್ಕಾರ ಯಾರೋ ಒಬ್ಬ ಇಬ್ಬ ಕೊಟ್ಟಂತ ದೂರಿನ ಮೇಲೆ ಧರ್ಮಸ್ಥಳ ಸುಮಾರು 700-800 ವರ್ಷದ ಇತಿಹಾಸವುಳ್ಳ ಧರ್ಮಸ್ಥಳ. ಅಸಂಖ್ಯಾತ ಭಕ್ತರು. ನಾವೂ ಅದನ್ನ ಲೆಕ್ಕ ಮಾಡುವುದಕ್ಕೂ ಆಗಲ್ಲ. ಆ ಭಕ್ತರಲ್ಲಿ ನಾನು ಕೂಡ ಒಬ್ಬ.
ಇದರ ಹಿಂದೆ ದೊಡ್ಡ ಪಿತೂರಿಯೇ ಅಡಗಿದೆ ಅನ್ನೋದು ಎಲ್ಲರನ್ನು ಕಾಡುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಡೆ ಹಾಗೂ ಅವರ ಕುಟುಂಬ ಕಳೆದ ಒಂದೂವರೆ ತಿಂಗಳಿನಿಂದ ನೋವಾದರೂ ಕೂಡ, ತಾಳ್ಮೆಯಿಂದ, ಗೌರವಯುತವಾಗಿ ನಡೆದುಕೊಂಡಿರುವುದನ್ನ ನಾವೆಲ್ಲಾ ಗೌರವಿಸಬೇಕು. ಅವರ ಜೊತೆಗೆ ನಾವೂ ಸದಾ ಇರ್ತೇವೆ ಎಂದಿದ್ದಾರೆ.




