Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH : ಸಾರ್ವಜನಿಕ ಸಭೆಯಲ್ಲೇ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಗೆ ಮಸಿ ಬಳಿದ ಮಹಿಳೆ: ವಿಡಿಯೋ ಭಾರಿ ವೈರಲ್!

---Advertisement---

ದೆಹಲಿ.ಜುಲೈ.18: ರಾಜಧಾನಿ ನವದೆಹಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಲ್ಲಣ ಮೂಡಿಸುವ ಘಟನೆಯೊಂದು ಸಂಭವಿಸಿದೆ. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕರಾದ ಅಭಿಜೀತ್ ದಿಪ್ಕೆ ಅವರ ಮುಖಕ್ಕೆ ಅಪರಿಚಿತ ಮಹಿಳೆಯೊಬ್ಬರು ಸಾರ್ವಜನಿಕರ ಸಮ್ಮುಖದಲ್ಲೇ ನೀಲಿ ಮಸಿ ಎರಚಿದ್ದಾರೆ. ಸದ್ಯ ಈ ಆಘಾತಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ವೇದಿಕೆಯಲ್ಲಿ ಅಭಿಜೀತ್ ದಿಪ್ಕೆ ಅವರು ಮೈಕ್ರೋಫೋನ್ ಹಿಡಿದು ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಭಿಕರ ಮಧ್ಯೆ ಹೊಂಚು ಹಾಕಿ ಕುಳಿತಿದ್ದ ಮಹಿಳೆಯೊಬ್ಬರು, ದಿಢೀರನೆ ಮುನ್ನುಗ್ಗಿ ಅವರ ಮುಖಕ್ಕೆ ನೀಲಿ ಮಸಿಯನ್ನು ಎರಚಿದ್ದಾರೆ. ಮಸಿಯ ಹನಿಗಳು ದಿಪ್ಕೆ ಮಾತ್ರವಲ್ಲದೆ ಅವರ ಸುತ್ತಮುತ್ತ ನಿಂತಿದ್ದ ಇತರರ ಮೇಲೂ ಬಿದ್ದಿದೆ. ಈ ಹಠಾತ್ ಬೆಳವಣಿಗೆಯಿಂದ ಕಾರ್ಯಕ್ರಮದಲ್ಲಿದ್ದವರು ಒಂದು ಕ್ಷಣ ದಂಗಾಗಿದ್ದು, ಸ್ಥಳದಲ್ಲಿ ತಳ್ಳಾಟ-ನೂಕಾಟ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

 

ಮುಖಕ್ಕೆ ಮಸಿ ಬಳಿದ ಘಟನೆಯನ್ನು ಅತ್ಯಂತ ವಿಭಿನ್ನವಾಗಿ ಎದುರಿಸಿರುವ ಅಭಿಜೀತ್ ದಿಪ್ಕೆ, ಆ ವಿಡಿಯೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ನೀಲಿ ನನ್ನ ಬಣ್ಣ… ಜೈ ಭೀಮ್!” ಎಂಬ ಕ್ಯಾಪ್ಷನ್ ಬರೆಯುವ ಮೂಲಕ ತಮಗೆ ಮಸಿ ಬಳಿದವರಿಗೆ ತಿರುಗೇಟು ನೀಡಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತ ಹಾಗೂ ಬಹುಜನ ಚಳವಳಿಯಲ್ಲಿ ನೀಲಿ ಬಣ್ಣಕ್ಕೆ ವಿಶೇಷ ಗೌರವವಿರುವುದರಿಂದ, ಈ ಘಟನೆಯನ್ನು ಅವರು ಧನಾತ್ಮಕವಾಗಿ ಬಿಂಬಿಸಲು ಯತ್ನಿಸಿದ್ದಾರೆ.

ಸದ್ಯ ಇಂಟರ್ನೆಟ್ನಲ್ಲಿ ಈ ವಿಡಿಯೋ ಸಖತ್ ಸೌಂಡ್ ಮಾಡುತ್ತಿದ್ದು, ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಆದರೆ ಈ ಕೃತ್ಯ ಎಸಗಿದ ಮಹಿಳೆ ಯಾರು ಮತ್ತು ಆಕೆ ಮಸಿ ಎರಚಲು ನಿಖರ ಕಾರಣವೇನು ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ. ಘಟನೆಯ ಕುರಿತು ಯಾವುದೇ ಅಧಿಕೃತ ದೂರು ಅಥವಾ ತನಿಖೆಯ ವರದಿ ಹೊರಬೀಳದ ಹಿನ್ನೆಲೆಯಲ್ಲಿ, ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಇನ್ನೂ ಯಾವುದೇ ದೃಢೀಕರಣ ಸಿಕ್ಕಿಲ್ಲ.

Join WhatsApp

Join Now

Join Telegram

Join Now